ಸೋಮವಾರ, ಏಪ್ರಿಲ್ 28, 2025
HomeCinemaMeghna Raj Sarja tour : ಚಿರು ನೆನಪುಗಳ ಜೊತೆಯೇ ಮೇಘನಾ ರಾಜ್‌ ಸರ್ಜಾ ಪ್ರಯಾಣ...

Meghna Raj Sarja tour : ಚಿರು ನೆನಪುಗಳ ಜೊತೆಯೇ ಮೇಘನಾ ರಾಜ್‌ ಸರ್ಜಾ ಪ್ರಯಾಣ : ಸ್ಪೆಶಲ್ ಪೋಟೋ ಶೇರ್ ಮಾಡಿದ ಕುಟ್ಟಿಮಾ

- Advertisement -

ಪ್ರೀತಿ ಅನ್ನೋದೇ ಹಾಗೇ ಒಮ್ಮೆ ಹುಟ್ಟಿದ ಭಾವಕ್ಕೆ ಕೊನೆಯಿಲ್ಲ. ಅಂತಹುದೇ ಪ್ರೀತಿಯಲ್ಲಿ 10 ವರ್ಷಗಳ ಕಾಲ ಜೀವಿಸಿ ವಿಧಿಯಾಟದಿಂದ ದೈಹಿಕವಾಗಿ ದೂರವಾದವರು ನಟ ಚಿರು ಸರ್ಜಾ ಹಾಗೂ ಮೇಘನಾ ಸರ್ಜಾ (Meghna Raj Sarja tour ) . ಆದರೆ ಚಿರು ಸದಾ ನನ್ನೊಂದಿಗೆ ಇದ್ದಾರೆ, ಇರುತ್ತಾರೆ ಎಂದು ಮೇಘನಾ ಸರ್ಜಾ ಸದಾಕಾಲ ಹೇಳುತ್ತಲೇ ಬಂದಿದ್ದರು. ಈಗಲೂ ಸದ್ಯ ಥೈಲ್ಯಾಂಡ್ ಪ್ರವಾಸದಲ್ಲಿರೋ ಮೇಘನಾ ಅಲ್ಲಿಯೂ ಚಿರುವನ್ನು ನೆನಪಿಸಿಕೊಳ್ಳುತ್ತ ಹೊಸ ಹೊಸ ಪೋಸ್ಟ್ ಶೇರ್ ಮಾಡ್ತಿದ್ದಾರೆ.

ಸದ್ಯ ತಮ್ಮ ಸಿನಿಮಾ ಶೂಟಿಂಗ್, ಜಾಹಿರಾತು, ರಿಯಾಲಿಟಿ ಶೋಗಳ ನಡುವೆ ಬ್ರೇಕ್ ಪಡೆದಿರೋ ನಟಿ ಮೇಘನಾ ರಾಜ್, ತಮ್ಮ ಆಪ್ತ ಸ್ನೇಹಿತೆಯರ ಜೊತೆ ಥೈಲ್ಯಾಂಡ್ ಗೆ ಹಾರಿದ್ದಾರೆ. ಅಲ್ಲಿ ಕೋಶಮಿ ಕಡಲ ತೀರದಲ್ಲಿ ಬಿಕನಿ ತೊಟ್ಟು ವಿಹರಿಸುತ್ತ, ಫ್ರೆಂಡ್ಸ್‌ ಜೊತೆ ಎಂಜಾಯ್ ಮಾಡುತ್ತಾ ತಮ್ಮ ದುಃಖವನ್ನು ಮರೆಯುವ ಪ್ರಯತ್ನ ಮಾಡ್ತಿದ್ದಾರೆ. ಆದರೂ ಚಿರು ಜೊತೆಗಿನ ನೆನಪುಗಳು ಅವರನ್ನು ಕಾಡುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಚಿರುವನ್ನು ನೆನಪಿಸಿಕೊಂಡು ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ತಿದ್ದಾರೆ.

lebua hotel resort ನಲ್ಲಿ ಉಳಿದುಕೊಂಡಿರೋ ಮೇಘನಾ ತಾವು ವಿಸಿಟ್ ಮಾಡಿದ ಪ್ಲೇಸ್ ಗಳಿಗೆ ಚಿರು ಕೂಡ ತಮ್ಮ ಸ್ನೇಹಿತರ ಜೊತೆ ವಿಸಿಟ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ‌. ಅಷ್ಟೇ ಅಲ್ಲ CREATE, RECREATE, REPEAT ಎಂದು ಟ್ಯಾಗ್ ಲೈನ್ ನೀಡಿ ತಾವು ಸ್ನೇಹಿತೆಯರ ಜೊತೆಗಿರುವ ಮತ್ತು ಚಿರು ಪನ್ನಗಾ, ಪ್ರಜ್ವಲ್ ಸೇರಿದಂತೆ ತಮ್ಮ ಸ್ನೇಹಿತರ ಗ್ಯಾಂಗ್ ಜೊತೆ ವಿಸಿಟ್ ಮಾಡಿದ್ದ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಮೇಘನಾ ಸ್ನೇಹಿತೆಯರ ಜೊತೆ ವಿದೇಶ ಪ್ರವಾಸದಲ್ಲಿದ್ದು, ಮಗನನ್ನು ಬಿಟ್ಟು ಒಂಟಿಯಾಗಿ ಪ್ರೆಂಡ್ಸ್ ಗ್ಯಾಂಗ್ ಜೊತೆ ಕುಟ್ಟಿಮಾ ಚಿಲ್‌ಮಾಡ್ತಿದ್ದಾರೆ.

ಪನ್ನಗಾಭರಣ ನಿರ್ದೇಶನದ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದ ಮೇಘನಾ ತಮ್ಮ ಬ್ಯುಸಿ ಶೆಡ್ಯೂಲ್ ಬಗ್ಗೆ ಮೊನ್ನೆ ಮೊನ್ನೆ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಅಷ್ಟೇ ಅಲ್ಲ ಯಾವಾಗಲೂ ನಾನು ಸ್ಟ್ರಾಂಗ್ ಇದ್ದಂತೆ ಎಲ್ಲವನ್ನು ಎದುರಿಸಿದಂತೆ ಕಂಡರೂ ನಾನು ಒಂಟಿಯಾಗಿದ್ದಾಗ ಎಲ್ಲ‌ ನೆನಪುಗಳು, ಪ್ರಶ್ನೆಗಳು ನನ್ನನ್ನೂ ಕಾಡಿ ಹೈರಾಣು ಮಾಡುತ್ತದೆ . ಎಷ್ಟೋ ದಿನ ರಾಯನ್ ಮುಖವನ್ನು ನೋಡುತ್ತ ನಾನು ರಾತ್ರಿಗಳನ್ನು ಕಳೆದಿದ್ದೇನೆ ಎಂದಿದ್ದರು.

ಇದನ್ನೂ ಓದಿ : Samyuktha Hegde:ಬಿಕನಿಯಲ್ಲಿ ಮರಳಿದ ಕಿರಿಕ್ ಬೆಡಗಿ: ಸಂಯುಕ್ತಾ ಹೊಸ ವಿಡಿಯೋ ವೈರಲ್

ಇದನ್ನೂ ಓದಿ : SS Rajamouli : ತೆರೆಗೆ ಬರಲಿದೆ ಆರ್‌ಆರ್‌ಆರ್‌ – 2 : ಸಿನಿಮಾದ ಬಗ್ಗೆ ಸುಳಿವು ನೀಡಿದ ಎಸ್‌ ಎಸ್‌ ರಾಜಮೌಳಿ

Meghna Raj Sarja tour with Chiru Sarja Memories Kuttima shares special photo

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular