3 ವರ್ಷದ ಬಳಿಕ ಅಣ್ಣನ ಸಿನಿಮಾ ರಾಜಾಮಾರ್ತಾಂಡ ಜೊತೆ ಬರ್ತಡೇ: ಧ್ರುವ ಸರ್ಜಾ ಅಭಿಮಾನಿಗಳಿಗೆ ಆಹ್ವಾನ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಬರ್ತಡೇ ಸಂಭ್ರಮದಲ್ಲಿದ್ದು ಅಕ್ಟೋಬರ್ 6 ರಂದು ತಮ್ಮ ಬರ್ತಡೇ ಸೆಲಿಬ್ರೇಟ್ (Dhruva Sarja Birthday)  ಮಾಡೋಕೆ ನಟ ಧ್ರುವ ಸರ್ಜಾ ಅಭಿಮಾನಿಗಳಿಗೆ ವಿಭಿನ್ನವಾದ ಆಫರ್‌ವೊಂದನ್ನು ನೀಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಈಗ ಬರ್ತಡೇ ಸಂಭ್ರಮ ಜೋರಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಗಾಂಧಿ ನಗರದ ಹಲವು ನಟರ ಹುಟ್ಟುಹಬ್ಬವಿದೆ. ಅಭಿಷೇಕ್ ಅಂಬರೀಶ್ ಬೆನ್ನಲ್ಲೇ ಈಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಬರ್ತಡೇ ಸಂಭ್ರಮದಲ್ಲಿದ್ದು ಅಕ್ಟೋಬರ್ 6 ರಂದು ತಮ್ಮ ಬರ್ತಡೇ ಸೆಲಿಬ್ರೇಟ್ (Dhruva Sarja Birthday)  ಮಾಡೋಕೆ ನಟ ಧ್ರುವ ಸರ್ಜಾ ಅಭಿಮಾನಿಗಳಿಗೆ ವಿಭಿನ್ನವಾದ ಆಫರ್‌ವೊಂದನ್ನು ನೀಡಿದ್ದಾರೆ.

After 3 years Chiranjeevi Sarja Movie Raja Marthanda Re Release Dhruva Sarja Birthday New Offer
Image Credit to Original Source

ನಟ ಧ್ರುವ ಸರ್ಜಾ ಕಳೆದ ಮೂರು ವರ್ಷದಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ತಮ್ಮ ಸಹೋದರ ಚಿರು ಸರ್ಜಾ (Chiranjeevi Sarja) ನಿಧನದ ಬಳಿಕ ಅದ್ದೂರಿ ಹುಟ್ಟುಹಬ್ಬ ಆಚರಣೆಯನ್ನೇ ಬಿಟ್ಟಿದ್ದರು. ಆದರೆ ಈ ಭಾರಿ ಸರ್ಜಾ ಮನೆಯಲ್ಲಿ ಒಂದೊಂದೆ ಖುಷಿಯ ಕ್ಷಣಗಳು ಎಂಟ್ರಿಕೊಟ್ಟಿದ್ದು ಒಂದು ವರ್ಷದ ಅಂತರದಲ್ಲಿ ಧ್ರುವ ಸರ್ಜಾ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

After 3 years Chiranjeevi Sarja Movie Raja Marthanda Re Release Dhruva Sarja Birthday New Offer
Image Credit to Original Source

ಇದರ ಬೆನ್ನಲ್ಲೇ ಮೇಘನಾ ರಾಜ್ ಸರ್ಜಾ (Meghana Raj Sarja) ಬಹುನೀರಿಕ್ಷಿತ ಸಿನಿಮಾ ತತ್ಸಮ‌ತದ್ಬವ ಕೂಡ ಸೂಪರ್ ಹಿಟ್ ಆಗಿದೆ. ಈ ಎಲ್ಲ ಖುಷಿಯಿಂದ‌ ಧ್ರುವ ರಾಜ್ ಸರ್ಜಾ ಈ ಭಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.

After 3 years Chiranjeevi Sarja Movie Raja Marthanda Re Release Dhruva Sarja Birthday New Offer
Image Credit to Original Source

ಹೀಗಾಗಿ ಸ್ವತಃ ಈ ಬಗ್ಗೆ ವಿಡಿಯೋವೊಂದನ್ನು ಶೇರ್ ಮಾಡಿರೋ ಧ್ರುವ ಸರ್ಜಾ ತಮ್ಮ ಅಭಿಮಾನಿಗಳಿಗೆ ಒಂದು ಆಫರ್ ನೀಡಿದ್ದಾರೆ. ಹೌದು ಧ್ರುವ ಸರ್ಜಾ ತಮ್ಮೊಂದಿಗೆ ಸೇರಿ ಸಿನಿಮಾ ನೋಡುತ್ತಾ ಹುಟ್ಟುಹಬ್ಬ ಆಚರಿಸುವಂತೆ ಅಭಿಮಾನಿಗಳಿಗೆ ಆಫರ್ ನೀಡಿದ್ದಾರೆ.

After 3 years Chiranjeevi Sarja Movie Raja Marthanda Re Release Dhruva Sarja Birthday New Offer
Image Credit to Original Source

ಅಕ್ಟೋಬರ್ 6 ನೇ ತಾರೀಕು ಧ್ರುವ ಸರ್ಜಾ ಹುಟ್ಟುಹಬ್ಬ. ಆಕ್ಷ್ಯನ್ ಪ್ರಿನ್ಸ್ ಧ್ರುವ ಸರ್ಜಾ ಅಂದು 34 ನೇ ವರ್ಷಕ್ಕೆ ಕಾಲಿಡಲಿದ್ದಾರೆ‌. ಅಂದು ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ ರಾಜಾ ಮಾರ್ತಾಂಡ ತೆರೆಗೆ ಬರಲಿದೆ.

ಇದನ್ನೂ ಓದಿ : ರಾಜಾಮಾರ್ತಾಂಡ್ ಸಿನಿಮಾ ಚಿರುವಿನ ಕನಸಾಗಿತ್ತು…! ಸಿನಿಮಾದ ಬಗ್ಗೆ ಮೇಘನಾ ರಾಜ್ ಮನದಾಳದ ಮಾತು…!!

ಹೀಗಾಗಿ ರಾಜಾಮಾರ್ತಾಂಡ (Raja Marthanda) ಸಿನಿಮಾದ ಫರ್ಸ್ಟ್ ಡೇ ಫರ್ಸ್ಟ್ ಶೋ ಸಿನಿಮಾಗೆ ಮೇನ್ ಥಿಯೇಟರ್ ಗೆ ಧ್ರುವ್ ಸರ್ಜಾ ಬರಲಿದ್ದಾರಂತೆ. ಅದೇ ಥಿಯೇಟರ್ ಗೆ ಬರುವಂತೆ ಹಾಗೂ ತನ್ನೊಂದಿಗೆ ಕುಳಿತು ಅಣ್ಣನ ಸಿನಿಮಾ‌ ನೋಡುವಂತೆ ಅಭಿಮಾನಿಗಳಿಗೆ ಧ್ರುವ ಸರ್ಜಾ ಪ್ರೀತಿಯ ಆಹ್ವಾನವನ್ನು ನೀಡಿದ್ದಾರೆ.

After 3 years Chiranjeevi Sarja Movie Raja Marthanda Re Release Dhruva Sarja Birthday New Offer
Image Credit to Original Source

ಮಾತ್ರವಲ್ಲ ನಮ್ಮಣ್ಣನ ಸಿನಿಮಾವನ್ನು ನೋಡಿ ಹಾರೈಸಿ ಎಂದು ಎಲ್ಲರಲ್ಲೂ ಪ್ರೀತಿ ಯಿಂದ ಮನವಿ ಮಾಡಿದ್ದಾರೆ. ರಾಜಾಮಾರ್ತಾಂಡ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಹೊತ್ತಲ್ಲಿ ಕಾರ್ಡಿಕ್ ಅರೇಸ್ಟ್ ಗೆ ನಟ ಚಿರು ಸರ್ಜಾ ಸಾವನ್ನಪ್ಪಿದ್ದರು.ಈ ವೇಳೆ ಚಿರು ಸರ್ಜಾ ಕೊನೆಯ ಸಿನಿಮಾ ರಾಜಾ‌ಮಾರ್ತಾಂಡ ಚಿತ್ರತಂಡಕ್ಕೆ ನಟ ಧ್ರುವ್ ಸರ್ಜಾ ತಾವೇ ಚಿತ್ರದ ಡಬ್ಬಿಂಗ್‌ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು.‌

ಇದನ್ನೂ ಓದಿ : ಧ್ರುವಸರ್ಜಾ ಪುತ್ರಿಗೆ ಸೋ ಕ್ಯೂಟ್ ಎಂದ ಅಣ್ಣ ರಾಯನ್ ಸರ್ಜಾ: ಮೇಘನಾ ರಾಜ್ ಸರ್ಜಾ ಶೇರ್ ಮಾಡಿದ ವಿಡಿಯೋ ವೈರಲ್

ಅದರಂತೆ ಈಗ ಇಡಿ ಸಿನಿಮಾದ ಡಬ್ಬಿಂಗ್ ಮಾಡಿಕೊಟ್ಟಿದ್ದಾರೆ. ಹೀಗಾಗಿ ಚಿರು ಅಭಿನಯದ ಕೊನೆಯ ಚಿತ್ರ ರಾಜಾಮಾರ್ತಾಂಡ ಅಣ್ಣನ ಅಭಿನಯ ಹಾಗೂ ತಮ್ಮನ ಧ್ವನಿಯಲ್ಲಿ ಮೂಡಿ ಬರಲಿದೆ.ಕಳೆದ ಡಿಸೆಂಬರ್ ನಲ್ಲೇ ರಾಜಾಮಾರ್ತಾಂಡ ಸಿನೆಮಾ ತೆರೆಗೆ ಬರಬೇಕಿತ್ತು. ಆದರೆ ಈಗ ಅಕ್ಟೋಬರ್ 6 ರಂದು ರಾಜಾಮಾರ್ತಾಂಡ ತೆರೆಗೆ ಬರಲಿದೆ.

ಸರ್ಜಾ ಕುಟುಂಬಕ್ಕೂ ಅಕ್ಟೋಬರ್ ತಿಂಗಳಿಗೂ ಅವಿನಾಭಾವ ನಂಟಿದೆ. ಅಕ್ಟೋಬರ 17 ರಂದು ಚಿರು ಸರ್ಜಾ ಜನಿಸಿದ್ದರೇ, ಅಕ್ಟೋಬರ್ 22 ರಾಯನ್ ರಾಜ್ ಸರ್ಜಾ ಬರ್ತಡೇ, ಅಕ್ಟೋಬರ್ 2 ರಂದು ಧ್ರುವ ಸರ್ಜಾ ಪುತ್ರಿ ಬರ್ತಡೆ ಇನ್ನು ಅಕ್ಟೋಬರ್ 6 ರಂದು ಸ್ವತಃ ಧ್ರುವ ಸರ್ಜಾ ಹುಟ್ಟುಹಬ್ಬ. ಈಗ ಚಿರು ಸಿನಿಮಾ ಕೂಡ ಅಕ್ಟೋಬರ್ 6 ರಂದೇ‌ ತೆರೆಗೆ ಬರ್ತಿದ್ದು ಸಂಭ್ರಮ ಇಮ್ಮಡಿಸಿದೆ.

ಇದನ್ನೂ ಓದಿ : ಮತ್ತೆ ಮತ್ತೆ ಮೇಘನಾ ಮುಂದೇ ಎರಡನೇ ಮದುವೆ ಪ್ರಶ್ನೆ: ಮುಚ್ಚುಮರೆ ಇಲ್ಲದೇ ಕುಟ್ಟಿಮಾ ಕೊಟ್ರು ನೇರ ಉತ್ತರ

ಈಗಾಗಲೇ ರಾಜಾಮಾರ್ತಾಂಡ ಸಿನಿಮಾದ ಬಗ್ಗೆ ಭಾವುಕರಾಗಿ ಮಾತಾಡಿರೋ ಚಿರು ಸರ್ಜಾ ಮಾವ ಹಾಗೂ ಹಿರಿಯ ನಟ ಸುಂದರ ರಾಜ್, ಇದನ್ನು ಚಿರು ಕೊನೆಯ ಸಿನಿಮಾ ಎನ್ನ ಬೇಡಿ. ಬದಲಾಗಿ ಚಿರು ಫೇರ್ವೆಲ್ ಸಿನಿಮಾ ಎಂದು ಹೇಳಿ. ಅಷ್ಟೇ ಅಲ್ಲ ಈ ಸಿನಿಮಾ ಗೆಲ್ಲಿಸಿ ನನ್ನ ಮಗನಿಗೆ ಗೌರವ ಸಲ್ಲಿಸಿ ಎಂದಿದ್ದರು. ಈಗ ಧ್ರುವ ಬರ್ತಡೆ ದಿನವನ್ನು ಅಣ್ಣನ ಸಿನಿಮಾ ನೋಡಿ ಸೆಲಿಬ್ರೆಟ್ ಮಾಡಲಿದ್ದಾರಂತೆ.

After 3 years Chiranjeevi Sarja Movie Raja Marthanda Re Release Dhruva Sarja Birthday New Offer

Comments are closed.