ಸಿನಿಮಾ ಕತೆಯಂತೇ ಬದುಕಿನಲ್ಲೂ ಏರಿಳಿತಗಳನ್ನು ಕಂಡ ಸಿಂಪಲ್, ಡಿಂಪಲ್ ನಟಿ ಮೇಘನಾ ರಾಜ್ ಸರ್ಜಾ (Meghanaraj Sarja) ಸದ್ಯ ಎಲ್ಲ ನೋವುಗಳ ಮಧ್ಯೆಯೂ ನಲಿವುಗಳನ್ನು ಕಂಡುಕೊಂಡಿದ್ದಾರೆ. ಈಮಧ್ಯೆ ಸಿನಿಮಾವನ್ನೇ ಬದುಕು ಎಂದುಕೊಂಡ ಮೇಘನಾಗೆ ತತ್ಸಮತದ್ಬವ (Tatsama Tadbhava) ಸಿನಿಮಾಕ್ಕೆ ಸಿಕ್ಕ ಕಮೆಂಟ್‌ವೊಂದು ಬದುಕಿನ ಬೆಸ್ಟ್ ಕಾಂಪ್ಲಿಮೆಂಟ್ ಎನ್ನಿಸಿದೆಯಂತೆ ಯಾವುದದು ಕಾಂಪ್ಲಿಮೆಂಟ್ ? ಮೇಘನಾಗೆ ಮನತುಂಬಿ ಹರಸಿದವ್ಯಾರು ? ಇಲ್ಲಿದೆ ಆ ಡಿಟೇಲ್ಸ್.

ಒಂದೆರಡು ವರ್ಷಗಳಲ್ಲೇ ಬದುಕಿನ ಅತಿದೊಡ್ಡ ಖುಷಿ ಹಾಗೂ ದುಃಖ ಎರಡನ್ನೂ ಕಂಡ ನಟಿ ಮೇಘನಾ ರಾಜ್ ಸರ್ಜಾ. ತಾಯ್ತನದ ಖುಷಿಯಲ್ಲಿದ್ದಾಗಲೇ ಪತಿಯನ್ನು ಕಳೆದುಕೊಂಡ ಮೇಘನಾ ಮಗನಲ್ಲಿ ಹೊಸ ಬದುಕಿನ ಭರವಸೆ ಕಂಡರು. ಬದುಕಿನಲ್ಲಿ ನಾಳೆಗಳ ಕನಸು ಮೂಡಿಸಿದ ಮಗನ ಜೊತೆ ಜೀವಿಸಲು ಶುರು ಮಾಡಿದ ಮೇಘನಾ ತಮ್ಮನ್ನು ಅಗಲಿದ ಪತಿ ಚಿರು ಸರ್ಜಾ ಆಸೆಯಂತೆ ಮತ್ತೆ ಬಣ್ಣದ ಲೋಕಕ್ಕೆ ಬಂದರು.
ಕಿರುತೆರೆ ಹಾಗೂ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದ ಮೇಘನಾ ರಾಜ್ ಸರ್ಜಾ ಮಗನನ್ನು ಬಿಟ್ಟಿರಲಾರದೇ ಸಿನಿಮಾಗಳಲ್ಲಿ ನಟಿಸುವ ಧೈರ್ಯ ಮಾಡಿರಲಿಲ್ಲ. ಆದರೆ ಹಿರಿತೆರೆಯ ಸೆಳೆತ ಅವರನ್ನು ಬಿಟ್ಟಿರಲಿಲ್ಲ.ಕೊನೆಗೆ ಚಿರು ಸ್ನೇಹಿತರ ಗುಂಪಿನ ಪನ್ನಗಾಭರಣ ನಿರ್ದೇಶನದಲ್ಲಿ ಮೇಘನಾ ಮತ್ತೆ ಸಿನಿಮಾ ರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿ ಬಿಟ್ಟರು.

ಇದನ್ನೂ ಓದಿ : ಸ್ಯಾಂಡಲ್ ವುಡ್ ಗೆ ಜೂನಿಯರ್ ಚಿರು ರಾಯನ್ ರಾಜ್ ಸರ್ಜಾ ? ಏನಂದ್ರು ಗೊತ್ತಾ ತಾಯಿ ನಟಿ ಮೇಘನಾ ರಾಜ್
ತತ್ಸಮ ತದ್ಭವ ಕತೆ ಕೇಳಿದ ಮೇಘನಾ ಗೆ ಚಿತ್ರಕಥೆ ಮನ ಸೆಳೆಯುವಂತಿದೆ ಎನ್ನಿಸಿತ್ತಂತೆ. ಆದರೆ ಈ ಸಿನಿಮಾ ಕತೆ ತನಗಾಗಿ ಚಿರು ಪ್ರಾಣ ಸ್ನೇಹಿತರು ಸಿದ್ಧಪಡಿಸಿದ್ದಾರೆ ಎಂಬ ಕಲ್ಪನೆ ಇರಲಿಲ್ಲವಂತೆ. ಆದರೆ ಪನ್ನಗಾಭರಣ ಒತ್ತಾಯಿಸಿದಾಗ ಮೇಘನಾ ಹಿಂಜರಿಕೆಯಿಂದಲೇ ಈ ಸಿನಿಮಾವನ್ನು ಒಪ್ಪಿಕೊಂಡರಂತೆ. ಈಗ ಸಿನಿಮಾ ಯಶಸ್ವಿ 25 ದಿನಗಳನ್ನು ಮುಗಿಸಿ ತನ್ನ ಪ್ರದರ್ಶನ ಮುಂದುವರೆಸಿದೆ.
ಈ ಸಿನಿಮಾದ ಮೂಲಕ ಹಿರಿ ತೆರೆಯ ಇಲ್ಲ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಮೇಘನಾಗೆ ಸಿನಿಮಾಗೊಂದು ಬೆಸ್ಟ್ ಕಾಂಪ್ಲಿಮೆಂಟ್ ಸಿಕ್ಕಿದೆಯಂತೆ. ಆ ಅಪರೂಪದ ವ್ಯಕ್ತಿಯ ಕಾಂಪ್ಲಿಮೆಂಟ್ ಸಿಗುತ್ತಿದ್ದಂತೆ ಮೇಘನಾ ತುಂಬಾ ಖುಷಿಯಾಗಿದ್ದು, ಸಿನಿಮಾ ರಂಗದಲ್ಲಿ ತಮಗೆ ಸಿಗುವ ಇನ್ನಷ್ಟು ಅವಕಾಶಗಳನ್ನು ಬಳಸಿಕೊಂಡು ಮುಂದುವರೆಯಲು ನಿರ್ಧರಿಸಿದ್ದಾರಂತೆ.

ಇದನ್ನೂ ಓದಿ : ಮತ್ತೆ ಮತ್ತೆ ಮೇಘನಾ ಮುಂದೇ ಎರಡನೇ ಮದುವೆ ಪ್ರಶ್ನೆ: ಮುಚ್ಚುಮರೆ ಇಲ್ಲದೇ ಕುಟ್ಟಿಮಾ ಕೊಟ್ರು ನೇರ ಉತ್ತರ
ಇಷ್ಟಕ್ಕೂ ಮೇಘನಾ ಅವರನ್ನು ದುಃಖದಿಂದ ಮೇಲೆತ್ತಿ ಸಿನಿಮಾಗದಲ್ಲೇ ಮುಂದುವರೆಯುವಂತೆ ಮತ್ತಷ್ಟು ಉತ್ಸಾಹ ತುಂಬಿದ ವ್ಯಕ್ತಿ ಯಾರು ಅಂದ್ರಾ ? ಅದು ಮತ್ಯಾರೂ ಅಲ್ಲ ದಿ.ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್. ಮೇಘನಾ ಸರ್ಜಾ ಸಿನಿಮಾ ಕ್ಷೇತ್ರಕ್ಕೆ ಮರಳಿದ ಸಂಗತಿ ತಿಳಿದಾಗಿನಿಂದಲೂ ಆಶ್ವಿನಿಯವರು ಮೇಘನಾರನ್ನು ಪ್ರೋತ್ಸಾಹಿಸುತ್ತಲೇ ಇದ್ದರಂತೆ.
ಅಷ್ಟೇ ಅಲ್ಲ ತತ್ಸಮ ತದ್ಭವ ಸಿನಿಮಾದ ಮೊದಲ ಶೋ ನೋಡಬೇಕೆಂಬ ಹಂಬಲವನ್ನು ವ್ಯಕ್ತಪಡಿಸಿದ್ದರಂತೆ. ಅದರಂತೆ ಮೇಘನಾ ತತ್ಸಮ ತದ್ಭವ ಸೆಲೆಬ್ರೆಟಿ ಶೋಗೆ ಮೇಘನಾ ರಾಜ್ ಸರ್ಜಾ ಅಶ್ವಿನಿಯವರನ್ನೇ ಮೊದಲು ಆಹ್ವಾನಿಸಿದ್ದರು.

ಇದನ್ನೂ ಓದಿ : ಇದನ್ನೂ ಓದಿ : 3 ವರ್ಷದ ಬಳಿಕ ಅಣ್ಣನ ಸಿನಿಮಾ ರಾಜಾಮಾರ್ತಾಂಡ ಜೊತೆ ಬರ್ತಡೇ: ಧ್ರುವ ಸರ್ಜಾ ಅಭಿಮಾನಿಗಳಿಗೆ ಆಹ್ವಾನ
ತತ್ಸಮ ತದ್ಭವ ಸಿನಿಮಾ ನೋಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ತುಂಬಾ ಖುಷಿಯಾಗಿದ್ದು, ನಿಮ್ಮನ್ನು ಕ್ಯಾಮರಾ ಎದುರು ನೋಡಲು ತುಂಬಾ ಖುಷಿಯಾಗುತ್ತದೆ. ನೀವು ಸುಂದರವಾಗಿ ನಟಿಸಿದ್ದೀರಿ. Meghana You Belongs To Cinemas ಎಂದಿದ್ದಾರಂತೆ.

ಅಶ್ವಿನಿಯವರ ಈ ಹೊಗಳಿಕೆ ಕೇಳಿದ ಮೇಘನಾ ರಾಜ್ ಅಕ್ಷರಷಃ ಕಣ್ಣೀರಾಗಿದ್ದು ಇದು ನನ್ನ ಜೀವನದಲ್ಲಿ ನಾನು ಪಡೆದ ಬೆಸ್ಟ್ ಕಾಂಪ್ಲಿಮೆಂಟ್ ಎಂದಿದ್ದಾರೆ. ಅಲ್ಲದೇ ನಾನೆಂದೂ ಸಿನಿಮಾ ಜೊತೆಗೆ ಸಾಗಲು ಈ ಮಾತುನನಗೆ ಶಕ್ತಿ ತುಂಬಿದೆ ಎಂದಿದ್ದಾರೆ. ಯಾಕೆಂದರೇ ಅಶ್ವಿನಿಯವರು ತುಂಬ ನೇರಮಾತಿನ, ಪಾರದರ್ಶಕ ವ್ಯಕ್ತಿತ್ವ . ಯಾರನ್ನೋ ಮೆಚ್ಚಿಸಲು ಮಾತನಾಡುವ ಸ್ವಭಾವ ಅವರಿಗಿಲ್ಲ. ಹೀಗಾಗಿ ಇದು ನನ್ನ ಬದುಕಿನ ಅತ್ಯಂತ ಬೆಸ್ಟ್ ಉಡುಗೊರೆ ಎಂದಿದ್ದಾರೆ ಮೇಘನಾ.
Meghana Raj Sarja heartwarming speech Kuttima remembers the motivation given by Ashwini Puneeth Rajkumar