ತತ್ಸಮ ತದ್ಭವ ಸಿನಿಮಾ ಗೆಲುವಿನ ಖುಷಿಯಲ್ಲಿರೋ ನಟಿ ಮೇಘನಾ ರಾಜ್ ಸರ್ಜಾ (Meghana Raj Sarja) ಈಗ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಕಿರುತೆರೆ, ರಿಯಾಲಿಟಿ ಶೋ ಹಾಗೂ ಸಿನಿಮಾದಲ್ಲಿ ನಟಿಸುತ್ತಲೇ ನಟಿ ಮೇಘನಾ ರಾಜ್ ತಮ್ಮ ಬ್ಲಾಗ್ ಹಾಗೂ ಯೂಟ್ಯೂಬ್ ಗಳಲ್ಲೂ ಸಖತ್ ಇಂಟ್ರಸ್ಟಿಂಗ್ ಕಂಟೆಂಟ್ ಕೊಡೋದನ್ನು ಮರೆಯೋದಿಲ್ಲ. ಸದ್ಯ ಶೂಟಿಂಗ್ ನಿಂದ ಬ್ರೇಕ್ ಪಡೆದಿರೋ ಮೇಘನಾ ರಾಜ್ ಸರ್ಜಾ (Meghana Raj Free time) ತಮ್ಮ ಫ್ರೀ ದಿನದಲ್ಲಿ ಹೇಗಿರುತ್ತೇನೆ ಅನ್ನೋ ನೋ ಶೂಟ್ ಡೇ ಬ್ಲಾಗ್ (No Shoot Day Blog) ಶೇರ್ ಮಾಡಿದ್ದಾರೆ.

ನಟಿ ಮೇಘನಾ ಸರ್ಜಾ ಕೇವಲ ನಟಿ ಮಾತ್ರವಲ್ಲ ಬ್ಯುಸಿ ಮಮ್ಮಿ ಕೂಡ ಹೌದು. ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ (Rayana Raj Sarja) ಸದ್ಯ ಮೂರು ವರ್ಷದಲ್ಲಿದ್ದು ಫ್ರೀಸ್ಕೂಲ್ ಡೇಸ್ ನ್ನು ಎಂಜಾಯ್ ಮಾಡ್ತಿದ್ದಾನೆ. ಹೀಗಾಗಿ ಮೇಘನಾ ರಾಜ್ ತಮ್ಮ ವೃತ್ತಿ ಬದುಕಿನ ಜೊತೆ ಮಗನ ಬೇಕು ಬೇಡಗಳನ್ನೂ ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ.
ಇದನ್ನೂ ಓದಿ : ಧ್ರುವಸರ್ಜಾ ಪುತ್ರಿಗೆ ಸೋ ಕ್ಯೂಟ್ ಎಂದ ಅಣ್ಣ ರಾಯನ್ ಸರ್ಜಾ: ಮೇಘನಾ ರಾಜ್ ಸರ್ಜಾ ಶೇರ್ ಮಾಡಿದ ವಿಡಿಯೋ ವೈರಲ್
ಇದರ ಮಧ್ಯೆಯೂ ಮೇಘನಾ ತಮ್ಮ ಫೆವರಿಟ್ ಬ್ಲಾಗ್ ಗಾಗಿ ಸಮಯ ಹೊಂದಿಸಿಕೊಳ್ಳೋದನ್ನು ಮರೆತಿಲ್ಲ.ತತ್ಸಮ್ ತದ್ಭವ ಯಶಸ್ಸಿನ ಬಳಿಕ ಮೇಘನಾ ಹೊಸ ಸಿನಿಮಾವೊಂದಕ್ಕೆ ಸಹಿಹಾಕಿದ್ದಾರೆ. ಸದ್ಯದಲ್ಲೇ ಆ ಸಿನಿಮಾದ ಮಾಹಿತಿ ಕೊಡೋದಾಗಿಯೂ ಮೇಘನಾ ಹೇಳಿಕೊಂಡಿದ್ದಾರೆ.

ಯಾವುದೇ ಶೂಟಿಂಗ್ ಇಲ್ಲದೇ ಫ್ರೀಯಾಗಿ ಸಮಯ ಕಳಿತಿರೋ ಮೇಘನಾ ನೋಶೂಟ್ ಡೇ ಬ್ಲಾಗ್ ನಲ್ಲಿ ತಮಗೆ ಶೂಟಿಂಗ್ ಇಲ್ಲದ ದಿನ ಹೇಗಿರುತ್ತೆ ಅನ್ನೋದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಶೂಟಿಂಗ್ ಇಲ್ಲದ ವೇಳೆ ಲೇಟಾಗಿ ಎದ್ದೇಳೋ ಮೇಘನಾ ಎದ್ದ ತಕ್ಷಣ ಅರ್ಧ ಬಾಟಲ್ ನೀರು ಕುಡಿತಾರಂತೆ. ಅದಾದ ಬಳಿಕ ಮೇಘನಾ ಬ್ಲ್ಯಾಕ್ ಕಾಫಿ ಕುಡಿದು ಜಿಮ್ ಗೆ ಹೋಗ್ತಾರೆ.
ಇದನ್ನೂ ಓದಿ : ಸ್ಯಾಂಡಲ್ ವುಡ್ ಗೆ ಜೂನಿಯರ್ ಚಿರು ರಾಯನ್ ರಾಜ್ ಸರ್ಜಾ ? ಏನಂದ್ರು ಗೊತ್ತಾ ತಾಯಿ ನಟಿ ಮೇಘನಾ ರಾಜ್
ಮನೆ ಸನಿಹದಲ್ಲೇ ಇರೋ ಜಿಮ್ ನಲ್ಲೇ ಮೇಘನಾ ವರ್ಕೌಟ್ ಮಾಡ್ತಾರಂತೆ. ಇದೇ ಜಿಮ್ ನಲ್ಲಿ ಪತಿ ಚಿರು ಜೊತೆ ಮೇಘನಾ ವರ್ಕೌಟ್ ಮಾಡ್ತಿದ್ದರಂತೆ. ಈ ವಿಚಾರವನ್ನು ಬ್ಲಾಗ್ ನಲ್ಲಿ ವರ್ಕೌಟ್ ಮಾಡೋ ವೇಳೆ ಮೇಘನಾ ಹೇಳಿಕೊಂಡಿದ್ದಾರೆ. ಇದಲ್ಲದೇ ಮೇಘನಾ ಮಗನಿಗಾಗಿ ಶಾಪಿಂಗ್ ಸೇರಿದಂತೆ ತಮ್ಮ ಶೆಡ್ಯೂಲ್ಡ್ ಕೆಲಸಗಳನ್ನು ನೋ ಶೂಟ್ ಡೇ ನಲ್ಲೇ ಮಾಡಿಕೊಳ್ತಾರಂತೆ.

ಎಲ್ಲ ಕಡೆಗೂ ರಾಯನ್ ಕರೆದುಕೊಂಡು ಹೋಗೋಕೆ ಆಗಲ್ಲ ಅನ್ನೋ ಕಾರಣಕ್ಕೆ ಮೇಘನಾ ಮಗನನ್ನು ಮನೆಯಲ್ಲೇ ಬಿಟ್ಟು ಹೋಗ್ತಾರೆ. ಆದರೆ ಹಾಗೇ ಹೊರಗೆ ಹೋಗೋ ವೇಳೆ ರಾಯನ್ ಗೆ ತಾವು ಡಾಕ್ಟರ್ ಮನೆಗೆ ಹೋಗೋದಾಗಿ ಹೇಳಿ ಹೋಗೋದಿಕ್ಕೆ ಮರೆಯೋದಿಲ್ಲವಂತೆ.
ರಾಯನ್ ರಾಜ್ ಸರ್ಜಾ ಜೊತೆ ಸಮಯ ಕಳೆಯೋದನ್ನು ಇಷ್ಟ ಪಡೋ ಮೇಘನಾಗೆ ರಾಯನ್ ಜೊತೆ ಟಿವಿ ನೋಡೋದು , ಆಟ ಆಡೋದು ಪ್ರಿಯವಾದ ಕೆಲಸವಂತೆ. ಮೇಘನಾ ರಾಜ್ ಸರ್ಜಾ ಶೂಟ್ ಇದ್ದಾಗ ರಾಯನ್ ಮಿಸ್ ಮಾಡಿಕೊಳ್ಳೋದರಿಂದ ಶೂಟ್ ಇಲ್ಲದೇ ಇದ್ದಾಗ ಅವನ ಜೊತೆನೇ ಹೆಚ್ಚು ಸಮಯ ಕಳೆಯುತ್ತಾರಂತೆ.
ಇದನ್ನೂ ಓದಿ : ಮೇಘನಾ ರಾಜ್ ಸರ್ಜಾ ಮನಗೆದ್ದ ಮಾತು ! ಅಶ್ವಿನಿ ಪುನೀತ್ ರಾಜ್ ಕುಮಾರ್ ಕೊಟ್ಟ ಪ್ರೇರಣೆ ನೆನೆದ ಕುಟ್ಟಿಮಾ
ಸದ್ಯ ಮೇಘನಾ ರಾಜ್ ಸರ್ಜಾ ಬ್ಲಾಗ್ ನಲ್ಲಿ ಬ್ಯುಸಿಯಾಗಿದ್ದು ತಮ್ಮ ಮೇಕಪ್, ರೂಮ್ ಟೂರ್ ಸೇರಿದಂತೆ ಹಲವು ರೀತಿಯ ವಿಡಿಯೋ ಗಳನ್ನು ಶೇರ್ ಮಾಡಿದ್ದಾರೆ. ಇದಲ್ಲದೇ ತಮ್ಮ ಬ್ಲಾಗ್ ಕಲೆಕ್ಷನ್ ಸೇರಿದಂತೆ ವಿವಿಧ ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಮೇಘನಾ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ತತ್ಸಮ ತದ್ಬವ ಸಿನಿಮಾ ಸದ್ಯ ಹೌಸ್ ಫುಲ್ 30 ದಿನಗಳನ್ನು ಕಳೆದಿದ್ದು ಪ್ರದರ್ಶನ ಮುಂದುವರೆದಿದೆ.
Meghana Raj sarja routine like during the film shooting break ? Here is the exclusive video