ಮಂಗಳವಾರ, ಜೂನ್ 17, 2025
HomeCinemaಮೇಘನಾರಾಜ್ ಬದುಕಿನ ಮಿರಾಕಲ್ ಕ್ಷಣ…! ಪೋಟೋ ಜೊತೆ ಕುಟ್ಟಿಮಾ ಬರೆದ್ರು ಹೃದಯಸ್ಪರ್ಶಿ ಸಾಲು…!!

ಮೇಘನಾರಾಜ್ ಬದುಕಿನ ಮಿರಾಕಲ್ ಕ್ಷಣ…! ಪೋಟೋ ಜೊತೆ ಕುಟ್ಟಿಮಾ ಬರೆದ್ರು ಹೃದಯಸ್ಪರ್ಶಿ ಸಾಲು…!!

- Advertisement -

ಗರ್ಭಿಣಿಯಾಗಿದ್ದಾಗಲೇ ಗಂಡನನ್ನು ಕಳೆದುಕೊಂಡು ಕಂಗೆಟ್ಟ ಮೇಘನಾ ಪಾಲಿಗೆ ಬದುಕಿನ ಭರವಸೆಯಾಗಿ ಬಂದವನೇ ಜ್ಯೂನಿಯರ್ ಚಿರು. ಮುದ್ದು ಮುದ್ದಾಗಿ ಅಮ್ಮನ ಮುಖದ ನಗುವಾಗಿ ಬಂದ ಜ್ಯೂನಿಯರ್ ಚಿರು ತನ್ನ ಪುಟ್ಟ ಬೆರಳನ್ನು ಅಮ್ಮನ ಬೆರಳಿನೊಂದಿಗೆ ಬೆಸೆದಿದ್ದಾನೆ.

Meghana Raj 2
Meghana Sarja E1601052975543

ಈ ರೋಮಾಂಚಕ ಕ್ಷಣವನ್ನು ಪೋಟೋ ರೂಪದಲ್ಲಿ ಹಂಚಿಕೊಂಡಿರುವ ಮೇಘನಾ, ಇದು ಮಿರಾಕಲ್ ನ ಸಮಯ. ನನ್ನ ಪಾಲಿನ ಪುಟ್ಟ ಉಡುಗೊರೆಯಂತೇ ಬಂದ ಮಗ ತನ್ನ ಬೆರಳುಗಳಿಂದ ನನ್ನ ಬೆರಳನ್ನು ಹಿಡಿದುಕೊಂಡ. ಇದು ಜಗತ್ತಿನ ಅತಿ ಅಮೂಲ್ಯವಾದ ಗಿಫ್ಟ್ ಎಂದು ಬರೆದುಕೊಂಡಿದ್ದಾರೆ.

ತೊಟ್ಟಿಲಲ್ಲಿ ಬೆಚ್ಚಗೆ ಸ್ವೆಟರ್ ತೊಟ್ಟು ಮಲಗಿರುವ ಜ್ಯೂನಿಯರ್ ಚಿರು ತನ್ನ ಪುಟ್ಟ ಬೆರಳಿನಿಂದ ಮೇಘನಾರ ಬೆರಳನ್ನು ಹಿಡಿದ ಪೋಟೋವನ್ನು ಶೇರ್ ಮಾಡಿದ್ದಾರೆ. ಸದ್ಯ ಮೇಘನಾ ರಾಜ್ ಕೊರೋನಾದಿಂದ ಚೇತರಿಸಿಕೊಳ್ಳುತ್ತಿದ್ದು, ಮಗು ಜೊತೆ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Meghanaraj 1

ಮೇಘನಾ ರಾಜ್ ಅಕ್ಟೋಬರ್ 22 ರಂದು ಗಂಡುಮಗುವಿಗೆ ಜನ್ಮ ನೀಡಿದ್ದು, ಈಗಾಗಲೇ ಮೇಘನಾ ತವರಿನಿಂದ ನಡೆಯ ಬೇಕಾದ ತೊಟ್ಟಿಲ ಶಾಸ್ತ್ರ ನಡೆದಿದೆ. ಇನ್ನು ಅದ್ದೂರಿ ನಾಮಕರಣ ಬಾಕಿ ಇದ್ದು ಸದ್ಯದಲ್ಲೇ ನಾಮಕರಣದ ದಿನಾಂಕ ನಿಗದಿಯಾಗಬೇಕಿದೆ.

Meghana Raj 3


ಜ್ಯೂನಿಯರ್ ಚಿರುಗೆ ಸರಿ ಹೊಂದುವ ಹೆಸರು ಹುಡುಕುತ್ತಿರುವ ಎರಡು ಕುಟುಂಬದ ಸದಸ್ಯರು ಸಧ್ಯಕ್ಕೆ ಮಗುವಿಗೆ ಜ್ಯೂನಿಯರ್ ಚಿರು, ಚಿಂಟು ಎಂದೇ ಕರೆಯುತ್ತಿದ್ದು, ಪ್ರತಿಕ್ಷಣ ಮಗುವಿನ ಮುಖ ನೋಡುತ್ತ ಮನೆಮಗನ ಅಗಲಿಕೆ ನೋವು ಮರೆಯುವ ಪ್ರಯತ್ನದಲ್ಲಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular