ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾರದ್ದು ಅನುರೂಪ ಪ್ರೀತಿ. ಕೆರಿಯರ್ ನಲ್ಲೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತವರು ಈ ಜೋಡಿ. ಇದಕ್ಕಾಗೇ ಪತಿಯ ಚಿತ್ರಕ್ಕೆ ಮೇಘನಾ ಸ್ವತಃ ಸಿಂಗರ್ ಆಗಿದ್ರು.

ಹೌದು ದಿ.ಚಿರಂಜೀವಿ ಸರ್ಜಾ ಚಿತ್ರ ಶಿವಾರ್ಜುನಕ್ಕಾಗಿ ಸ್ವತಃ ಮೇಘನಾ ಮೈಕ್ ಹಿಡಿದು ಡ್ಯುಯೆಟ್ ಸಾಂಗ್ ಹಾಡಿದ್ದರು. ಅಲ್ಲೊಂದು ನೀಲಿ ಬಾನು ಎಂಬ ರೋಮ್ಯಾಂಟಿಕ್ ಗೀತೆಗೆ ಮೇಘನಾ ಗಾಯಕ ಸಂಚಿತ್ ಹೆಗಡೆ ಜೊತೆ ಧ್ವನಿಗೂಡಿಸಿದ್ದರು.

ಈ ಹಾಡಿನ ರೆಕಾರ್ಡಿಂಗ್ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. ಅಭಿಮಾನಿಯೊಬ್ಬರು ಹಂಚಿಕೊಂಡ ಈ ವಿಡಿಯೋವನ್ನು ಸ್ವತಃ ಮೇಘನಾ ರಾಜ್ ಲೈಕ್ ಮಾಡಿದ್ದು, ಇನ್ ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೂ ಮುನ್ನವೂ ಮೇಘನಾ ರಾಜ್ ಪತಿಯ ಸಿನಿಮಾಗಾಗಿ ವಾಟ್ ಎ ಬ್ಯೂಟಿಫುಲ್ ಹುಡುಗಿ ಎಂಬ ಹಾಡು ಹಾಡಿದ್ದರು.
ಶಿವಾರ್ಜುನ್ ಸಿನಿಮಾ ಚಿರು ಕೆರಿಯರ್ ನ ಬಹು ನೀರಿಕ್ಷಿತ ಸಿನಿಮಾ ಆಗಿತ್ತು. ಶಿವತೇಜಾ ನಿರ್ದೇಶನದ ಈ ಸಿನಿಮಾ ಅಕ್ಷ್ಯನ್ ಆಂಡ್ ರೋಮಾಂಟಿಕ್ ಮೂವಿ ಯಾಗಿದ್ದು, ಅಮೃತಾ ಅಯ್ಯಂಗಾರ್ ಹಾಗೂ ಅಕ್ಷತಾ ಶ್ರೀನಿವಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಮಾರ್ಚ್ 13 ,2020 ರಂದು ತೆರೆ ಕಂಡ ಸಿನಿಮಾ ಪ್ರದರ್ಶನ ನಡೆಯುತ್ತಿದ್ದಾಗಲೇ ಲಾಕ್ ಡೌನ್ ನಿಂದ ಸ್ಥಗಿತಗೊಂಡಿತ್ತು. ಹೀಗಾಗಿ ಚಿರು ನಿರಾಸೆ ಗೊಂಡಿದ್ದರು.
2021 ರಲ್ಲಿ ಮತ್ತೊಮ್ಮೆ ಶಿವಾರ್ಜುನ್ ರೀ ರಿಲೀಸ್ ಮಾಡಲಾಗಿತ್ತು. ಈಗ ಈ ಸಿನಿಮಾ ಸಾಂಗ್ ಗೆ ಮೇಘನಾ ಧ್ವನಿಯಾದ ವಿಡಿಯೋ ಸಖತ್ ವೈರಲ್ ಆಗಿದೆ.