Traffic Fine Discount : ಟ್ರಾಫಿಕ್ ಫೈನ್ ನಲ್ಲಿ ಡಿಸ್ಕೌಂಟ್: ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ? ಇಲ್ಲಿದೆ ಡಿಟೇಲ್ಸ್

ಬೆಂಗಳೂರು : ನೂರಾರು ಭಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಾವಿರಾರು ರೂಪಾಯಿ ದಂಡ ಕಟ್ಟೋದನ್ನು ಬಾಕಿ ಉಳಿಸಿಕೊಂಡ ವಾಹನ ಸವಾರರಿಗೆ ಸಿಹಿಸುದ್ದಿ ಸಿಕ್ಕಿದೆ. ದಂಡ ಕಟ್ಟುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲೋಕ್ ಅದಾಲತ್ ಟ್ರಾಫಿಕ್ ಫೈನ್ ಪಾವತಿಗೆ ಡಿಸ್ಕೌಂಟ್ (Traffic Fine Discount) ನೀಡಿತ್ತು. ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ನ್ಯಾಯಾಲಯದ ಸೂಚನೆ ಮೇರೆಗೆ ಡಿಸ್ಕೌಂಟ್ ಘೋಷಿಸಿದ್ದರು. ಈ ಮಧ್ಯೆ ಟ್ರಾಫಿಕ್ ಪೊಲೀಸರಿಂದ ಕೇಸ್ ಹಾಗೂ ದಂಡದ ರಿಯಾಯಿತಿ ಚಾರ್ಟ್ ಬಿಡುಗಡೆಯಾಗಿದ್ದುಯಾವ್ಯಾವ ಕೇಸ್ ಗೆ ಎಷ್ಟೆಷ್ಟು ದಂಡ, ಎಷ್ಟು ಡಿಸ್ಕೌಂಟ್ ಅನ್ನೋ ಮಾಹಿತಿ ಇಲ್ಲಿದೆ. ಸುಮಾರು 44 ತರಹದ ವೈಯಲೇಷನ್ ಪಟ್ಟಿ ಮಾಡಿದ ಟ್ರಾಫಿಕ್ ಪೊಲೀಸರು ದಂಡ ಮಾಹಿತಿ ಬಿಡುಗಡೆ ಮಾಡಿದ್ದಾರೆ.

Traffic Fine Discount : ಯಾವ ಕೇಸ್‌ಗೆ ಎಷ್ಟ ದಂಡ ವಿನಾಯಿತಿ ?

ಪುಟ್ ಪಾತ್ ಪಾರ್ಕಿಂಗ್ : ಒಂದು ಸಾವಿರ ದಂಡ, 500 ರೂ ರಿಯಾಯಿತಿ.

ಡಿಫೆಕ್ಟೀವ್ ನಂಬರ್ ಪ್ಲೇಟ್ :
ಫರ್ಸ್ಟ್ ಟೈಮ್ ಕೇಸ್ – 500ರೂ ದಂಡ – 250 ರಿಯಾಯಿತಿ.
ರಿಪೀಟೆಡ್ ಕೇಸ್ – 1500ರೂ ದಂಡ – 750 ರಿಯಾಯಿತಿ.

ಜಂಪಿಂಗ್ ಸಿಗ್ನಲ್ : 500ರೂ ದಂಡ – 250ರೂ ರಿಯಾಯಿತಿ.
ಓವರ್ ಸ್ಪೀಡ್ – 1 ಸಾವಿರ ದಂಡ – 500 ರೂ ರಿಯಾಯಿತಿ.

ಓನ್ ವೇ
ಫರ್ಸ್ಟ್ ಟೈಂ – 500ರೂ ದಂಡ – 250 ರಿಯಾಯಿತಿ.
ರಿಪೀಟೆಡ್ ಕೇಸ್ – 1500 ದಂಡ – 750 ರಿಯಾಯಿತಿ.

ಫುಟ್ ಫಾತ್ ಡ್ರೈವಿಂಗ್
ಫರ್ಸ್ಟ್ ಟೈಂ – 500 ದಂಡ – 250 ರಿಯಾಯಿತಿ.
ರಿಪೀಟೆಡ್ ಕೇಸ್ – 1500 ದಂಡ – 750 ರಿಯಾಯಿತಿ.

ಯೂಸಿಂಗ್ ಮೊಬೈಲ್ ಎಲ್ಎಂವಿ
ಫರ್ಸ್ಟ್ ಟೈಂ – 3000 ದಂಡ – 1500 ರಿಯಾಯಿತಿ.
ರಿಪೀಟೆಡ್ ಕೇಸ್ – 10000 ದಂಡ – 5000 ರಿಯಾಯಿತಿ.

ಯೂಸಿಂಗ್ ಮೊಬೈಲ್ (ಬೈಕ್ ):1500 ದಂಡ -750 ರಿಯಾಯಿತಿ ‌
ಹೆಲ್ಮೆಟ್ ರಹಿತ ಚಾಲನೆ : 500 ದಂಡ – 250 ರಿಯಾಯಿತಿ.

ಸುಮಾರು 44 ತರಹದ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಪಟ್ಟಿ ರಿಲೀಸ್ ಮಾಡಿದ್ದಾರೆ. ಜನರು ಈಗ ಟ್ರಾಫಿಕ್ ಫೈನ್ಸ್ ತುಂಬಲು ಮುಗಿಬಿದ್ದಿದ್ದು, ಸರ್ವರ್ ಸಮಸ್ಯೆ ನಡುವೆಯೂ ಜನರು ಫೈನ್ ತುಂಬಿ ಹಣ ಉಳಿಸಿಕೊಳ್ಳೋ ಸರ್ಕಸ್ ನಲ್ಲಿದ್ದಾರೆ.

ಇದನ್ನೂ ಓದಿ : Andhra-karnataka Bus: ಆಂಧ್ರಪ್ರದೇಶ ಮತ್ತು ಕರ್ನಾಟಕ ನಡುವೆ ಒಪ್ಪಂದ: ಸಂಚಾರ ಆರಂಭಿಸಲಿದೆ ಸಾವಿರಾರು ಬಸ್

ಇದನ್ನೂ ಓದಿ : Assault on parking Attendant: ಶುಲ್ಕ ಪಾವತಿಸುವಂತೆ ಕೇಳಿದ ಪಾರ್ಕಿಂಗ್ ಅಟೆಂಡೆಂಟ್ ಮೇಲೆ ಹಲ್ಲೆ: ಆರೋಪಿ ಅರೆಸ್ಟ್

Discount on traffic fine How much is the fine for which rule violation Here are the details

Comments are closed.