mayamruga and magalu janaki : ಕನ್ನಡ ಕಿರುತೆರೆಯಲ್ಲಿ ಪ್ರಸ್ತುತ ಅದೆಷ್ಟೇ ಧಾರವಾಹಿಗಳು ಬರುತ್ತಿರಲಿ. ಈಗಲೂ ಸಹ ಮಾಯಾಮೃಗ ಎಂಬ ಹೆಸರು ಕೇಳಿದರೆ ಧಾರವಾಹಿ ಪ್ರಿಯರ ಮುಖ ಅರಳುವುದುಂಟು. ಈ ಧಾರವಾಹಿ ಮುಕ್ತಾಯಗೊಂಡು ಹಲವು ವರ್ಷಗಳೇ ಕಳೆದಿದ್ದರೂ ಸಹ ಈಗಲೂ ಸಹ ಟಿ.ಎನ್ ಸೀತಾರಾಮ್ ನಿರ್ದೇಶನದ ಮಾಯಾ ಮೃಗ ಧಾರವಾಹಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಇದೀಗ ಮಾಯಾಮೃಗ ಧಾರವಾಹಿ ಕುರಿತಂತೆ ಟಿ.ಎನ್ ಸೀತಾರಾಮ್ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಮಗಳು ಜಾನಕಿ ಧಾರವಾಹಿ ಪುನಾರಂಭಗೊಳ್ಳುತ್ತಿದೆ ಎಂಬ ಖುಷಿ ಸುದ್ದಿಯನ್ನು ನೀಡಿದ್ದ ಟಿ.ಎನ್ ಸೀತಾರಾಮ್ ಇದೇ ರೀತಿಯ ಮತ್ತೊಂದು ಖುಷಿ ಸುದ್ದಿಯನ್ನು ನೀಡಿದ್ದಾರೆ.
ಮಾಯಾಮೃಗ ಧಾರವಾಹಿ ಎಷ್ಟರ ಮಟ್ಟಿಗೆ ಫೇಮಸ್ ಆಗಿತ್ತು ಅಂದರೆ ಈ ಧಾರವಾಹಿಯನ್ನು ಮರುಪ್ರಸಾರ ಮಾಡಿ ಎಂಬ ಬೇಡಿಕೆ ಕೂಡ ಕೇಳಿ ಬರ್ತಿತ್ತು. ಟಿ.ಎನ್ ಸೀತಾರಾಮ್ ನಿರ್ದೇಶನ ಮಾಡಿದ್ದ ಈ ಧಾರವಾಹಿ ಆಗಿನ ಕಾಲಘಟ್ಟದಲ್ಲಿ ಇಷ್ಟಪಡದವರೇ ಇರಲಿಲ್ಲ. ಅಷ್ಟೊಂದು ಸುಂದರವಾಗಿ ಮೂಡಿ ಬಂದಿದ್ದ ಧಾರವಾಹಿಯದು. ಇದೀಗ ಈ ಧಾರವಾಹಿಯ ಮುಂದುವರಿದ ಸಂಚಿಕೆಗಳನ್ನು ಪ್ರಸಾರ ಮಾಡೋದಾಗಿ ಟಿ.ಎನ್ ಸೀತಾರಾಮ್ ಮಾಹಿತಿ ನೀಡಿದ್ದಾರೆ .
ಮಾಯಾಮೃಗ ಧಾರವಾಹಿ ಬರೋಬ್ಬರಿ 24 ವರ್ಷಗಳ ಹಿಂದೆ ಅಂದರೆ 1998ರಲ್ಲಿ ಪ್ರಸಾರವಾಗುತ್ತಿತ್ತು. ಈ ಧಾರವಾಹಿಯಲ್ಲಿ ಮಾಳಾವಿಕಾ ಅವಿನಾಶ್, ಎಂ.ಡಿ ಪಲ್ಲವಿ ರಾಜೇಶ್ ನಟರಂಗ , ದತ್ತಣ್ಣ, ಸುಂದರ್ ರಾಜ್, ಸೇತುರಾಂ, ಮುಖ್ಯಮಂತ್ರಿ ಚಂದ್ರು. ವೈಶಾಲಿ ಕಾಸರವಳ್ಳಿ ಲಕ್ಷ್ಮೀ ಚಂದ್ರಶೇಖರ್ ಸೇರಿದಂತೆ ಹೆಸರಾಂತ ಕಲಾವಿದರು ಪಾತ್ರ ನಿರ್ವಹಿಸಿದ್ದರು. ಪ್ರಬುದ್ಧ ನಟನೆ, ಅತ್ಯಂತ ಸುಂದರ ಕತೆ ಈ ಧಾರಾವಾಹಿಯನ್ನು ಯಶಸ್ಸಿನ ಉತ್ತುಂಗವೇರುವಂತೆ ಮಾಡಿತ್ತು.
ಮಾಯಾಮೃಗ ಧಾರವಾಹಿ ಮರು ಪ್ರಸಾರದ ಕುರಿತಂತೆ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಟಿ.ಎನ್ ಸೀತಾರಾಮ್, ಮಾಯಾಮೃಗದ ಮುಂದಿನ ಭಾಗ ಅಕ್ಟೋಬರ್ನಲ್ಲಿ ನಿಮ್ಮ ಮುಂದೆ ಎಂದು ಬರೆದುಕೊಂಡಿದ್ದಾರೆ. 24 ವರ್ಷಗಳ ಹಿಂದೆ ಪ್ರಸಾರವಾಗ್ತಿದೆ ಧಾರವಾಹಿಯ ಕತೆಯನ್ನೇ ಮುಂದುವರಿಸಲು ಟಿ.ಎನ್ ಸೀತಾರಾಮ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇದು ಮಾತ್ರವಲ್ಲದೇ 2020ರಲ್ಲಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಲಾಕ್ಡೌನ್ ಹೇರಿಕೆಯಾದ ಸಂದರ್ಭದಲ್ಲಿ ಟಿ.ಎನ್ ಸೀತಾರಾಮ್ ನಿರ್ದೇಶನದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ಮಗಳು ಜಾನಕಿ ಧಾರವಾಹಿ ಕೂಡ ಅರ್ಧಕ್ಕೆ ನಿಂತು ಹೋಗಿತ್ತು. ಈ ಧಾರಾವಾಹಿಯನ್ನು ಮುಂದುವರಿಸಬೇಕು ಎಂದೂ ಕೂಡ ಸಾಕಷ್ಟು ಮಂದಿ ಮನವಿ ಮಾಡಿದ್ದರು. ಇದಕ್ಕೂ ಒಪ್ಪಿಗೆ ನೀಡಿರುವ ಟಿ.ಎನ್ ಸೀತಾರಾಮ್ ಜಾನಕಿಯ ಮುಂದುವರಿದ ಕತೆಯ ಧಾರವಾಹಿಯೂ ಆಗಸ್ಟ್ನಲ್ಲಿ ಶೂಟಿಂಗ್ ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ. ಈ ಮೊದಲು ಕಲರ್ಸ್ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗ್ತಿದ್ದ ಮಗಳು ಜಾನಕಿ ಮುಂದುವರಿದ ಭಾಗ ಯುಟ್ಯೂಬ್ನಲ್ಲಿ ಪ್ರಸಾರ ಕಾಣಲಿದೆ.
ಇದನ್ನು ಓದಿ : Samsung Galaxy M Series: ಸ್ಯಾಮಸಂಗ್ ನಿಂದ ಎಂ ಸಿರೀಸ್ ಫೋನ್ ಬಿಡುಗಡೆ; ಈ ಫೋನಿನ ವೈಶಿಷ್ಟ್ಯಗಳೇನು ಗೊತ್ತಾ!
ಇದನ್ನೂ ಓದಿ : Sushmita Sen : ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಜೊತೆ ಮಾಜಿ ಐಪಿಎಲ್ ಬಾಸ್ ಲಲಿತ್ ಮೋದಿ ಡೇಟಿಂಗ್
mayamruga and magalu janaki serials are coming again under the direction of tn seetharam