Congress CM Candidate : ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅಲ್ಲ : ಕೈ ಸಿಎಂ ರೇಸ್‌ಗೆ ಕೇಳಿಬಂತು ಹೊಸ ಹೆಸರು

ಬೆಂಗಳೂರು : ಈಗಾಗಲೇ ಕಾಂಗ್ರೆಸ್ ಒಳಜಗಳ ದೇಶದಲ್ಲೇ ಮನೆಮಾತಾಗಿದೆ. ಒಂದು ಕಾಲದಲ್ಲಿ ದೇಶದಾದ್ಯಂತ ರಾಜ್ಯಾಧಿಕಾರನ್ನು ಹೊಂದಿದ್ದ ಕಾಂಗ್ರೆಸ್ ಈಗ ಬೆರಳಿಕೆಯಷ್ಟು ರಾಜ್ಯಗಳನ್ನು ಮಾತ್ರ ಉಳಿಸಿಕೊಂಡಿದೆ. ದಿನೇ ದಿನೇ ಕಾಂಗ್ರೆಸ್ ವರ್ಚಸ್ಸು ಕುಗ್ಗುತ್ತಿದೆ. ಪಂಚ ರಾಜ್ಯ ಚುನಾವಣೆ ಸೋಲು ಈ ಸಂಗತಿಯನ್ನು ಸಾಬೀತುಪಡಿಸಿದೆ. ಈ ಮಧ್ಯೆ ರಾಜ್ಯದಲ್ಲೂ ನಿಧಾನಕ್ಕೆ ಹೊಗೆಯಾಡುತ್ತಿರುವ ಸಿಎಂ ಸ್ಥಾನಾಕಾಂಕ್ಷಿಗಳ (Congress CM Candidate) ಮೇಲಾಟ ಹಾಗೂ ಅಸಮಧಾನ, ಪೈಪೋಟಿ ಮತ್ತಷ್ಟು ಹೆಚ್ಚಿವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಎಲ್ಲರಿಗೂ ಗೊತ್ತಿರೋ ಸಂಗತಿ ಕಾಂಗ್ರೆಸ್ ಗೆ (Congress ) ನಾಯಕತ್ವದ ಕೊರತೆ ಇದೆ ಅನ್ನೋದು. ಮಾತ್ರವಲ್ಲ ನಾಯಕತ್ವಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ನಾಯಕರಲ್ಲಿ ಒಗ್ಗಟ್ಟಿಲ್ಲ. ಈಗಾಗಲೇ ರಾಜ್ಯ ಕಾಂಗ್ರೆಸ್ (Congress ) ನಲ್ಲಿ ಸಿದ್ದು ಬಣ ಹಾಗೂ ಡಿ.ಕೆ.ಶಿವಕುಮಾರ್ ಬಣ ಎಂಬ ಎರಡು ಪ್ರತ್ಯೇಕ ಗುಂಪುಗಳಿವೆ. ಅಪ್ಪಿ ತಪ್ಪಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಸಿಎಂ ಸ್ಥಾನಕ್ಕೆ ಏರಲು ಡಿಕೆಶಿ ಹಾಗೂ ಸಿದ್ಧು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಈಗಾಗಲೇ ಇಬ್ಬರಿದ್ದ ಸಿಎಂ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಈಗ ಮೂರಕ್ಕೆ ತಲುಪಿರೋದು ಶಾಕಿಂಗ್ ಸುದ್ದಿಯಾಗಿದ್ದು, ಸದ್ದಿಲ್ಲದೇ ಲಿಂಗಾಯತ್ ವೀರಶೈವ ನಾಯಕ ಎಂ.ಬಿ. ಪಾಟೀಲ್ ಕೂಡ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಇನ್ ಡೈರೈಕ್ಟ್ ಆಗಿ ಹೇಳಿಕೊಂಡಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ನಾಯಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಇನ್ವ್ ಡೈರೈಕ್ಟ್ ಆಗಿ, ತಾವು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದೇವೆ ಎಂದಿದ್ದಾರೆ.

ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ.ಬಿ‌.ಪಾಟೀಲ್ ತಮ್ಮ ಪದಗ್ರಹಣದ ವಿವರ ನೀಡಲು ಸುದ್ಧಿಗೋಷ್ಟಿ ನಡೆಸಿದ್ದರು. ಈ ವೇಳೆ ನಿಮ್ಮ ಹೆಸರು ಸಿಎಂ ರೇಸ್ ಪಟ್ಟಿಯಲ್ಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಎಂ.ಬಿ.ಪಾಟೀಲ್, ಇದು ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತಿದೆ. ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು. ಬಳಿಕ ಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆ. ನಮ್ಮಲ್ಲಿ ಸಿಎಂ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ಘೋಷಿಸುತ್ತದೆ ಎಂದಿದ್ದಾರೆ. ಆದರೆ ಎಲ್ಲಿಯೂ ಎಂ‌‌.ಬಿ.ಪಾಟೀಲ್ ತಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿಲ್ಲ. ಇದು ಎಂ.ಬಿ‌‌.ಪಾಟೀಲ್ ಕೂಡ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ.

ಈಗಾಗಲೇ ಡಿಕೆಶಿ ಹಾಗೂ ಸಿದ್ಧರಾಮಯ್ಯ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ರಾಜ್ಯದಾದ್ಯಂತ ಪ್ರವಾಸ ನಡೆಸಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೇ ಎರಡೂ ನಾಯಕರ ಬೆಂಬಲಿಗರು ತಮ್ಮ ನಾಯಕನೇ ಸಿಎಂ ಎಂದು ಕೊಂಡಾಡುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲೂ ಪಂಜಾಬ್ ಮಾದರಿಯಲ್ಲಿ ಕಾಂಗ್ರೆಸ್ ಒಳಜಗಳ ಜೋರಾಗುವ ಸಾಧ್ಯತೆ ಇದ್ದು ಎಲೆಕ್ಷನ್ ಬಳಿಕ ಏನಾಗಲಿದೆ ಅನ್ನೋದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ನೀರು, ವಿದ್ಯುತ್, ಶಿಕ್ಷಣ ಉಚಿತ : ಕರ್ನಾಟಕದಲ್ಲಿ ಆಧಿಕಾರಕ್ಕೇರಲು ಆಪ್ ಪ್ರಣಾಳಿಕೆ

ಇದನ್ನೂ ಓದಿ : ಬಿಜೆಪಿ ನಾಯಕರ ಮಕ್ಕಳಿಗೆ, ಸಂಬಂಧಿಗಳಿಗೆ ನೋ ಟಿಕೇಟ್ : ಹೊರಬಿತ್ತು ಹೈಕಮಾಂಡ್ ಖಡಕ್ ಆದೇಶ

( Siddaramaiah, Not DK Shivakumar Congress CM Candidate)

Comments are closed.