ವ್ಯರ್ಥವಾಯ್ತು ಮತದಾನ ಜಾಗೃತಿ : ಮತಕೇಂದ್ರಕ್ಕೆ ಬರಲಿಲ್ಲ ಮತದಾರರು

ಬೆಂಗಳೂರು : ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ (Karnataka General Election) ಮುಗಿದಿದೆ. ರಾಜಕೀಯ ಪಕ್ಷಗಳು ಸೋಲು ಗೆಲುವು ಹಾಗೂ ಅಧಿಕಾರದ ಗದ್ದುಗೆಯ ಲೆಕ್ಕಾಚಾರದಲ್ಲಿವೆ. ಆದರೆ ಮತದಾನದ ಬಳಿಕ ರಾಜ್ಯ ರಾಜಧಾನಿಯ ಕಹಿ ಸತ್ಯವೊಂದು ಬಯಲಾಗಿದ್ದು, ನೂರಾರು ಜಾಗೃತಿ ಕಾರ್ಯಕ್ರಮ, ಸ್ಲೋಗನ್, ಕರಪತ್ರ, ಮೊಬೈಲ್ ಮೆಸೆಜ್‌, ಹಾಡು, ನಾಟಕಗಳ ಬಳಿಕವೂ ಬೆಂಗಳೂರಿನ ಮತದಾನದ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಬದಲಾಗಿ ಹಿಂದಿನ ಚುನಾವಣೆಗಿಂತಲೂ ಮತದಾನದ ಪ್ರಮಾಣ ಕುಸಿದಿದೆ.

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಧಾನಿಯ ಮತದಾನದ ಪ್ರಮಾಣ ಕುಸಿದಿತ್ತು. ಹೀಗಾಗಿ 2023 ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ಸರ್ಕಸ್ ನಡೆದಿತ್ತು. ಆದರೆ ಈ ಭಾರಿಯೂ ಮತದಾನ ಹೆಚ್ಚಿಸುವ ಪ್ರಯತ್ನ ಸಕ್ಸಸ್ ಆಗಿಲ್ಲ. ರಾಜ್ಯದ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದಿದೆ. ರಾಜ್ಯದಲ್ಲಿ ನಡೆದ ಒಟ್ಟು ಮತದಾನದ ಪ್ರಮಾಣ ಶೇಕಡ 65. 69 ರಷ್ಟಿದೆ. ಈ ಪೈಕಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ 8802 ಮತಗಟ್ಟೆಗಳಲ್ಲಿ ಮತದಾರರು ಮತ ಹಾಕಿದ್ದಾರೆ. ಬೆಂಗಳೂರಿನ ನಾಲ್ಕು ಚುನಾವಣಾ ಜಿಲ್ಲೆಗಳಲ್ಲಿ ನಡೆದ ಶೇಕಡಾವಾರು ಮತದಾನವನ್ನು ಕ್ರೋಢೀಕರಿಸಿದ್ರೇ, ಸರಾಸರಿ ಮತದಾನ 52.17 ರಷ್ಟಿದೆ. ಇದನ್ನು‌ ವಿಭಾಗಿಸಿ ನೋಡೋದಾದರೇ,

ಬೆಂಗಳೂರು ದಕ್ಷಿಣ-ಶೇ.51.15
ಬೆಂಗಳೂರು ಕೇಂದ್ರ : ಶೇ.54.45.
ಬೆಂಗಳೂರು ಉತ್ತರ : ಶೇ.50.02,
ಬೆಂಗಳೂರು ನಗರ : ಶೇ.53.71.

ಇದು ಬೆಂಗಳೂರಿನಲ್ಲಿ 2013 ಹಾಗೂ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ನಡೆದ ಮತದಾನಕ್ಕಿಂತ ಶೇಕಡಾ 5 ರಷ್ಟು ಕಡಿಮೆ ಎಂಬುದನ್ನು ದಾಖಲೆಗಳು ಹೇಳ್ತಿವೆ. 2018 ರ ಚುನಾವಣೆಯಲ್ಲಿ ನಡೆದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇಕಡಾ 57 ರಷ್ಟಿತ್ತು. ಇದು ಅದರ ಪೂರ್ವ ಅಂದ್ರೇ 2013 ರ ಚುನಾವಣೆಗೆ ಹೋಲಿಸಿದ್ರೆ ಶೇಕಡಾ 10 ರಷ್ಟು ಕಡಿಮೆಯಾಗಿತ್ತು. 2013 ರಲ್ಲಿ ಶೇ.62 ಮತದಾನವಾಗಿತ್ತು. ಆದರೆ ಈ ಭಾರಿ ಕಳೆದ ಚುನಾವಣೆಗಿಂತಲೂ ಕಡಿಮೆ ಪ್ರಮಾಣದ ಮತದಾನವಾಗಿದೆ. ರಾಜ್ಯಮಟ್ಟದಲ್ಲಿ ಈ ಬಾರಿ ಚುನಾವಣೆಯಲ್ಲಿ ಮತಚಲಾಯಿಸುವುದಕ್ಕೆ ಎನ್ರೋಲ್‌ ಮಾಡಿಕೊಂಡವರು 5,31,33,054 ಮತದಾರರು. ಇದರಲ್ಲಿ 11,71,558 ಯುವ ಮತದಾರರಿದ್ದರು.

5.71,281 ರಷ್ಟು ಅಂಗವಿಕಲ ಮತದಾರರಿದ್ದರೆ, 80 ವರ್ಷ ಮೇಲ್ಪಟ್ಟವರು 12,15,920 ರಷ್ಟಿದ್ದರು.ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದಲ್ಲಿ ನೊಂದಾವಣೆ ಮಾಡಿಕೊಂಡಿದ್ದು ಒಟ್ಟು 97,13,349 ಮತದಾರರು.50,24,775 ಪುರುಷರಿದ್ರೆ, 46,86,813 ಮಹಿಳೆಯರ.1,761 ಲೈಂಗಿಕ ಅಲ್ಪಸಂಖ್ಯಾತರು.2,37,206 ಮಂದಿ 80 ವರ್ಷ ಮೇಲ್ಪಟ್ಟವರು ಹಾಗೂ 1,43,536 ಯುವ ಮತದಾರರಿದ್ದರು.ಈ ಪೈಕಿ 25,790 ಅಂಗವಿಕಲರು ಹಾಗೂ 2,107 ಅನಿವಾಸಿ ಭಾರತೀಯ ಮತದಾರರಿದ್ದರು.

ಇದನ್ನೂ ಓದಿ : ಸಮೀಕ್ಷೆಗೆ ಬಿಜೆಪಿ ಪಡೆ ತತ್ತರ : ರಾಜಧಾನಿಗೆ ನಾಯಕರ ದೌಡು ಮಹತ್ವದ ಸಭೆ

ಇದನ್ನೂ ಓದಿ : ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್‌ ಬ್ಲಾಕ್‌ ಮೇಲ್‌ : ರಮೇಶ್‌ ಜಾರಕಿಹೊಳಿ ಆರೋಪ

ಆದರೆ ಮತದಾನದ ಪ್ರಮಾಣದಲ್ಲಿ ಯಾವುದೇ ಏರಿಕೆಯಾಗಿಲ್ಲ. ಬೆಂಗಳೂರಿಗೆ ಉದ್ಯೋಗ ನಿಮಿತ್ತ ವಾಸವಾಗಿರುವ ಟೆಕ್ಕಿಗಳು ಕೂಡ ಇಲ್ಲಿನ ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ ಬಹುತೇಕರು ಈಗ ವರ್ಕ್ ಫ್ರಂ ಹೋಂನಲ್ಲಿದ್ದಾರೆ. ಮತದಾನದ ಪ್ರಮಾಣ ಕುಸಿತಕ್ಕೇ ಇದು ಒಂದು ಕಾರಣ ಎನ್ನಲಾಗ್ತಿದೆ. ಏನೇ ಆದರೂ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಮತದಾನ ಜಾಗೃತಿ ಮೂಡಿಸಿದ್ದು ವ್ಯರ್ಥವಾದಂತಾಗಿದೆ.

Karnataka General Election: Voting awareness wasted: Voters did not come to the polling station

Comments are closed.