Vaccination campaign : ನಾಳೆಯಿಂದ 12- 14 ರ ಮಕ್ಕಳಿಗೆ ಲಸಿಕಾ ಅಭಿಯಾನ : ಸಿದ್ಧತೆ ನಡೆಸಿದ ಆರೋಗ್ಯ ಇಲಾಖೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಿದ್ದರೂ ಕೊರೋನಾ ಭಯ ಸಂಪೂರ್ಣ ಮಾಯವಾಗಿಲ್ಲ. ಹೀಗಾಗಿ ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆಯಿಂದ ರಾಜ್ಯದಾದ್ಯಂತ 12-14 ವರ್ಷದ ಮಕ್ಕಳ ವ್ಯಾಕ್ಸಿನೇಷನ್ ಗೆ (Vaccination campaign) ಚಾಲನೆ ಸಿಗಲಿದೆ. ರಾಜ್ಯಾದ್ಯಂತ ಸುಮಾರು 20 ಲಕ್ಷಕ್ಕೂ ಹೆಚ್ಚು ಚಿಣ್ಣರಿಗೆ ‘ಕೊರ್ಬಿವ್ಯಾಕ್ಸ್’ ಲಸಿಕೆ ನೀಡಲಾಗುತ್ತಿದ್ದು. ರಾಜಧಾನಿಯಲ್ಲಿ 6-7 ಲಕ್ಷ ಮಕ್ಕಳಿಗೆ ಜೀವಾಮೃತ ನೀಡುವ ಗುರಿಯನ್ನ ಆರೋಗ್ಯ ಇಲಾಖೆ ಹೊಂದಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2021 ರ ಜನವರಿ 16 ರಿಂದ ಹಂತ ಹಂತವಾಗಿ ಆರಂಭವಾಗಿದ್ದ ಮಕ್ಕಳ ಲಸಿಕಾ ಅಭಿಯಾನ (Vaccination campaign) ಇಂದು 12-14 ವರ್ಷದ ವಯೋಮಾನ ದವರಿಗೆ ಲಸಿಕೆ ನೀಡುವ ಹಂತಕ್ಕೆ ಬಂದು ತಲುಪಿದೆ. ರಾಜದಲ್ಲಿ ಬುಧವಾರದಿಂದ 12-14 ವರ್ಷದೊಳಗಿನ ರಾಜ್ಯದ ಸುಮಾರು 20 ಲಕ್ಷ ಮಕ್ಕಳಿಗೆ ಹೈದರಾಬಾದ್ ಬಯೊಲಾಜಿಕಲ್ ಸಂಸ್ಥೆ ಅಭಿವೃದ್ದಿ ಪಡಿಸಿರುವ ‘ಕೊರ್ಬೆವ್ಯಾಕ್ಸ್’ ಲಸಿಕೆ ವಿತರಣೆ ಆರಂಭವಾಗಲಿದೆ. ರಾಜಧಾನಿಯಲ್ಲಿ ಸುಮಾರು 6-7 ಲಕ್ಷ ಮಕ್ಕಳನ್ನು ಬಿಬಿಎಂಪಿ ಗುರುತಿಸಿದ್ದು ಎಲ್ಲಾ ಮಕ್ಕಳಿಗೂ ವ್ಯಾಕ್ಸೀನ್ ನೀಡಲು ಪ್ಲಾನ್ ಮಾಡಲಾಗ್ತಿದೆ. ನಾಳೆ ಬೆಳಿಗ್ಗೆ 9.30ಕ್ಕೆ ಅಟಲ್ ಬಿಹಾರಿ ವಾಜಪೇಯಿ ಕಾಲೇಜಿನಲ್ಲಿ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದ್ದು. ಇದರ ಜೊತೆ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯರಿಗೂ ಬೂಸ್ಟರ್ ಡೋಸ್ ನೀಡುವ ಅಭಿಯಾನಕ್ಕೆ ಚಾಲನೆ ಸಿಗಲಿದೆ.

ರಾಜದಲ್ಲಿ ಲಸಿಕೆ ವಿತರಣೆ (Vaccination campaign) ಆರಂಭವಾಗ್ತಿರೋದರಿಂದ ಸದ್ಯ 20 ಲಕ್ಷಕ್ಕೂ ಹೆಚ್ಚಿನ ಡೋಸ್ ಕೊರ್ಬೆವ್ಯಾಕ್ಸ್ ಲಸಿಕೆಯನ್ನು ಆರೋಗ್ಯ ಇಲಾಖೆ ಸಂಗ್ರಹಿಸಿ ಇಟ್ಟುಕೊಂಡಿದ್ದು,ಮೊದಲ ಡೋಸ್ ಅಭಿಯಾನ 28 ದಿನ ನಡೆಯಲಿದ್ದು 28 ದಿನಗಳ ನಂತರ 2ನೇ ಡೋಸ್ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಹೇಳಿದೆ. ಮಕ್ಕಳಿಗೆ ಲಸಿಕೆ ವಿತರಿಸಲು ಕೈಗೊಂಡಿರುವ ಕ್ರಮಗಳೇನು ಎನ್ನೋದನ್ನು ಗಮನಿಸೋದಾದರೇ, ರಾಜಾದ್ಯಂತ 20 ಲಕ್ಷ, ಬೆಂಗಳೂರಿನಲ್ಲಿ 6-7 ಲಕ್ಷ ಮಕ್ಕಳಿಗೆ ವ್ಯಾಕ್ಸಿನೇಷನ್ ನೀಡಲಾಗುತ್ತದೆ.

ವಾಕ್ಸಿನ್ ಗಾಗಿ ( Vaccination campaign) ಕೋವಿಡ್ ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ರಿಜಿಸ್ರ್ಟೇಶನ್ ಮಾಡಿಕೊಳ್ಳಬೇಕು. 2008, 2009, 2010 ರಲ್ಲಿ ಜನಿಸಿದ ಮಕ್ಕಳು ಲಸಿಕೆ ಪಡೆಯಲು ಅರ್ಹರು. ಎಲ್ಲಾ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಷನ್ ನೀಡಲಾಗುತ್ತದೆ. ಇನ್ನು ಮಕ್ಕಳು ವ್ಯಾಕ್ಸಿನ್ ಪಡೆದ ನಂತರ 30 ನಿಮಿಷ ನಿಗಾವಹಿಸಲಾಗುವುದು ಎಂದು ಆರೋಗ್ಯ ಹೇಳಿದೆ.

ಇದನ್ನೂ ಓದಿ : ಚೀನಾದಲ್ಲಿ ಕೊರೊನಾ ಆರ್ಭಟ : ಮಹಾನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್‌

ಇದನ್ನೂ ಓದಿ : ಹಿಜಾಬ್‌ ಸಂಘರ್ಷ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಯ್ತು ಮೇಲ್ಮನವಿ ಅರ್ಜಿ

( Corona Vaccination campaign for children aged 12 – 14 tomorrow)

Comments are closed.