Ravindra Jadeja – Rivaba Jadeja : ಗುಜರಾತ್ ಚುನಾವಣೆ: ಬಿಜೆಪಿ ಅಭ್ಯರ್ಥಿ ಪತ್ನಿ ಪರ ಮತ ಯಾಚಿಸಿದ ರವೀಂದ್ರ ಜಡೇಜಾ

ಜಾಮ್’ನಗರ : (Ravindra Jadeja – Rivaba Jadeja)ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರ ಪತ್ನಿ ರಿವಾಬಾ ಜಡೇಜಾ (Rivaba Jadeja) ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ (Gujarat assembly election) ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವಿಚಾರ ನಿಮ್ಗೆ ಗೊತ್ತೇ ಇದೆ. ಜಾಮ್’ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ರಿವಾಬಾ ಜಡೇಜಾ ಸ್ಪರ್ಧಿಸುತ್ತಿದ್ದಾರೆ.


ಜಡೇಜಾ ಪತ್ನಿಯ ಚುನಾವಣಾ ಸ್ಪರ್ಧೆಯ ವಿಚಾರವಾಗಿ ಲೇಟೆಸ್ಟ್ ಸುದ್ದಿ ಹೊರ ಬಿದ್ದಿದೆ. ಪತ್ನಿಯ ಪರ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡಿದ್ದಾರೆ. ಚುನಾವಣೆಗೆ ಸ್ಪರ್ಧಿಸಿರುವ ತಮ್ಮ ಪತ್ನಿಗೆ ಬೆಂಬಲ ನೀಡುವಂತೆ ಜಾಮ್’ನಗರ ಕ್ಷೇತ್ರದ ಜನರಲ್ಲಿ ಜಡೇಜಾ ಮನವಿ ಮಾಡಿದ್ದಾರೆ. ಈ ಬಗ್ಗೆ ವೀಡಿಯೊವೊಂದನ್ನು ಜಡೇಜಾ ಟ್ವೀಟ್ ಮಾಡಿದ್ದಾರೆ.

“ಗುಜರಾತ್ ಚುನಾವಣೆ ಬಂದಿದ್ದು, ಇದು ಟಿ20 ಪಂದ್ಯವಿದ್ದಂತೆ. ನನ್ನ ಪತ್ನಿ ಬಿಜೆಪಿ ಟಿಕೆಟ್‌ನಲ್ಲಿ ಮೊದಲ ಬಾರಿಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ! ನಾಳೆ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಜಾಮ್‌ನಗರದ ಜನರು ಮತ್ತು ಎಲ್ಲಾ ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನನ್ನ ಪತ್ನಿಯನ್ನು ಬೆಂಬಲಿಸುವಂತೆ ನಾನು ಮನವಿ ಮಾಡುತ್ತೇನೆ” ಎಂದು ವೀಡಿಯೊ ಸಂದೇಶದಲ್ಲಿ ರವೀಂದ್ರ ಜಡೇಜಾ ಹೇಳಿದ್ದಾರೆ.

ಇದನ್ನೂ ಓದಿ : Karnataka beat Vidarbha : ವಿದರ್ಭ ವಿರುದ್ಧ ಗೆದ್ದ ಕರ್ನಾಟಕ, ಮಯಾಂಕ್ ಬಳಗಕ್ಕೆ ಸತತ 2ನೇ ಜಯ

ಇದನ್ನೂ ಓದಿ : Ben Stokes : 2016ರ ದುಸ್ವಪ್ನ.., 2019ರಲ್ಲಿ ವಿಶ್ವಕಪ್, ಆಷಸ್, 2022ರಲ್ಲಿ ಮತ್ತೊಂದು ವಿಶ್ವಕಪ್; ಇಂಗ್ಲೆಂಡ್‌ನ ಗ್ರೇಟೆಸ್ಟ್ ವಿಶ್ವಕಪ್ ಹೀರೊ

ಇದನ್ನೂ ಓದಿ : ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್‌ : 2ನೇ ಬಾರಿಗೆ ಟಿ20 ವಿಶ್ವಕಪ್ ಕಿರೀಟ

ಗುಜರಾತ್’ನ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಧರ್ಮೇಂದ್ರ ಸಿಂಗ್ ಜಡೇಜಾ ಬದಲಿಗೆ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಮತ್ತೊಂದೆಡೆ, ರವೀಂದ್ರ ಜಡೇಜಾ ಅವರ ಸಹೋದರಿ ನೈನಾ ಜಡೇಜಾ ಸ್ಥಳೀಯ ಕಾಂಗ್ರೆಸ್ ಮುಖಂಡರಾಗಿದ್ದು, ಇತ್ತೀಚೆಗೆ ವಿರೋಧ ಪಕ್ಷದ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಜಾಮ್’ನಗರ ಉತ್ತರ ಕ್ಷೇತ್ರದಲ್ಲಿ ಜಡೇಜಾ ಪತ್ನಿಗೆ ಎದುರಾಳಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ನೈನಾ ಜಡೇಜಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳಲಾಗುತ್ತಿದೆ. ಒಂದು ವೇಳೆ ನೈನಾ ಜಡೇಜಾಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಜಾಮ್’ನಗರ ಉತ್ತರ ವಿಧಾನಸಭಾ ಕ್ಷೇತ್ರ ರವೀಂದ್ರ ಜಡೇಜಾ ಅವರ ಪತ್ನಿ ಮತ್ತು ಸಹೋದರಿಯ ಮುಖಾಮುಖಿಗೆ ಸಾಕ್ಷಿಯಾಗಲಿದೆ.

Ravindra Jadeja – Rivaba Jadeja : Gujarat Election: Ravindra Jadeja asked for votes for BJP candidate’s wife

Comments are closed.