ದಿನಭವಿಷ್ಯ17 ಅಕ್ಟೋಬರ್‌ 2023 ಪ್ರೀತಿಯೋಗ, ಆಯುಷ್ಮಾನ್‌ ಯೋಗದಿಂದ ಈ 3ರಾಶಿಯವರಿಗೆ ಅಧಿಕ ಧನಲಾಭ

Horoscope Today 17 October 2023 : ದ್ವಾದಶ ರಾಶಿಗಳ ಮೇಲೆ ಇಂದು ವಿಶಾಖ ನಕ್ಷತ್ರದ ಪ್ರಭಾವ ಇರುತ್ತದೆ. ಪ್ರೀತಿಯೋಗ, ಆಯುಷ್ಮಾನ್‌ ಯೋಗದಿಂದ ಮೇಷರಾಶಿ, ಸಿಂಹರಾಶಿ ಹಾಗೂ ತುಲಾರಾಶಿಯವರಿಗೆ ದಿಢೀರ್‌ ಧನಲಾಭವಾಗಲಿದೆ.

Horoscope Today : ಇಂದು ಅಕ್ಟೋಬರ್‌ 17 2023  ಮಂಗಳವಾರ. ದ್ವಾದಶ ರಾಶಿಗಳ ಮೇಲೆ ಇಂದು ವಿಶಾಖ ನಕ್ಷತ್ರದ ಪ್ರಭಾವ ಇರುತ್ತದೆ. ಪ್ರೀತಿಯೋಗ, ಆಯುಷ್ಮಾನ್‌ ಯೋಗದಿಂದ ಮೇಷರಾಶಿ, ಸಿಂಹರಾಶಿ ಹಾಗೂ ತುಲಾರಾಶಿಯವರಿಗೆ ದಿಢೀರ್‌ ಧನಲಾಭವಾಗಲಿದೆ. ಮೇಷರಾಶಿಯಿಂದ ಹಿಡಿದು ಮೀನರಾಶಿಯವರೆಗೆ ಒಟ್ಟು 12 ರಾಶಿಗಳಿಗೆ ಇಂದಿನ ದಿನಭವಿಷ್ಯ ಹೇಗಿದೆ ತಿಳಿಯೋಣ ಬನ್ನಿ.

ಮೇಷರಾಶಿ ದಿನಭವಿಷ್ಯ
ಇಂದು ಅನಿರೀಕ್ಷಿತವಾದ ಧನಲಾಭವನ್ನು ಪಡೆಯುತ್ತಿರಿ. ಕುಟುಂಬ ಸದಸ್ಯರ ಸಲಹೆ ನಿಮ್ಮ ವ್ಯವಹಾರಕ್ಕೆ ಲಾಭವನ್ನು ತರಲಿದೆ. ಆರೋಗ್ಯದ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಬೇಡ. ಕಾನೂನು ವಿಚಾರದಲ್ಲಿ ಧೀರ್ಘ ಕಾಲದಿಂದ ಬಾಕಿ ಉಳಿದಿದ್ದ ಸಮಸ್ಯೆ ಪರಿಹಾರ ಕಾಣಲಿದೆ. ಯಾರ ಜೊತೆಗೂ ವಾಗ್ವಾದಕ್ಕೆ ಇಳಿಯ ಬೇಡಿ.

ವೃಷಭರಾಶಿ ದಿನಭವಿಷ್ಯ
ಯಾವುದೇ ಹಿಂಜರಿಕೆ ಇಲ್ಲದೇ ಕೆಲಸ ಕಾರ್ಯಗಳನ್ನು ಮಾಡುವಿರಿ. ಕುಟುಂಬ ಸದಸ್ಯರು ಹತ್ತರವಾಗುತ್ತಾರೆ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗಲಿದೆ. ವೈವಾಹಿಕ ಸಮಸ್ಯೆಗಳು ಬಗೆ ಹರಿಯಲಿದೆ. ವಿರೋಧಿಗಳ ಕುರಿತು ಎಚ್ಚರವಾಗಿ ಇರುವುದು ಒಳಿತು.

ಮಿಥುನರಾಶಿ ದಿನಭವಿಷ್ಯ
ಯಾರಿಗಾದ್ರೂ ಸಾಲ ನೀಡಲು ಬಯಸಿದ್ದರೆ ಇಂದು ಕೊಡಬೇಡಿ. ಅದು ಹಿಂತಿರುಗಿ ಬರುವ ಸಾಧ್ಯತೆಗಳು ತೀರಾ ಕಡಿಮೆ. ಕೆಲಸದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿಬಾಯಿಸುವಿರಿ. ರಾಜಕಾರಣಿಗಳಿಗೆ ಅನುಕೂಲಕರ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಕರ್ಕಾಟಕರಾಶಿ ದಿನಭವಿಷ್ಯ
ಆಸ್ತಿ ವಿಚಾರದಲ್ಲಿ ನೀವಿಂದು ಶುಭ ಸುದ್ದಿಯೊಂದನ್ನು ಕೇಳುವಿರಿ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ಗುರುಗಳ ಸಹಾಯದಿಂದ ಮುನ್ನಡೆಯನ್ನು ಪಡೆಯುವಿರಿ. ಸರಕಾರಿ ಯೋಜನೆಗಳಿಂದ ಇಂದು ಪೂರ್ಣ ಪ್ರಯೋಜನ ದೊರೆಯಲಿದೆ.

ಇದನ್ನೂ ಓದಿ : ಆಪಲ್‌ ಐಪೋನ್‌ 15 ಖರೀದಿಯ ಮೇಲೆ ಭರ್ಜರಿ 40,000 ರೂ. ರಿಯಾಯಿತಿ

ಸಿಂಹರಾಶಿ ದಿನಭವಿಷ್ಯ
ನಿಮಗೆ ಇಂದು ಉತ್ತಮ ಅವಕಾಶಗಳು ದೊರೆಯಲಿದೆ. ಹಿರಿಯ ಸದಸ್ಯರ ಸಲಹೆ ನಿಮ್ಮ ವ್ಯವಹಾರಕ್ಕೆ ಪ್ರಯೋಜನವನ್ನು ನೀಡಲಿದೆ. ಹಳೆಯ ಸ್ನೇಹಿತರನ್ನು ಬೇಟಿಯಾಗುವ ಅವಕಾಶ ದೊರೆಯಲಿದೆ. ಸಾಲವಾಗಿ ಪಡೆದಿರುವ ಹಣವನ್ನು ಇಂದು ಹಿಂದಿರುಗಿಸಬೇಕಾಗುತ್ತದೆ. ಹಣಕಾಸಿನ ಸಮಸ್ಯೆಗೆ ಇಂದು ಪರಿಹಾರ ಸಿಗಲಿದೆ.

ಕನ್ಯಾರಾಶಿ ದಿನಭವಿಷ್ಯ
ವ್ಯಾಪಾರಿಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂದು ಸಮಸ್ಯೆ ಪರಿಹಾರವನ್ನು ಕಾಣಲಿದೆ. ದೂರದ ಪ್ರಯಾಣವನ್ನು ಸ್ವಲ್ಪ ಸಮಯದ ವರೆಗೆ ಮುಂದೂಡಿ. ನಿಮ್ಮ ಸಹೋದರರ ನಡುವೆ ಉತ್ತಮ ಬಾಂಧವ್ಯ ಮೂಡಲಿದೆ. ಮನಸ್ಸಿನಲ್ಲಿನ ನಕಾರಾತ್ಮಕ ಆಲೋಚನೆಗಳನ್ನು ದೂರಮಾಡಿ.

Horoscope today 17 october 2023 Zodiac sign Preeti yoga ayushman yoga benefits in kannada
Image Credit to Original Source

ತುಲಾರಾಶಿ ದಿನಭವಿಷ್ಯ
ಸಾಮಾಜಿಕವಾಗಿ ನಿಮ್ಮ ಬಗೆಗಿನ ಗೌರವ ಹೆಚ್ಚಾಗಲಿದೆ.ವೈಯಕ್ತಿಕ ವಿಚಾರಗಳಲ್ಲಿ ತಾಳ್ಮೆಯಿಂದ ಇರಿ. ನಕಾರಾತ್ಮಕ ಆಲೋಚನೆ ಗಳನ್ನು ದೂರ ಮಾಡಿಕೊಂಡು, ಸಕಾರಾತ್ಮಕವಾಗಿಯೇ ಯೋಚಿಸಿ. ಆರ್ಥಿಕವಾಗಿ ಇಂದು ಹೆಚ್ಚು ಲಾಭವನ್ನು ಪಡೆಯುವಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದೊರೆಯಲಿದೆ. ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯುವಿರಿ.

ವೃಶ್ಚಿಕರಾಶಿ ದಿನಭವಿಷ್ಯ
ಈ ರಾಶಿಯ ಜನರು ಇಂದು ಅನುಕೂಲಕರವಾದ ಫಲಿತಾಂಶಗಳನ್ನು ಪಡೆಯುತ್ತಾರೆ. ಕೆಲಸ ಕಾರ್ಯಗಳನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸುವಿರಿ. ಉದ್ಯೋಗಿಗಳಿಗೆ ಕೆಲಸ ಕಾರ್ಯಗಳ ಬಗ್ಗೆ ಚಿಂತೆ ಕಾಡಲಿದೆ. ಎಲ್ಲಾ ಯೋಜನೆಗಳು ನಿಮ್ಮ ನಿರೀಕ್ಷೆಯ ಅವಧಿಯಲ್ಲಿಯೇ ಪೂರ್ಣಗೊಳ್ಳಲಿದೆ.

ಇದನ್ನೂ ಓದಿ : ಬಿಪಿಎಲ್‌ ಕಾರ್ಡ್‌ದಾರರಿಗೆ ಇಂದಿನಿಂದ ಹೊಸ ರೂಲ್ಸ್‌ ಜಾರಿ : ಸರಕಾರದಿಂದ ಮಹತ್ವದ ಘೋಷಣೆ

ಧನಸ್ಸುರಾಶಿ ದಿನಭವಿಷ್ಯ
ಬುದ್ದಿವಂತಿಕೆಯಿಂದ ಕೆಲಸ ಕಾರ್ಯಗಳಲ್ಲಿ ಇಂದು ಯಶಸ್ಸು ಪಡೆಯುತ್ತೀಋಿ. ಹಣಕಾಸಿನ ವಹಿವಾಟಿನ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದಿರಿ. ಪಾಲುದಾರರ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವುದರಿಂದ ಅಧಿಕ ಲಾಭವಿದೆ. ಇಲ್ಲವಾದ್ರೆ ಸಮಸ್ಯೆ ಕಂಡು ಬರಲಿದೆ. ವಿದೇಶದಲ್ಲಿನ ಕುಟುಂಬ ಸದಸ್ಯರ ಭೇಟಿ.

ಮಕರರಾಶಿ ದಿನಭವಿಷ್ಯ
ಆಸ್ತಿ ಖರೀದಿಸುವ ನಿಮ್ಮ ಕನಸು ನನಸಾಗುತ್ತದೆ. ವ್ಯವಹಾರ ಕ್ಷೇತ್ರಗಳಲ್ಲಿ ಇಂದು ನೀವು ಅದ್ಬುತವಾದ ಪ್ರಯೋಜನವನ್ನು ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಇಂದು ಉತ್ತಮ ಫಲಿತಾಂಶ ದೊರೆಯಲಿದೆ. ಸುತ್ತಮುತ್ತಲಿನ ವಾತಾವರಣವು ಆಹ್ಲಾದಕರವಾಗಿ ಇರುತ್ತದೆ.

ಇದನ್ನೂ ಓದಿ : ಮಾಂಸಾಹಾರ ಊಟದ ಜೊತೆ ಹಾಲು ಕುಡಿದ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಾ !

ಕುಂಭರಾಶಿ ದಿನಭವಿಷ್ಯ
ಹಿರಿಯ ಸದಸ್ಯರ ಜೊತೆಗೆ ಯಾವುದೇ ಕಾರಣಕ್ಕೂ ವಾದವನ್ನು ಮಾಡಬೇಡಿ. ಮನೆಗೆ ಅತಿಥಿಗಳ ಆಗಮನದಿಂದ ಇಂದು ಖರ್ಚು ಅಧಿಕವಾಗಲಿದೆ. ಕುಟುಂಬ ಸದಸ್ಯರ ಬಗ್ಗೆ ಚಿಂತೆ ಮಾಡುವಿರಿ. ದೂರದ ಬಂಧುಗಳ ಭೇಟಿಯಿಂದ ನಿಮ್ಮ ಮನಸಿಗೆ ನೆಮ್ಮದಿ ದೊರೆಯಲಿದೆ. ಹೊಂದಾಣಿಕೆ ಅತೀ ಅಗತ್ಯ.

ಮೀನರಾಶಿ ದಿನಭವಿಷ್ಯ
ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ಕಾನೂನು ವಿಷಯಗಳಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ವ್ಯಾಪಾರಿಗಳು ಧೀರ್ಘಕಾಲದ ಪ್ರಯಾಣಕ್ಕೆ ಸಿದ್ದರಾಗಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಯಶಸ್ಸು ದೊರೆಯಲಿದೆ. ಸಂಗಾತಿಯಿಂದ ಸಹಕಾರ ದೊರೆಯಲಿದೆ.

Horoscope today 17 oc3 tober 202Zodiac sign Preeti yoga ayushman yoga benefits in kannada

Comments are closed.