Dravid Suryakumar Yadav: “ಚಿಕ್ಕವನಿದ್ದಾಗ ಸೂರ್ಯ ನನ್ನ ಆಟ ನೋಡದಿದ್ದದ್ದೇ ಒಳ್ಳೇದಾಯ್ತು” ಟೀಮ್ ಇಂಡಿಯಾ ಕೋಚ್ ದ್ರಾವಿಡ್ ಹೀಗಂದಿದ್ಯಾಕೆ ?

ರಾಜ್’ಕೋಟ್: Dravid Suryakumar Yadav : ಟೀಮ್ ಇಂಡಿಯಾದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ (Suryakumar Yadav), ಆಟಕ್ಕೆ ಮರುಳಾಗದವರಾರು ? ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ (India Vs Sri Lanka t20 series) ಸಿಡಿಲಬ್ಬರದ ಶತಕ ಬಾರಿಸಿದ್ದ ಸೂರ್ಯಕುಮಾರ್ ಯಾದವ್’ಗೆ ಇಡೀ ಕ್ರಿಕೆಟ್ ಜಗತ್ತೇ ಬಹುಪರಾಕ್ ಹೇಳ್ತಿದೆ. ಈ ಮಧ್ಯೆ ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಸೂರ್ಯಕುಮಾರ್ ಆಟದ ಬಗ್ಗೆ ಅಚ್ಚರಿಯ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. “ಚಿಕ್ಕವನಿದ್ದಾಗ ಸೂರ್ಯ ನನ್ನ ಆಟ ನೋಡದಿದ್ದದ್ದೇ ಒಳ್ಳೇದಾಯ್ತು” ಎಂದು ದ್ರಾವಿಡ್ ಹೇಳಿದ್ದಾರೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶನಿವಾರ ನಡೆದ 3ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಕೇವಲ 51 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸಿದ್ದರು. ಈ ವಿಸ್ಫೋಟಕ ಇನ್ನಿಂಗ್ಸ್’ನಲ್ಲಿ 7 ಬೌಂಡರಿ ಹಾಗೂ 9 ಸಿಕ್ಸರ್’ಗಳು ಇದ್ದವು. ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಶತಕದ ನೆರವಿನಿಂದ ಭಾರತ 20 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ 16.4 ಓವರ್’ಗಳಲ್ಲಿ 137 ರನ್ನಿಗೆ ಆಲೌಟಾಗಿ 91 ರನ್’ಗಳಿಂದ ಭಾರತಕ್ಕೆ ಶರಣಾಗಿ ಸರಣಿಯನ್ನು 2-1ರ ಅಂತರದಲ್ಲಿ ಆತಿಥೇಯರಿಗೆ ಒಪ್ಪಿಸಿತು.

ಪಂದ್ಯದ ನಂತರ ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ. ಟಿವಿಗಾಗಿ ಶತಕವೀರ ಸೂರ್ಯಕುಮಾರ್ ಯಾದವ್ ಅವರ ಸಂದರ್ಶನ ನಡೆಸಿದರು. ಈ ವೇಲೆ ದ್ರಾವಿಡ್ ಮತ್ತು ಸೂರ್ಯಕುಮಾರ್ ಯಾದವ್ ಮಧ್ಯೆ ಈ ಸಂಭಾಷಣೆ ಸಾಕಷ್ಟು ಗಮನ ಸೆಳೆಯಿತು. “ಚಿಕ್ಕವನಿದ್ದಾಗ ನನ್ನ ಆಟವನ್ನು ನೋಡದ್ದೇ ಇದ್ದ ಸೂರ್ಯಕುಮಾರ್ ಯಾದವ್ ನನ್ನ ಜೊತೆ ಇದ್ದಾನೆ. ಬಹುಶಃ ಸೂರ್ಯಕುಮಾರ್ ಯಾದವ್ ಬೆಳೆಯುವ ವಯಸ್ಸಿನಲ್ಲಿ ನನ್ನ ಆಟವನ್ನು ನೋಡಿರಲ್ಲ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ” ಎಂದು ದ್ರಾವಿಡ್ ಹೇಳಿದ್ದಾರೆ.

ಇದಕ್ಕೆ ಉತ್ತರಿಸಿರುವ ಸೂರ್ಯಕುಮಾರ್ ಯಾದವ್ “ನಿಮ್ಮ ಆಟವನ್ನು ನಾನು ನೋಡಿದ್ದೇನೆ” ಎಂದಿದ್ದಾರೆ. ಸೂರ್ಯಕುಮಾರ್ ಯಾದವ್ ಅವರನ್ನು ಕೋಚ್ ದ್ರಾವಿಡ್ ಸಂದರ್ಶನ ನಡೆಸುತ್ತಿದ್ದಾಗ “ನೀನು ನನ್ನ ಆಟವನ್ನು ಚಿಕ್ಕವನಿದ್ದಾಗ ನೋಡಿಲ್ಲ, ಅದಂತೂ ಖಚಿತ” ಎಂದಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಸೂರ್ಯಕುಮಾರ್ ಯಾದವ್ “ಖಂಡಿತಾ, ನಿಮ್ಮ ಆಟವನ್ನು ನೋಡುತ್ತಾ ಬೆಳೆದವನು ನಾನು” ಎಂದಿದ್ದಾರೆ.

”ದಿ ಗ್ರೇಟ್ ವಾಲ್ ಆಫ್ ಇಂಡಿಯಾ” ಖ್ಯಾತಿಯ ರಾಹುಲ್ ದ್ರಾವಿಡ್ ತಾಳ್ಮೆಯ ಆಟಕ್ಕೆ ಹೆಸರಾಗಿದ್ದವರು. ಟೆಸ್ಟ್’ನಲ್ಲಂತೂ ದ್ರಾವಿಡ್ ಅವರ ಆಟ ಮನಮೋಹಕ. ತಮ್ಮ ನಿಧಾನಗತಿಯ ಆಟವನ್ನು ಸೂರ್ಯಕುಮಾರ್ ಯಾದವ್ ನೋಡಿದ್ದಿದ್ದರೆ ಈ ರೀತಿ ಸಿಡಿಲಬ್ಬರದ ಆಟವಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹಾಸ್ಯದ ಧಾಟಿಯಲ್ಲಿ ದ್ರಾವಿಡ್ ಹೇಳಿದ್ದಾರೆ. ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿರುವ ಭಾರತ ಜನವರಿ 10ರಂದು ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಸರಣಿಯ ಮೊದಲ ಪಂದ್ಯ ಮಂಗಳವಾರ ಅಸ್ಸಾಂನ ಗುವಾಹಟಿಯ ಬರ್ಸಪರದಲ್ಲಿರುವ ಅಸ್ಸಾಂ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ : KL Rahul praises Suryakumar yadav : ‘’ಬಾರಿ ಎಡ್ಡೆ ಗೊಬ್ಬಿಯ’’ ಸೂರ್ಯನ ಶತಕಕ್ಕೆ ತುಳುವಿನಲ್ಲಿ ಶಹಬ್ಬಾಸ್ ಹೇಳಿದ ರಾಹುಲ್

ಇದನ್ನೂ ಓದಿ : ಡ್ರೋನ್ ಉದ್ಯಮಕ್ಕೆ ಕೈ ಹಾಕಿದ ಎಂ.ಎಸ್ ಧೋನಿ, 2 ವಿಶ್ವಕಪ್ ವಿಜೇತ ನಾಯಕನ ಹೊಸ ಸಾಹಸ

India vs Srilanka series about Suryakumar Yadav Why did Team India coach Dravid say this

Comments are closed.