ಮಂಗಳವಾರ, ಜೂನ್ 17, 2025
HomeCinemaಮೇಘನಾ ರಾಜ್ ಹೆಸರಲ್ಲಿ ಮೂಡಿತು ಚಿರು ಚಿತ್ರ….! ಕಲಾವಿದನ ಕೈಚಳಕಕ್ಕೆ ಮನಸೋತ ಸರ್ಜಾ ಕುಟುಂಬ..!!

ಮೇಘನಾ ರಾಜ್ ಹೆಸರಲ್ಲಿ ಮೂಡಿತು ಚಿರು ಚಿತ್ರ….! ಕಲಾವಿದನ ಕೈಚಳಕಕ್ಕೆ ಮನಸೋತ ಸರ್ಜಾ ಕುಟುಂಬ..!!

- Advertisement -
  • ಪೂರ್ಣಿಮಾ ಹೆಗಡೆ

ಬಾಳಿ ಬದುಕಬೇಕಿದ್ದ ಸ್ಯಾಂಡಲ್ ವುಡ್ ಹೀರೋ ಚಿರಂಜೀವಿ ಸರ್ಜಾ ನಿಧನದ ಬಳಿಕವೂ ಅಭಿಮಾನಿಗಳ ಅಭಿಮಾನ ಕೊಂಚವೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಮೇಘನಾರಾಜ್ ಹೆಸರಿನಲ್ಲಿ ಮೂಡಿ ಬಂದ ಚಿರು ಪೋಟೋ.

Meghanaraj Art Work

ಹೌದು ಚಿರು ಅಭಿಮಾನಿಯೊಬ್ಬರು ಕೇವಲ ಮೇಘನಾ ರಾಜ್ ಹೆಸರಿನಲ್ಲೇ ಚಿರು ಚಿತ್ರ ಬರೆಯುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ. ಇನ್ನು ಚಿರು ಪೋಟೋ ತನ್ನ ಹೆಸರಿನಲ್ಲಿ ಮೂಡಿರೋದನ್ನು ನೋಡಿ ಮೇಘನಾರಾಜ್ ಭಾವುಕರಾಗಿದ್ದು, ಖುಷಿಯಿಂದ ಪೋಟೋ ಹಾಗೂ ಚಿತ್ರ ಬಿಡಿಸುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

Meghanaraj Art Work 1

ಚಂದ್ರಿಕಾ ಆರ್ಟ್ಸ್ ಎಂಬ ಕಲಾ ಗ್ಯಾಲರಿಯ ಕಲಾವಿದ ಯುವಸಾಮ್ರಾಟ್ ಚಿರಂಜೀವಿ ಪೋಟೋವನ್ನು ಅವರ ಪ್ರೀತಿಯ ಕುಟ್ಟಿಮಾ ಹೆಸರಿನಲ್ಲೇ ಅರಳಿಸಿ ಮೇಘನಾ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮೇಘನಾ ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಚಿರು ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದು ಚಿರುವನ್ನು ಮೇಘನಾ ಹೆಸರಿನಲ್ಲಿ ನೋಡಿ ಸಂಭ್ರಮಿಸುತ್ತಿದ್ದಾರೆ.

Meghana Sarja Chiru 1 E1605237188921

ಚಿರು ಅಗಲಿ 6 ತಿಂಗಳು ಕಳೆಯುತ್ತ ಬಂದಿದ್ದರೂ ಇನ್ನೂ ಪ್ರತಿನಿತ್ಯ ಚಿರುವಿನ ಮೇಲೆ ಎಲ್ಲರಿಗೂ ಇರುವ ಅಭಿಮಾನ ಹೊರ ಬರುತ್ತಲೇ ಇದ್ದು ಸೋಷಿಯಲ್ ಮೀಡಿಯಾದಲ್ಲಂತೂ ಚಿರು ಪ್ರತಿನಿತ್ಯ ಹೈಲೈಟ್ ಆಗುತ್ತಲೇ ಇದ್ದಾರೆ.

Meghana 3 E1606542801929

ಐದು ತಿಂಗಳ ಗರ್ಭಿಣಿಯಾಗಿದ್ದಾಗ ಮೇಘನಾ ಚಿರುವನ್ನು ಕಳೆದುಕೊಂಡಿದ್ದು ಅಕ್ಟೋಬರ್ 22 ರಂದು ಗಂಡುಮಗುವಿಗೆ ಜನ್ಮ ನೀಡಿದ್ದರು. ಈ ಮಗುವನ್ನು ನೋಡಿದ ಎಲ್ಲರೂ ಜ್ಯೂನಿಯರ್ ಚಿರು ಎಂದು ಸಂಭ್ರಮಿಸುತ್ತಿದ್ದು ಸಧ್ಯದಲ್ಲೇ ಅದ್ದೂರಿಯಾಗಿ ಚಿರು ನಾಮಕರಣ ನಡೆಯಲಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular