ಭಾನುವಾರ, ಏಪ್ರಿಲ್ 27, 2025
HomeCinemaತಾಯಿಯ ಕ್ರಿಯೆಯಂದು ಭಾವುಕರಾದ ನಟಿ ಮಾನ್ವಿತಾ ಕಾಮತ್‌

ತಾಯಿಯ ಕ್ರಿಯೆಯಂದು ಭಾವುಕರಾದ ನಟಿ ಮಾನ್ವಿತಾ ಕಾಮತ್‌

- Advertisement -

ಕೆಂಡ ಸಂಪಿಗೆ ಸಿನಿಮಾ ನಟಿ ಮಾನ್ವಿತಾ ಕಾಮತ್‌ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಅಭಿನಯ ಚಾತುರ್ಯವನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ನಟಿ ಮಾನ್ವಿತಾ ಕಾಮತ್‌ ತನ್ನ ತಾಯಿಯನ್ನು (Manvitha Kamath’s mother passed away) ಕಳೆದುಕೊಂಡಿದ್ದಾರೆ. ಸದ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾಯಿಯ 14ನೇ ದಿನದ ಕ್ರಿಯೆಯ ಕ್ಷಣಗಳನ್ನು ಬಹಳ ಭಾವುಕ ಸಾಲುಗಳೊಂದಿಗೆ ಹಂಚಿಕೊಂಡಿದ್ದಾರೆ.

ನಟಿ ಮಾನ್ವಿತಾ ತಾಯಿ ಸುಜಾತಾ ಕಾಮತ್‌ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅವರಿಗೆ ಕಿಟ್ನಿ ಕಸಿ ಕೂಡ ಮಾಡಲಾಗಿತ್ತು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸುಜಾತಾಗೆ ಚಿಕಿತ್ಸೆ ನೀಡಲಾಗುತ್ತಿತ್ತು ತಾಯಿಯನ್ನು ಉಳಿಸಿಕೊಳ್ಳಲು ಮಗಳು ಮಾನ್ವಿತಾ ಕಾಮತ್‌ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಆದರೆ, ಮಗಳ ಪ್ರಯತ್ನಕ್ಕೆ ತಾಯಿ ಜೀವ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಏಪ್ರಿಲ್‌ 15 ರಂದು ನಟಿ ಮಾನ್ವಿತಾ ತಾಯಿ ಸುಜಾತಾ ಕಾಮತ್‌ ಇಹಲೋಕವನ್ನು ತ್ಯಜಿಸಿದ್ದಾರೆ. ಇಂದಿಗೆ ೧೪ ದಿನಗಳು ಕಳೆದಿದ್ದು, ತಾಯಿಯ ಕಾರ್ಯವನ್ನು ನೆರವಹಿಸಿದ್ದಾರೆ.

ನಟಿ ಮಾನ್ವಿತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ, “ಸಾಗರದಲ್ಲಿ ನಾನು ನನ್ನ ತಾಯಿಯನ್ನು ಸಮಾಧಿ ಮಾಡಿದೆ. ಅಂದಿನಿಂದ, ಪಕ್ಷಿಗಳು ಕ್ಲೀನ್ ಮತ್ತು ಬಾಚಣಿಗೆ, ಪ್ರತಿ ದಿನ ಬೆಳಿಗ್ಗೆ ಅವಳ ನೆಚ್ಚಿನ ಮಂಗಳೂರು ಮಲ್ಲಿಗೆಯನ್ನು ಅವಳ ಕೂದಲಿಗೆ ಸುರಕ್ಷಿತವಾಗಿ ಇಡುವಾಗ ಮತ್ತು ಅಲೆಗಳು ಹೊದಿಕೆಯನ್ನು ಅವಳ ಗಲ್ಲದವರೆಗೆ ಎಳೆಯುತ್ತವೆ, ಪ್ರತಿ ರಾತ್ರಿ ನಕ್ಷತ್ರಗಳು ಅವಳ ಹಣೆಯ ಮೇಲೆ ಚುಂಬಿಸುತ್ತವೆ. ನಾನು ಈ ಕವಿತೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ, ಅಮ್ಮಾ.. ನೀನಿಲ್ಲದೆ ಖಾಲಿ ಖಾಲಿ ಅನಿಸುತ್ತಿದೆ… ಪ್ರಪಂಚದ ಇನ್ನೊಂದು ಭಾಗದಲ್ಲಿ ನೀವು ಆರಾಮ ಮತ್ತು ಶಾಂತಿಯನ್ನು ಕಾಣುತ್ತೀರಿ ಎಂದು ನಾನು ಭಾವಿಸುತ್ತೇನೆ.” ಎಂದು ಸುದೀರ್ಘವಾಗಿ ಬರೆದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ, ಮಾನ್ವಿತಾ ತಮ್ಮ ತಂದೆಯೊಂದಿಗೆ ಸಮುದ್ರದಲ್ಲಿ ಅಸ್ತಿ ಬಿಡುವ ಮೂಲಕ ತಾಯಿಯ ಕಾರ್ಯವನ್ನು ಮಾಡುತ್ತಿದ್ದರು. ತಂದೆ ಪಿಂಡ ಪ್ರಧಾನದ ಸಕಲ ವಿಧಿವಿಧಾನವನ್ನು ಮಾಡುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋಗೆ ಸ್ಯಾಂಡಲ್‌ವುಡ್‌ ಸಿನಿತಾರೆಯರು ಸಂತಾಪವನ್ನು ಸೂಚಿಸಿದ್ದಾರೆ. ನಟಿ ಪ್ರಿಯಾಂಕಾ ಉಪೇಂದ್ರ, “ನಮ್ಮ ಆಳವಾದ ಸಂತಾಪಗಳು, ದೇವರು ನಿಮಗೆ ಶಕ್ತಿಯನ್ನು ನೀಡಲಿ. ಓಂ ಶಾಂತಿ” ಎಂದಿದ್ದಾರೆ. ನಟಿ ಐಂದ್ರಿತಾ ರೈ, ” ಯುವೆ ಯಾವಾಗಲೂ ಸ್ಟ್ರಾಂಗ್‌ ಹುಡುಗಿ! ದೃಢವಾಗಿ ಉಳಿಯುವುದನ್ನು ಮುಂದುವರಿಸಿ ಮತ್ತು ಅವಳನ್ನು ಹೆಮ್ಮೆ ಪಡುತ್ತೇವೆ.” ಎಂದಿದ್ದಾರೆ. ಹೀಗೆ ಅನೇಕರು ಸಾಂತ್ವಾನ ಹೇಳಿದ್ದಾರೆ.

ಇದನ್ನೂ ಓದಿ : ಕಾಂತಾರ 2 ಸಿದ್ಧತೆ ಬೆನ್ನಲ್ಲೇ ಪಂಜುರ್ಲಿ ದೈವದ ಆರ್ಶೀವಾದ ಪಡೆದ ನಟ ರಿಷಬ್‌ ಶೆಟ್ಟಿ

ನಟಿ ಮಾನ್ವಿತಾ ಸಿನಿರಂಗಕ್ಕೂ ಬರುವ ಮೊದಲು ರೇಡಿಯೋ ಮಿರ್ಚಿಯಲ್ಲಿ ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಮಂಗಳೂರಿನ ರೇಡಿಯೋ ಮಿರ್ಚಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿದರು ಮತ್ತು ಕಿಲಾಡಿ 983 ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು. ನಂತರದ ದಿನಗಳಲ್ಲಿ ದುನಿಯಾ ಸೂರಿ ನಿರ್ದೇಶನದ ಕನ್ನಡ ಸಿನಿಮಾ ಕೆಂಡಸಂಪಿಗೆ (2015) ಮೂಲಕ ನಟನ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

Manvitha Kamath’s mother passed away : Actress Manvitha Kamath gets emotional on mother’s 14-day Shraddha

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular