ಬಣ್ಣದ ಲೋಕಕ್ಕೆ ನಿರ್ಮಾಪಕಿಯಾಗಿ ಎಂಟ್ರಿಯಾದವರು ನಟಿಯಾಗಿರೋ ಉದಾಹರಣೆಗಳು ಬೇಕಷ್ಟಿದೆ. ಆದರೆ ಈ ನಟಿ ಮಾತ್ರ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟು ಮನೆ ಮಾತಾದ ಬಳಿಕ ನಿರ್ಮಾಣ ಲೋಕಕ್ಕೆ ಕಾಲಿಟ್ಟಿದ್ದು, ಪ್ರೇಕ್ಷಕರಿಗೆ ಸಿಹಿಸುದ್ದಿ ನೀಡಿದ್ದಾರೆ. ಹೀಗೆ ನಟನೆಯಿಂದ ನಿರ್ಮಾಣಕ್ಕೆ ಕಾಲಿಟ್ಟ ಬೆಡಗಿ ಮತ್ಯಾರು ಅಲ್ಲ, ಜೊತೆ ಜೊತೆಯಲಿ ಮೂಲಕ ಕಿರುತೆರೆಗೆ ಬಂದ ಸುಂದರಿ ಮೇಘಾ ಶೆಟ್ಟಿ ( Megha Shetty ) .

ಸದ್ಯ ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರೋ ಧಾರಾವಾಹಿ ಜೊತೆ ಜೊತೆಯಲಿ (Jothe Jotheyali . ಈ ಸೀರಿಯಲ್ ನ ಅನುಸಿರಿಮನೆ ಪಾತ್ರದ ಮೂಲಕ ಮನೆಮಾತಾದ ನಟಿ ಮೇಘಾ ಶೆಟ್ಟಿ ಒಂದೇ ಧಾರಾವಾಹಿ ಮೂಲಕ ಚಂದನವನದ ಗಮನ ಸೆಳೆ)ದರು. ಮೊದಲ ಧಾರಾವಾಹಿ ಆರಂಭವಾಗಿ ಮನೆ ಮಾತಾಗುತ್ತಿದ್ದಂತೆ ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಪೋಟೋಶೂಟ್ , ಡ್ಯಾನ್ಸ್ ಹಾಗೂ ಟಿಕ್ ಟಾಕ್ ವಿಡಿಯೋಗಳ ಮೂಲಕ ಗಮನ ಸೆಳೆದರು.

ಮಾತ್ರವಲ್ಲ ಜೊತೆ ಜೊತೆಯಲಿ (Jothe Jotheyali ) ಸೀರಿಯಲ್ ಜೊತೆಯಲ್ಲೇ ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಹೀರೋಯಿನ್ ಆಗಿಯೂ ಮಿಂಚಿದ್ದಾರೆ. ಹೀಗೆ ಒಂದೇ ಧಾರಾವಾಹಿಯ ಮೂಲಕ ಕನ್ನಡಿಗರಿಗೆ ಚಿರಪರಿಚಿತವಾದ ಮೇಘಾ ಶೆಟ್ಟಿ ಈಗ ನಿರ್ಮಾಪಕಿಯಾಗಿ ಮತ್ತೊಂದು ಗ್ರ್ಯಾಂಡ್ ಎಂಟ್ರಿ ಗೆ ಸಿದ್ಧವಾಗಿದ್ದಾರೆ.

ಮೇಘಾ ಶೆಟ್ಟಿ ತಮ್ಮ ಪ್ರೊಡಕ್ಷನ್ ಹೌಸ್ ನಿಂದ ಕನ್ನಡ ಸೀರಿಯಲ್ ಒಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ಈಗಾಗಲೇ ಮೇಘಾ ಶೆಟ್ಟಿ ನಿರ್ಮಾಣದ ಧಾರಾವಾಹಿಯ ಪ್ರೋಮೋ ಕೂಡ ಸಿದ್ಧವಾಗಿದೆ. ಈ ಪ್ರೋಮೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋ ನಟಿ ಮೇಘಾ ಶೆಟ್ಟಿ, ನಮ್ಮ ಪ್ರೊಡಕ್ಷನ್ ಹೌಸ್ ನಿಂದ ಕನ್ನಡದಲ್ಲಿ ಹೊಸ ಧಾರಾವಾಹಿ. ವೀಕ್ಷಿಸಿ ಬೆಂಬಲಿಸಿ ನಿಮ್ಮ ಶುಭಹಾರೈಕೆ ಇರಲಿ ಎಂದಿದ್ದಾರೆ.
ಮೇಘಾ ಶೆಟ್ಟಿ ತಮ್ಮ ಪ್ರೊಡಕ್ಷನ್ ಹೌಸ್ ನಿಂದ ಕೆಂಡಸಂಪಿಗೆ ಎಂಬ ಸೀರಿಯಲ್ ನಿರ್ಮಾಣ ಮಾಡುತ್ತಿದ್ದು ಈ ಸಿನಿಮಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕೆಂಡಸಂಪಿಗೆ ಮಧ್ಯಮ ವರ್ಗದ ಹೆಣ್ಣುಮಗಳು ಸುಮನಾ ಕತೆಯಾಗಿದ್ದು, ಸುಮನಾ ಒಡಹುಟ್ಟಿದವರ ಹಿತಕ್ಕಾಗಿ ತನ್ನ ಜೀವನವನ್ನು ತ್ಯಾಗ ಮಾಡುವ ಕತೆಯನ್ನು ಧಾರಾವಾಹಿ ಹೇಳಲಿದೆ. ಅನುಸಿರಿಮನೆ ಪಾತ್ರದ ಮೂಲಕ ಕನ್ನಡದ ಲಕ್ಷಾಂತರ ಪ್ರೇಕ್ಷಕರನ್ನು ಸೆಳೆದ ಮೇಘಾ ಶೆಟ್ಟಿ ಈಗ ನಿರ್ಮಾಣ ಕ್ಷೇತ್ರಕ್ಕೆ ಕಾಲಿರಿಸುವ ಮೂಲಕ ಎಲ್ಲರೂ ಹುಬ್ಬೇರಿಸುವಂತ ಸಾಧನೆ ಮಾಡಿದ್ದಾರೆ. ಅಭಿಮಾನಿಗಳಿಂದ ಮೇಘಾ ಹೊಸ ಸಾಹಸಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇದನ್ನೂ ಓದಿ : ದಿ ಕಾಶ್ಮೀರಿ ಫೈಲ್ಸ್ ಮೂರು ದಿನದಲ್ಲೇ ದಾಖಲೆಯ ಗಳಿಕೆ
ಇದನ್ನೂ ಓದಿ : ನನ್ನ ಪ್ರಾಣಕ್ಕೆ ಆತಂಕವಿದೆ : ಗನ್ ಮ್ಯಾನ್ ಕೊಡಿ ಸರ್ಕಾರಕ್ಕೆ ನಟ ಚೇತಬ್ ಮನವಿ
( Megha Shetty as a producer after acting Jothe Jotheyali Serial)