ಭಾನುವಾರ, ಏಪ್ರಿಲ್ 27, 2025
HomeCinemaMeghana Raj Chiranjeevi Sarja : ಪಯಣ ಪ್ರೀತಿಯ ಜೊತೆಗೆ : ಮೇಘನಾ ರಾಜ್‌ -ಚಿರಂಜೀವಿ...

Meghana Raj Chiranjeevi Sarja : ಪಯಣ ಪ್ರೀತಿಯ ಜೊತೆಗೆ : ಮೇಘನಾ ರಾಜ್‌ -ಚಿರಂಜೀವಿ ಸರ್ಜಾ ಹೊಸ ಪೋಟೋ ವೈರಲ್

- Advertisement -

ಪ್ರೀತಿ ಅನ್ನೋದೇ ಹಾಗೇ ಅದಕ್ಕೆ ಕಾಲ,ಸಮಯದ ಹಂಗಿರೋದಿಲ್ಲ. ಪ್ರೀತಿಸುವ ಜೀವಗಳು ನಮ್ಮೊಂದಿಗೆ‌ಇರಲಿ ಇಲ್ಲದೇ ಇರಲಿ ಪ್ರೀತಿ ಎಂದಿಗೂ ಮಾಸೋದಿಲ್ಲ. ಇಂತಹುದೇ ಒಲವಿನ ಪೋಟೋವೊಂದನ್ನು ಶೇರ್ ಮಾಡೋ ಮೂಲಕ ನಟಿ ಮೇಘನಾ ರಾಜ್ (Meghana Raj Chiranjeevi Sarja) ತಮ್ಮ ಪ್ರೀತಿಯ ಜೀವ ಚಿರುವನ್ನು ನೆನಪಿಸಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ 10 ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಸುಂದರ ದಾಂಪತ್ಯದ ಸವಿ ಸವಿಯುತ್ತಿದ್ದಾಗಲೇ ಹೊಸ ಅತಿಥಿ ಆಗಮನದ ಸುದ್ದಿಯೂ ಸಿಕ್ಕಿತ್ತು. ಹೀಗಿರುವಾಗಲೇ ನಟ ಚಿರು ಸರ್ಜಾ ಅಕಾಲಿಕವಾಗಿ ಹೃದಯಾಘಾತದಿಂದ ಸಾವನ್ನಪ್ಪಿದರು.

ಈ ಆಘಾತ ನಟಿ ಮೇಘನಾ ಸರ್ಜಾರನ್ನು ಇನ್ನಿಲ್ಲದಂತೆ ಕಾಡಿತ್ತು. ಪತಿ ನಿಧನದ ವೇಳೆ ಐದು ತಿಂಗಳ ಗರ್ಭಿಣಿಯಾಗಿದ್ದ ನಟಿ ಮೇಘನಾ ಅಕ್ಷರಷಃ ಕುಸಿದು ಹೋಗಿದ್ದರು. ಆದರೆ ಪತಿಯ ಮೇಲಿದ್ದ ಪ್ರೀತಿ ಹಾಗೂ ಉದರದಲ್ಲಿದ್ದ ಮಗುವನ್ನು ನೆನೆದ ಮೇಘನಾ ಎಲ್ಲ ದುಃಖವನ್ನು ಮರೆತಿದ್ದರು. ಆದರೆ ಮೇಘನಾ ಪತಿಯ ಅಗಲಿಕೆಯ ನೋವನ್ನು ಮರೆತರೇ ವಿನಃ ಪತಿಯನ್ನು ಅಥವಾ ಪತಿಯ ಪ್ರೀತಿಯನ್ನು ಮರೆತಿಲ್ಲ. ಹೀಗಾಗಿ ಆಗಾಗ ತಮ್ಮ ಹಳೆಯ ನೆನಪುಗಳನ್ನು , ತಾವು ಭೇಟಿ ನೀಡಿದ ಪ್ರವಾಸಿ ತಾಣದ ಪೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆಯಷ್ಟೇ ಮೇಘನಾ ಪತಿ ಚಿರು ತಮ್ಮ ಸ್ನೇಹಿತರ ಜೊತೆ ಓಡಾಡಿಕೊಂಡು ಬಂದ ಸ್ಥಳಗಳಿಗೆ ತಮ್ಮ ಸ್ನೇಹಿತೆಯರ ಗರ್ಲ್ಸ್ ಗ್ಯಾಂಗ್ ಜೊತೆ ಭೇಟಿ ನೀಡಿ ಚಿರು ನೆನಪುಗಳನ್ನು ಮತ್ತೆ ಸ್ಮರಿಸಿಕೊಂಡಿದ್ದರು.

ಪ್ರತಿ ಹಬ್ಬ ಬಂದಾಗಲೂ ಮೇಘನಾ ಪತಿ ಜೊತೆ ಹಬ್ಬ ಆಚರಿಸಿದ ಹಳೆಯ ಪೋಟೋಗಳನ್ನು ಶೇರ್ ಮಾಡಲು ಮರೆಯೋದಿಲ್ಲ. ಅಷ್ಟೇ ಅಲ್ಲ ತಾವು ಮನೆಯಲ್ಲಿ ನಿಂತು ಮಾಧ್ಯಮಗಳ ಜೊತೆ ಮಾತನಾಡುವಾಗಲೂ ಹಿನ್ನೆಲೆಯಲ್ಲಿ ಚಿರು ನಗುತ್ತಿರುವ ಪೋಟೋ ಕಾಣಿಸುವಂತೆ ಪ್ಲ್ಯಾನ್ ಮಾಡಿರುತ್ತಾರೆ. ಈಗ ಮತ್ತೊಮ್ಮೆ ಮೇಘನಾ ತಾವು ಮತ್ತು ಚಿರು ಫಾರಿನ್ ಟ್ರಿಪ್ ಹೋದಾಗಿನ ಪೋಟೋವೊಂದನ್ನು ಶೇರ್ ಮಾಡಿದ್ದಾರೆ. ಮದುವೆಯ ಹೊಸದರಲ್ಲಿ ಜೋಡಿಯಾಗಿ ವಿಹರಿಸಿದ ಪೋಟೋ ಶೇರ್ ಮಾಡಿಕೊಂಡ ಮೇಘನಾ ಅದಕ್ಕೊಂದು ಹೃದಯದ ಇಮೋಜಿ ಹಾಕೋದನ್ನು ಮರೆತಿಲ್ಲ.

ಇನ್ನು ಚಿರು ಅಗಲಿಕೆ ಬಳಿಕ ಮೇಘನಾರನ್ನು ಮನೆಮಗಳಂತೆ ಕಾಣ್ತಿರೋ ಅಭಿಮಾನಿಗಳು ಈ ಪ್ರೀತಿಯ ಜೋಡಿ ಪೋಟೋ ನೋಡಿ ದುಃಖದ ನಡುವೆಯೂ ಸುಖವಾಗಿರಿ ಮೇಘನಾ ಎಂದು ಶುಭಹಾರೈಸುತ್ತಿದ್ದಾರೆ. ಸದ್ಯ ರಿಯಾಲಿಟಿ ಶೋ ಹಾಗೂ ಸಿನಿಮಾಗಳ ಜೊತೆ ಇತ್ತೀಚಿಗೆ ಮೇಘನಾ ಜಾಹೀರಾತುಗಳಲ್ಲೂ ಕಾಣಿಸ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.

ಇದನ್ನೂ ಓದಿ : Salman khan at wedding: ನಟಿ ಪೂಜಾ ಹೆಗ್ಡೆ ಅಣ್ಣನ ಮದುವೆಯಲ್ಲಿ ಸಲ್ಮಾನ್‌ ಖಾನ್

ಇದನ್ನೂ ಓದಿ : Kiara- Siddharth wedding: ಬಾಲಿವುಡ್ ನಲ್ಲಿ ಮೊಳಗಿತು ಮಂಗಳವಾದ್ಯ: ಫೆಬ್ರವರಿ 6 ರಂದು ಕಿಯಾರಾ- ಸಿದ್ಧಾರ್ಥ್ ಕಲ್ಯಾಣ

Meghana Raj Chiranjeevi Sarja Photos goes Viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular