ಭಾನುವಾರ, ಏಪ್ರಿಲ್ 27, 2025
HomeCinemaಮೇಘನಾ ರಾಜ್ ಸರ್ಜಾ ಯೂಟ್ಯೂಬ್ ಚಾನೆಲ್ ಗೆ ಸಖತ್ ರೆಸ್ಪಾನ್ಸ್: ಮಿಲಿಯನ್ಸ್ ವೀವ್ಸ್ ಪಡೆದ ವಿಡಿಯೋ ಯಾವುದು ಗೊತ್ತಾ...

ಮೇಘನಾ ರಾಜ್ ಸರ್ಜಾ ಯೂಟ್ಯೂಬ್ ಚಾನೆಲ್ ಗೆ ಸಖತ್ ರೆಸ್ಪಾನ್ಸ್: ಮಿಲಿಯನ್ಸ್ ವೀವ್ಸ್ ಪಡೆದ ವಿಡಿಯೋ ಯಾವುದು ಗೊತ್ತಾ ?

- Advertisement -

ಸ್ಯಾಂಡಲ್ ವುಡ್ ನ ಮುದ್ದಾದ ನಟಿ ಮೇಘನಾ ರಾಜ್ (Meghana Raj Sarja YouTube) ವೃತ್ತಿ ಬದುಕು ಹಾಗೂ ತಾಯ್ತನದ ನಡುವೆ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೇ ತಮ್ಮ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ನಟಿ ಮೇಘನಾ ಡಿಸೆಂಬರ್ 25 ರ ಕ್ರಿಸ್ಮಸ್ ಸಂಭ್ರಮದಂದೂ ತಮ್ಮದೇ ಯೂಟ್ಯೂಬ್ ಚಾನೆಲ್ ಲಾಂಚ್ ಮಾಡಿದ್ದಾರೆ. ಈ ಯೂಟ್ಯೂಬ್ ಈಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗ್ತಿದ್ದು, ಒಂದೊಂದು ವೀಡಿಯೋ ದಾಖಲೆಯ ವೀವ್ಸ್ ಪಡೆದುಕೊಳ್ತಿದೆ.

ನಟಿ ಮೇಘನಾ ರಾಜ್ ಕನ್ನಡ ಹಾಗೂ ಮಲೆಯಾಳಂ ಇಂಡಸ್ಟ್ರಿಯಲ್ಲಿ ಚಿರಪರಿಚಿತ ಹೆಸರು. ಸುಂದರ ಬದುಕಿನ ಒಡತಿಯಾಗಿದ್ದ ಮೇಘನಾ ಬದುಕು ಅನೀರಿಕ್ಷಿತಗಳ ಹೊಡೆತಕ್ಕೆ ಸಿಲುಕಿ ಎರಡು ವರ್ಷಗಳ ಕಾಲ ನಟಿಮಣಿ ಸಾಮಾಜಿಕ ಜಾಲ ತಾಣಗಳಿಂದಲೇ ಅಂತರ ಕಾಯ್ದುಕೊಂಡಿದ್ದರು. ಆದರೆ ಚಿರು ಸರ್ಜಾ ಅಗಲಿಕೆಯ ನೋವು ಮರೆಸುವಂತೆ ಭುವಿಗೆ ಬಂದ ಚಿರು ಪುತ್ರ ಮೇಘನಾ ಪಾಲಿಗೆ ಬದುಕಿನ ಆಸರೆಯಾದರು. ಮಗ ಜನಿಸಿದ ಬಳಿಕ ಮೇಘನಾ ನೋವಿನಿಂದ ಹೊರಬಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಅದರು.

ಮೇಘನಾ ಸರ್ಜಾ ಆಗಾಗ ಇನ್ ಸ್ಟಾಗ್ರಾಂನಲ್ಲಿ ಲೈವ್ ಬರ್ತಿದ್ದರು. ಈ ವೇಳೆ ಅಭಿಮಾನಿಗಳು ಕೇಳ್ತಿದ್ದ ಒಂದೇ ಒಂದು ಕೋರಿಕೆ‌ಮೇಘನಾ ಮೇಡಂ ನಿಮ್ಮದೊಂದು ಯೂಟ್ಯೂಬ್ ಚಾನೆಲ್ ಮಾಡಿ ಎಂದು. ಕೊನೆಗೂ ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿದ ಮೇಘನಾ ಸರ್ಜಾ, ಮೇಘನಾ ರಾಜ್ ಹೆಸರಿನಲ್ಲಿ ಹೊಸ ಯೂಟ್ಯೂಬ್ ಚಾನೆಲ್ ವೊಂದನ್ನು ಆರಂಭಿಸಿದ್ದಾರೆ. ಡಿಸೆಂಬರ್ 25 ರಂದು ಮೇಘನಾ ರಾಜ್ ಹೆಸರಿನಲ್ಲಿ ಕುಟ್ಟಿಮಾ ಆರಂಭಿಸಿದ ಈ ಯೂ ಟ್ಯೂಬ್ ಚಾನೆಲ್ ಗೆ ಅತ್ಯುತ್ತಮವಾದ ರೆಸ್ಪಾನ್ಸ್ ಬಂದಿದ್ದು ಈಗಾಗಲೇ ಮೇಘನಾ ಯೂಟ್ಯೂಬ್ 88 ಸಾವಿರ ಸಬ್ ಸ್ಕ್ರೈಬರ್ ದಾಟಿದೆ.

ಮಾತ್ರವಲ್ಲ ಮೇಘನಾ ಈ ಯೂ ಟ್ಯೂಬ್ ನಲ್ಲಿ ಮೊದಲ ವಿಡಿಯೋವಾಗಿ ರಾಯನ್ ರಾಜ್ ಸರ್ಜಾ ಎರಡನೇ ವರ್ಷದ ಬರ್ತಡೇ ವಿಡಿಯೋ ಹಂಚಿಕೊಂಡಿದ್ದರು. ಈ ವೀಡಿಯೋ ಕೇವಲ 10 ದಿನಗಳಲ್ಲಿ 1 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಮಾತ್ರವಲ್ಲದೇ ಮೇಘನಾ ರಾಯನ್ ರಾಜ್ ಸರ್ಜಾ ರನ್ನು ಬಿಟ್ಟು ತಮ್ಮ ಗರ್ಲ್ಸ್ ಗ್ಯಾಂಗ್ ಜೊತೆ ಹೋದ ಮೊದಲ ವಿದೇಶ ಪ್ರವಾಸ ಥೈಲ್ಯಾಂಡ್ ಟ್ರಿಪ್ ನ ಪೋಟೋವನ್ನು ಮೇಘನಾ ಹಂಚಿಕೊಂಡಿದ್ದಾರೆ.

ಇದಲ್ಲದೇ ಇನ್ ಸ್ಟಾಗ್ರಾಂನಲ್ಲಿ ತಮಗಿಷ್ಟವಾದ ಪೋಟೋ ಯಾವುದು, ತಮ್ಮ ಫೆವರಿಟ್ ಹಬ್ಬವಾದ ಕ್ರಿಸ್ಮಸ್ ಗೆ ಕ್ರಿಸ್ಮಸ್ ಟ್ರೀ ಡೆಕೋರೇಶನ್ ಹೇಗೆ ಎಂಬುದು ಸೇರಿದಂತೆ ಹಲವು ವಿಚಾರಗಳನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದು, ಎಲ್ಲ ವಿಡಿಯೋಗೂ ಲಕ್ಷಾಂತರ ಲೈಕ್ಸ್ ಹರಿದು ಬರ್ತಿದೆ. ಒಟ್ಟಿನಲ್ಲಿ ನಟಿ ಮೇಘನಾ ಕೂಡ ಸೋಷಿಯಲ್ ಮೀಡಿಯಾಕ್ಕೆ ಮರಳಿದ್ದು, ಅಭಿಮಾನಿಗಳಿಗೆ ಸಿಹಿಸುದ್ದಿ, ಅಪ್ಡೇಟ್ ವಿಡಿಯೋ ನೀಡಿ ಸೆಳೆದಿದ್ದಾರೆ.

ಇದನ್ನೂ ಓದಿ : Rayan Raj Sarja : ಅಪ್ಪನ ಸ್ನೇಹಕ್ಕೆ ಜೀವ ತುಂಬಿದ ಮಗ ರಾಯನ್‌ ಸರ್ಜಾ : ಮೇಘನಾ ರಾಜ್ ಸರ್ಜಾ ಶೇರ್ ಮಾಡಿದ್ರು ಸ್ಪೆಶಲ್ ಪೋಟೋ

ಇದನ್ನೂ ಓದಿ : ಮತ್ತೆ ಯಾವಾಗ ತೆರೆಗೆ ಬರ್ತಾರೆ ಮೇಘನಾ ರಾಜ್…! ಈ ಪ್ರಶ್ನೆಗೆ ಏನಂದ್ರು ಗೊತ್ತಾ ನ್ಯೂಮಮ್ಮಿ…!!

Meghana Raj Sarja YouTube channel Do you know which video got millions of views

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular