Samsung Galaxy M Series: ಸ್ಯಾಮಸಂಗ್ ನಿಂದ ಎಂ ಸಿರೀಸ್ ಫೋನ್ ಬಿಡುಗಡೆ; ಈ ಫೋನಿನ ವೈಶಿಷ್ಟ್ಯಗಳೇನು ಗೊತ್ತಾ!

ದೇಶದ ಟಾಪ್ ಸೆಲ್ಲಿಂಗ್ ಫೋನ್ ಬ್ರ್ಯಾಂಡ್ ಸ್ಯಾಮ್ ಸಾಂಗ್ ಇತ್ತೀಚೆಗೆ ಭಾರತದಲ್ಲಿ ತನ್ನ ಗ್ಯಾಲಕ್ಸಿ ಎಂ ಸರಣಿಯಲ್ಲಿ( Samsung Galaxy M Series)ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ 13 (Samsung Galaxy M13) ಮತ್ತು ಸ್ಯಾಮ್ ಸಂಗ್ ಎಂ 13 5ಜಿ(Galaxy M13 5G )ಅನ್ನು ಬಿಡುಗಡೆ ಮಾಡಿದೆ. ಎರಡೂ ಫೋನ್‌ಗಳು ವರ್ಚುವಲ್ ರಾಮ್ ಮತ್ತು ಸ್ವಯಂ-ಡೇಟಾ ಸ್ವಿಚಿಂಗ್ ಸೇರಿದಂತೆ ಹಲವು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿವೆ.

ರಾಮ್ ಪ್ಲಸ್ ವೈಶಿಷ್ಟ್ಯದ ಸಹಾಯದಿಂದ, ಫೋನ್‌ನ ರಾಮ್ 12 ಜಿಬಿ ವರೆಗೆ ಎಕ್ಸ್ಟನ್ಡ್ ಮಾಡಬಹುದು. ಆದರೆ ಆಟೋ ಡೇಟಾ ಸ್ವಿಚಿಂಗ್ ವೈಶಿಷ್ಟ್ಯವು ಒಂದು ಸಿಮ್‌ನ ಡೇಟಾ ಸಂಪರ್ಕ ಕಡಿತಗೊಂಡಾಗ ಇತರ ಸಿಮ್‌ನ ಡೇಟಾಗೆ ಫೋನ್ ಅನ್ನು ತಕ್ಷಣ ಸಂಪರ್ಕಿಸುತ್ತದೆ. 50ಎಂಪಿ ಪ್ರೈಮರಿ ಕ್ಯಾಮೆರಾದೊಂದಿಗೆ ಬರುವ ಹೊಸದಾಗಿ ಬಿಡುಗಡೆಯಾದ ಸ್ಯಾಮ್‌ಸಂಗ್ ಫೋನ್‌ಗಳನ್ನು ಪಡೆಯಲು ಗ್ರಾಹಕರು ಜುಲೈ 23 ರವರೆಗೆ ಕಾಯಬೇಕಾಗುತ್ತದೆ.

ಗ್ಯಾಲಕ್ಸಿ ಎಂ 13(Galaxy M13) ಮತ್ತು ಗ್ಯಾಲಕ್ಸಿ ಎಂ13 5ಜಿ (Galaxy M13 5G) ಫೋನ್‌ಗಳನ್ನು ಅಮಜಾನ್ ಮತ್ತು ಸ್ಯಾಮ್ ಸಂಗ್ ವೆಬ್‌ಸೈಟ್‌ನಿಂದ ಜುಲೈ 23 ರಿಂದ ಖರೀದಿಸಬಹುದು. ಫೋನ್ ಖರೀದಿಯ ಮೇಲೆ ಖರೀದಿದಾರರು 1000 ರೂಪಾಯಿಗಳ ತ್ವರಿತ ಕ್ಯಾಶ್ಬ್ಯಾಕ್ ಪಡೆಯಬಹುದು. ಈ ಕೊಡುಗೆಯನ್ನು ಒಟ್ಟುಗೂಡಿಸಿ, ಗ್ರಾಹಕರು ಕೇವಲ 10,999 ರೂಗಳಲ್ಲಿ ಸ್ಮಾರ್ಟ್‌ಫೋನ್ ಅನ್ನು ಪಡೆಯಬಹುದು.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 13 ಸ್ಪೆಸಿಫಿಕೇಶನ್
ಈ ಸ್ಮಾರ್ಟ್ ಫೋನ್ 6.5-ಇಂಚಿನ 90ಹರ್ಟ್ಸ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಮತ್ತು ಮೀಡಿಯಾ ಟೆಕ್ ಡೈಮೆನ್ಸಿಟಿ 700 ಚಿಪ್ನೊಂದಿಗೆ 6ಜಿಬಿ ರಾಮ್ ಮತ್ತು 128ಜಿಬಿ ಸ್ಟೋರೇಜ್ ಅನ್ನು ಹೊಂದಿದೆ. ವರ್ಚುವಲ್ ರಾಮ್ ಮತ್ತು ಮೈಕ್ರೋ ಎಸ್ ಡಿ ಕಾರ್ಡ್ ಸ್ಲಾಟ್‌ಗಳಿಗೆ ಸಹ ಬೆಂಬಲವಿದೆ. ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, 5ಜಿ ಆವೃತ್ತಿಯು 50ಎಂ ಪಿ ಪ್ರೈಮರಿ ಮುಖ್ಯ ಕ್ಯಾಮೆರಾ ಸೆನ್ಸರ್ ಮತ್ತು 2 ಎಂಪಿ ಸೆಕೆಂಡರಿ ಸೆನ್ಸರ್ ಒಳಗೊಂಡಿರುವ ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಎಲ್ಇಡಿ ಫ್ಲ್ಯಾಷ್ ಕೂಡ ಇದೆ.

ಮುಂಭಾಗದಲ್ಲಿ, ಫೋನ್ 8ಎಂಪಿ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಡಿವೈಸ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಬರುತ್ತದೆ. ಫೋನ್ 11 5ಜಿ ಬ್ಯಾಂಡ್‌ಗಳೊಂದಿಗೆ ಬರುತ್ತದೆ ಮತ್ತು ಫೋನ್ 6000 ಎಂ ಎ ಎಚ್ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಅದು 15 ವಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇತರ ವೈಶಿಷ್ಟ್ಯಗಳ ಬಗ್ಗೆ ಹೇಳಿದರೆ ಆಂಡ್ರಾಯ್ಡ್ 12 ಓಎಸ್, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಡ್ಯುಯಲ್-ಬ್ಯಾಂಡ್ ವೈ-ಫೈ, ನಾಕ್ಸ್ ಸೆಕ್ಯುರಿಟಿ, ಆಟೋ ಡೇಟಾ ಸ್ವಿಚ್ ಮತ್ತು ಬ್ಲೂಟೂತ್ ಸೇರಿವೆ.

ಸ್ಯಾಮ್ ಸಂಗ್ ಎಂ 13 ಹಾಗೂ ಸ್ಯಾಮ್ ಸಂಗ್ ಎಂ 13 5G ಫೋನ್‌ನ ಬೆಲೆ 4ಜಿಬಿ + 64ಜಿಬಿ ರೂಪಾಂತರದ ಬೆಲೆ 11,999. ಆದರೆ ಅದರ 6ಜಿಬಿ + 128ಜಿಬಿ ರೂಪಾಂತರದ ಬೆಲೆ 13,999 ರೂ. ಮತ್ತೊಂದೆಡೆ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ 13 5ಜಿ ನ 4ಜಿಬಿ + 64ಜಿಬಿ ರೂಪಾಂತರದ ಬೆಲೆ ರೂ 13999. ಮತ್ತು 6ಜಿಬಿ + 128ಜಿಬಿ ರೂಪಾಂತರದ ಬೆಲೆ ರೂ 15999. ಎರಡೂ ಫೋನ್‌ಗಳು ಜುಲೈ 23 ರಿಂದ Samsung.com, ಅಮಜಾನ್ ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ. ಐಸಿಐಸಿಐ ಬ್ಯಾಂಕ್ ಕಾರ್ಡ್‌ದಾರರು ವಿಶೇಷ ಬಿಡುಗಡೆ ಕೊಡುಗೆಯಾಗಿ 1000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ. ಈ ಸರಣಿಯ ಫೋನ್ ಮಿಡ್‌ನೈಟ್ ಬ್ಲೂ, ಆಕ್ವಾ ಗ್ರೀನ್ ಮತ್ತು ಸ್ಟಾರ್‌ಡಸ್ಟ್ ಬ್ರೌನ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಇದನ್ನೂ ಓದಿ: Emergency Movie: ‘ಎಮರ್ಜೆನ್ಸಿ’ಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಕಂಗನಾ; ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ
(Samsung Galaxy M series launch in India)

Comments are closed.