ತುಪ್ಪದ ಬೆಡಗಿಗೆ ತಪ್ಪದ ಅನಾರೋಗ್ಯ….! ರಾಗಿಣಿ ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್…!!

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಕೆ‌ಲ‌ ತಿಂಗಳ ಹಿಂದೆ ಡ್ರಗ್ಸ್ ಡೀಲಿಂಗ್ ಹಾಗೂ ಬಳಕೆ ಕಾರಣಕ್ಕೆ ಬಂಧನಕ್ಕೊಳಗಾಗಿದ್ದ ರಾಗಿಣಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ಜೈಲಿನಲ್ಲೇ ಇದ್ದರು.

ಇದೀಗ ಅನಾರೋಗ್ಯದಿಂದ ಅಸ್ವಸ್ಥರಾಗಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜೈಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಸಿರಾಟದ ತೊಂದರೆ,ಬೆನ್ನು ನೋವು ಹಾಗೂ ಹೊಟ್ಟೆ ನೋವಿನಿಂದ‌ ಬಳಲುತ್ತಿರುವ ರಾಗಿಣಿ ತಮಗೆ ಚಿಕಿತ್ಸೆ ಕೊಡಿಸುವಂತೆ ಜೈಲಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರಂತೆ.

ಅಷ್ಟೇ ಅಲ್ಲ ತಮ್ಮ ಅನಾರೋಗ್ಯದ ಕುರಿತು ಹೆತ್ತವರ ಬಳಿಯೂ ರಾಗಿಣಿ ಸಂಕಷ್ಟ ತೋಡಿಕೊಂಡಿದ್ದರಂತೆ. ಈ ಹಿನ್ನೆಲೆಯಲ್ಲಿ ರಾಗಿಣಿಯನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ.ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಒಳಗಾಗಿದ್ದ ರಾಗಿಣಿಯನ್ನು ಒಂದು ದಿನದ ವಿಚಾರಣೆ ಬಳಿಕ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು.

ತನಿಖೆ ಹಾಗೂ ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದ ರಾಗಿಣಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು.

ರಾಗಿಣಿ ತಮ್ಮ ಅನಾರೋಗ್ಯದ ಪರಿಗಣಿಸಿ ಜಾಮೀನು ನೀಡಬೇಕೆಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೇ ಹೈಕೋರ್ಟ್ ಜಾಮೀನು ನಿರಾಕರಿಸಿ ಅರ್ಜಿ ವಜಾಗೊಳಿಸಿತ್ತು.

ಪ್ರಸ್ತುತ ರಾಗಿಣಿ ಬೇಲ್ ಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ರಾಗಿಣಿ ಬಳಿಕ ಬಂಧನಕ್ಕೊಳಗಾದ ನಟಿ ಸಂಜನಾ ಗೆ ಅನಾರೋಗ್ಯದ ಕಾರಣಕ್ಕೆ ಹೈಕೋರ್ಟ್ ಬೇಲ್ ನೀಡಿದ್ದು ಅವರು ಜೈಲಿನಿಂದ ಹೊರಬಂದಿದ್ದಾರೆ.

Comments are closed.