ಆಕೆ ವೃತ್ತಿಯಲ್ಲಿ ಕಿರುತೆರೆ ನಟಿ. ಆದರೆ ಯಾವ ಬಾಲಿವುಡ್ ತಾರೆಗೂ ಕಮ್ಮಿಯಿಲ್ಲದಂತೇ ಎಕ್ಸಪೋಸ್ ಮಾಡಿ ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಸೋಷಿಯಲ್ ಮೀಡಿಯಾ ದಲ್ಲಿ ತಮ್ಮ ಹಾಟ್ ಹಾಟ್ ಪೋಟೋಗಳಿಂದಲೇ ಸಂಚಲನ ಮೂಡಿಸುವ ಬೆಡಗಿ ಬೇರೆ ಯಾರು ಅಲ್ಲ ನಟಿ ಹಾಗೂ ಮಾಡೆಲ್ ಮೇಘಾ ಗುಪ್ತಾ (Megha Gupta). 2004 ರಲ್ಲಿ ಹಿಂದಿ ಕಿರುತೆರೆಯಲ್ಲಿ ಬಣ್ಣ ಹಚ್ಚಿದ ಮೇಘಾ ಗುಪ್ತಾ ಇದುವರೆಗೂ ನಾನಾ ಬಗೆಯ ಪಾತ್ರದಲ್ಲಿ ಮಿಂಚಿದ್ದಾರೆ. ಗ್ಲ್ಯಾಮರ್ ಹಾಗೂ ಡಿ ಗ್ಲ್ಯಾಮರ್ ಎರಡೂ ಪಾತ್ರಕ್ಕೆ ಸರಿ ಹೊಂದುವ ಮೇಘಾ ಗುಪ್ತಾ ಪ್ರೇಕ್ಷಕರ ಮನಗೆದ್ದಿದ್ದಾರೆ.

ಕುಸುಮ ಧಾರಾವಾಹಿ ಮೂಲಕ ಕೆರಿಯರ್ ಆರಂಭಿಸಿದ ಮೇಘಾ ಗುಪ್ತಾ (Megha Gupta) ಇದುವರೆಗೂ ನೊರೆಂಟು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಕಾವ್ಯಾಂಜಲಿ, ಮಮತಾ,ಸಿಐಡಿ,ಮೈ ತೇರಿ ಪೆಹಚಾನ್ ಹೂಂ, ಖಾಪ್ ಬಿಗಿನ್ಸ್,ರಿಂಗಾ ರಿಂಗಾ ರೋಸಸ್, ಡ್ರೀಮ್ ಗರ್ಲ್ ಮೇಘಾ (Megha Gupta) ಮಿಂಚಿದ ಕೆಲವು ಸೀರಿಯಲ್ ಗಳು. ಇನ್ ಸ್ಟಾಗ್ರಾಂನಲ್ಲಿ 1.5 ಮಿಲಿಯನ್ ಫಾಲೋವರ್ಸ್ ಹೊಂದಿರೋ ಮೇಘಾ ಒಂದಾದ ಮೇಲೊಂದರಂತೆ ಬಿಕನಿ ಪೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡುತ್ತಲೇ ಇರುತ್ತಾರೆ.

ಸದಾ ತಮ್ಮ ಟೋನ್ಡ್ ಬಾಡಿಯನ್ನು, ಸೌಂದರ್ಯವನ್ನು ಹೊಸ ಹೊಸ ಬಿಕನಿಯಲ್ಲಿ ತೆರೆದಿಟ್ಟು ಪೋಸ್ ಕೊಡೋಕೆ ಮೇಘಾ ಗುಪ್ತಾ (Megha Gupta) ಗೆ ಕೊಂಚವೂ ಮುಜುಗರ ವಿಲ್ಲ.ಮಾತ್ರವಲ್ಲ ನೆಗೆಟಿವ್ ಕಮೆಂಟ್ ಗಳಿಗೆ ಮೇಘಾ ಗುಪ್ತಾ ಕೊಂಚವೂ ತಲೆಕೆಡಿಸಿಕೊಳ್ಳೋದಿಲ್ಲ. ಸದ್ಯ ಮಾಯಾನಗರಿ ಮುಂಬೈನಿಂದ ಗೋವಾ ವಾಸ್ತವ್ಯ ಬದಲಾಯಿಸಿರೋ ಮೇಘಾ ಗುಪ್ತಾ, ಅಲ್ಲಿನ ಬೀಚ್ ಗಳಲ್ಲಿ ರಂಗೀನ್ ಸಂಜೆಗಳನ್ನು ಕಳೆಯುತ್ತಿದ್ದಾರೆ.

ಕೇವಲ ಬೀಚ್ ಮಾತ್ರವಲ್ಲ ಜಲಪಾತ, ಹೊಟೇಲ್,ಸ್ವಿಮ್ಮಿಂಗ್ ಪೂಲ್ ಹೀಗೆ ನಾನಾ ಕಡೆಗಳಲ್ಲಿ ವೈರೈಟಿ ಬಿಕನಿಗಳಲ್ಲಿ ಮೇಘಾ ಗುಪ್ತಾ ಮೈಚೆಲ್ಲಿ ಪೋಟೋಗೆ ಪೋಸ್ ನೀಡುತ್ತಾರೆ. ಪೋಟೋಗ್ರಾಫರ್ ಗಳ ಫೆವರಿಟ್ ನಟಿ ಎನ್ನಿಸಿರೋ ಮೇಘಾ ಗುಪ್ತಾ ಹಾಟ್ ಪೋಟೋ ತೆಗೆಯೋಕೆ ಪೋಟೋಗ್ರಾಫರ್ ಗಳು ಅಷ್ಟೇ ಉತ್ಸುಕತೆಯಿಂದ ಸಿದ್ಧವಾಗಿ ಇರುತ್ತಾರಂತೆ.

ಮೇಘಾ ಇನ್ ಸ್ಟಾಗ್ರಾಂನಲ್ಲಿ ಒಂದಕ್ಕಿಂತ ಒಂದು ಹಾಟ್ ಹಾಟ್ ಪೋಟೋಗಳು ಅಭಿಮಾನಿಗಳ ನಿದ್ದೆ ಕದಿಯೋದಿಕ್ಕೆ ಸಿದ್ಧವಾಗಿದೆ. ಒಟ್ಟಿನಲ್ಲಿ ಹಿಂದಿ ಸೀರಿಯಲ್ ನಲ್ಲಿ ಆದರ್ಶ ಸೊಸೆ ಪಾತ್ರ ನಿಭಾಯಿಸಿ ಹೆಂಗಳೆಯರ ಮನಗೆಲ್ಲುವ ನಟಿ ಮೇಘಾ ನಿಜಜೀವನದಲ್ಲಿ ಮಾತ್ರ ಹೆಂಗಳೆಯರು ಹೊಟ್ಟೆ ಉರಿದುಕೊಳ್ಳುವಂತ ಹಾಗೂ ಗಂಡು ಹೈಕಳು ನಿದ್ದೆ ಗೆಡುವಂತ ಹಾಟ್ ಹಾಟ್ ಪೋಟೋಗಳ ಒಡತಿಯಾಗಿದ್ದಾರೆ.

ಇದನ್ನೂ ಓದಿ : ಬಾಯ್ ಪ್ರೆಂಡ್ ಜೊತೆ ಟ್ರಿಪ್, ಬಿಕನಿ ಪೋಸ್: ಸೋಷಿಯಲ್ ಮೀಡಿಯಾಗೆ ನಶೆ ಏರಿಸಿದ ದಿಶಾ ಪಟಾಣಿ
ಇದನ್ನೂ ಓದಿ : ಫ್ಯಾಷನ್‌ಗೆ ವಯಸ್ಸು ಮುಖ್ಯವಲ್ಲ ಅಂದ್ರು ಪ್ರಿಯಾಂಕ : ಪೋಟೋ ನೋಡಿ Beautiful ಅಂದ್ರು ಅಭಿಮಾನಿಗಳು
( Megha Gupta New Photoshoot New Look )