ಮಂಗಳವಾರ, ಏಪ್ರಿಲ್ 29, 2025
HomeCinemaನರೇಶ್‌ ಪವಿತ್ರಾ ಲೋಕೇಶ್‌ ಮತ್ತೆ ಮದುವೆ ಸಿನಿಮಾ ಟ್ರೈಲರ್‌ನಲ್ಲಿದೆ ಗೊತ್ತೆ ?

ನರೇಶ್‌ ಪವಿತ್ರಾ ಲೋಕೇಶ್‌ ಮತ್ತೆ ಮದುವೆ ಸಿನಿಮಾ ಟ್ರೈಲರ್‌ನಲ್ಲಿದೆ ಗೊತ್ತೆ ?

- Advertisement -

ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ಅಭಿನಯದ ಮಳ್ಳಿ ಪೆಳ್ಳಿ ಕನ್ನಡದಲ್ಲಿ ಮತ್ತೆ ಮದುವೆ ಟ್ರೈಲರ್‌ ರಿಲೀಸ್‌ (Matte Maduve Movie Trailer) ಆಗಿದೆ. ಈ ಸಿನಿಮಾದಲ್ಲಿ ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ಸಂಬಂಧದ ಬಗ್ಗೆ ತೋರಿಸಲಾಗಿದೆ. ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ಅಭಿನಯದ ಈ ಸಿನಿಮಾದಲ್ಲಿ ಇವರದೇ ನಿಜ ಜೀವನದ ಹೆಚ್ಚಿನ ಘಟನೆಗಳನ್ನು ಒಳಗೊಂಡಿದೆ. ಹೆಚ್ಚಾಗಿ ನರೇಶ್‌ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿ ಅವರನ್ನು ಟಾರ್ಗೆಟ್‌ ಮಾಡಿದ ಹಾಗೆ ಕಾಣುತ್ತದೆ.

ಇನ್ನು ಈ ಸಿನಿಮಾಕ್ಕೆ ಎಂ.ಎಸ್‌ ರಾಜು ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಕಳೆದ ವರ್ಷ ತೆಲುಗು ನಟ ನರೇಶ್‌ ಮತ್ತು ಕನ್ನಡ ನಟಿ ಪವಿತ್ರಾ ಲೋಕೇಶ್‌ ಹಾಗೂ ನರೇಶ್‌ ಮೂರನೇ ಪತ್ನಿ ರಮ್ಯಾ ರಘುಪತಿ ನಡುವಿನ ರಗಳೆ ಭಾರೀ ಸದ್ದು ಮಾಡಿತ್ತು. ಮೂವರು ಮಾಧ್ಯಮಗಳ ಮುಂದೆ ಆರೋಪ ಪ್ರತ್ಯಾರೋಪಗಳನ್ನು ಮಾಡಿದ್ದರು. ತಮ್ಮ ಹಾಗೂ ನರೇಶ್‌ ದಾಂಪತ್ಯದಲ್ಲಿ ಬಿರುಕು ಮಾಡಲು ನಟಿ ಪವಿತ್ರಾ ಲೋಕೇಶ್‌ ಕಾರಣ ಎಂದು ರಮ್ಯಾ ರಘುಪತಿ ಆರೋಪಿಸಿದ್ದಾರೆ. ಮೊದಲಿಗೆ ಇದನ್ನು ನರೇಶ್‌ ಹಾಗೂ ಪವಿತ್ರಾ ಅಲೆಗೆಳೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಇವರು ಹಂಚಿಕೊಂಡ ಎರಡು ವಿಡಿಯೋ ವೈರಲ್ ಆಗುತ್ತಿದ್ದಂತೆ, ಇದು ಹೊಸ ಸಿನಿಮಾದ ತುಣುಕುಗಳು ಎನ್ನುವ ಮಾಹಿತಿ ನೀಡಿದ್ದಾರೆ. ಅದು ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ನಟಿಸುತ್ತಿರುವ ‘ಮಳ್ಳಿಪೆಳ್ಳಿ’ ಸಿನಿಮಾದ ತುಣುಕು ಆಗಿತ್ತು. ಹಿರಿಯ ನಟ ನರೇಶ್‌ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟು 50 ವರ್ಷಗಳಾಗಿವೆ. ಈ ಬೆನ್ನಲ್ಲೇ ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದುವೇ ‘ಮಳ್ಳಿ ಪೆಳ್ಳಿ’ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ನಟ ನರೇಶ್ ಹೀರೊ ಆಗಿ ನಟಿಸಿದ್ದರೆ, ಪವಿತ್ರಾ ಲೋಕೇಶ್ ನಾಯಕಿ ಪಾತ್ರದಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ : ಆದಿಪುರುಷ್‌ ಟ್ರೇಲರ್‌ ರಿಲೀಸ್‌ : ರಾಮನ ಪಾತ್ರದಲ್ಲಿ ಮಿಂಚಿದ ನಟ ಪ್ರಭಾಸ್‌

ಇದನ್ನೂ ಓದಿ : ಸಮಂತಾಗೆ ನನ್ನ ರೋಜಾ ನೀನೇ ಎಂದ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ

ಈ ಸಿನಿಮಾಕ್ಕೆ ಸುರೇಶ್‌ ಬೊಬ್ಬಿಲಿ ಸಂಗೀತ ನಿರ್ದೇಶನ ನೀಡಿದ್ದು, ಅರುಲ್‌ ದೇವ್‌ ಹಿನ್ನಲೆ ಸಂಗೀತ ನೀಡಿದ್ದಾರೆ. ಎಂ.ಎನ್‌ ಬಾಲ್‌ ರೆಡ್ಡಿ ಛಾಯಾಗ್ರಹಣ, ಅನಂತ ಶ್ರೀರಾಮ್‌ ಸಾಹಿತ್ಯ ಇದೆ. ಇನ್ನು ಕನ್ನಡಲ್ಲಿ ಮತ್ತೆ ಮದುವೆ ಹೆಸರಿನಲ್ಲಿ ಡಬ್‌ ಆಗಿ ರಿಲೀಶ್‌ ಆಗಲಿದೆ. ಮೇ 26ಕ್ಕೆ ಈ ಸಿನಿಮಾ ತೆರೆ ಮೇಲೆ ಬರಲಿದೆ ಎಂದು ಸಿನಿತಂಡ ಹೇಳಿದೆ.

Matte Maduve Movie Trailer: Naresh Pavitra Lokesh is back in the wedding movie trailer, do you know?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular