ಮತ್ತೆ ಚಿಗುರಿತಾ ಪ್ರೀತಿ….?! ರಶ್ಮಿಕಾ ಸಂದೇಶಕ್ಕೆ ರಕ್ಷಿತ್ ಶೆಟ್ಟಿ ಮನತುಂಬಿದ ಹಾರೈಕೆ…!!

ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಅಂತ ಬೆಳ್ಳಂಬೆಳಗ್ಗೆ ಕಿರಿಕ್ ಪಾರ್ಟಿ ಹಾಡಿನ ಮಿಲಿಯನ್ ವಿವ್ಸ್ ಖುಷಿ ಹಂಚಿಕೊಂಡಿದ್ದ ರಶ್ಮಿಕಾಗೆ ಸಂಜೆ ಅಷ್ಟೊತ್ತಿಗೆ ಡಬ್ಬಲ್ ಖುಷಿ ಸಿಕ್ಕಿದೆ.

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ತಮ್ಮ ಚಿತ್ರ ಕಿರಿಕ್ ಪಾರ್ಟಿಯ ಸಾನ್ವಿ ಸಾಂಗ್ ಬೆಳಗೆದ್ದು ಯಾರ ಮುಖವ ನಾನು ನೋಡಿದೆ 100 ಮಿಲಿಯನ್ ವೀವ್ಸ್ ಖುಷಿ ಯನ್ನು ತಮ್ಮ ಟ್ವೀಟರ್ ಅಕೌಂಟ್ ನಲ್ಲಿ
ಹಂಚಿಕೊಂಡಿದ್ದರು.

ಅಷ್ಟೇ ಅಲ್ಲ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡ ಖುಷಿ ಸುದ್ದಿಗೆ ರಕ್ಷಿತ್ ಶೆಟ್ಟಿ, ಸಂಯುಕ್ತ ಹೆಗಡೆ ಯನ್ನು ಟ್ಯಾಗ್ ಮಾಡಿದ್ದರು. ಈ ಟ್ವೀಟ್ ಸಖತ್ ವೈರಲ್ ಆಗಿದ್ದು ರಶ್ಮಿಕಾ ತಮ್ಮ ಹಳೆ ಪ್ರೀತಿಯನ್ನು ಮತ್ತೆ ನೆನಪಿಸಿಕೊಂಡ್ರಾ ಅಂತ ಅಭಿಮಾನಿಗಳು ಅಚ್ಚರಿಗೊಂಡಿದ್ಧರು.

ಈ ಮಧ್ಯೆ ರಶ್ಮಿಕಾ ಟ್ಯಾಗ್ ಮಾಡಿದ್ದಕ್ಕೆ ಪ್ರೀತಿಯಿಂದಲೇ ರಿಪ್ಲೈ ಮಾಡಿರೋ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ, ರಶ್ಮಿಕಾಗೆ ಶುಭ ಹಾರೈಸಿದ್ದು, ಇನ್ನು ಎತ್ತರಕ್ಕೆ ಬೆಳೆಯಿರಿ. ನಿಮ್ಮೆಲ್ಲ ಕನಸುಗಳು ನನಸಾಗಲಿ ಎಂದಿದ್ದಾರೆ.

ರಕ್ಷಿತ್ ಶೆಟ್ಟಿ ಈ ಶುಭಹಾರೈಕೆಗೆ ರಶ್ಮಿಕಾ ರಿಪ್ಲೈ ನೀಡಲು ಹಿಂದೆ ಬಿದ್ದಿಲ್ಲ.‌ಹಗ್ ಮತ್ತು ಹ್ಯಾಪಿ ಸಂಕೇತದ‌ ಇಮೋಜಿಗಳನ್ನು ಕಳಿಸಿ ರಶ್ಮಿಕಾ ರಕ್ಷಿತ್ ಹಾರೈಕೆಗೆ ಸ್ಪಂದಿಸಿದ್ದಾರೆ.

ಒಟ್ಟಿನಲ್ಲಿ ಕಿರಿಕ್ ಪಾರ್ಟಿ ವೇಳೆ ಪ್ರೀತಿಸಿ ಎಂಗೇಜ್ ಮೆಂಟ್ ಮಾಡಿಕೊಂಡು ಬಳಿ ದೂರಾದ ಈ ಜೋಡಿ ಈಗ ಮತ್ತೆ ಕಿರಿಕ್ ಪಾರ್ಟಿಯ ಬೆಳಗೆದ್ದು ಯಾರ ಮುಖವ ನಾನು‌ ನೋಡಿದೆ ಸಾಂಗ್ ನೆಪದಲ್ಲಿ ಪರಸ್ಪರ ಹತ್ತಿರವಾದಂತಿದ್ದು ಈ ಪರಸ್ಪರ ಶುಭಹಾರೈಕೆ, ಟ್ವೀಟ್, ಪ್ರೀತಿ, ಗೌರವ ಯಾವ ಹಂತ ತಲುಪುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

ಸದ್ಯ ಪುಷ್ಪ ಸಿನಿಮಾ‌ ಸೇರಿದಂತೆ ಬಾಲಿವುಡ್ ನ ಅಲ್ಬಂ‌ ಸಾಂಗ್‌ ನಲ್ಲೂ ನಟಿಸುತ್ತಿರುವ ರಶ್ಮಿಕಾ ಕನ್ನಡದಿಂದ‌ ಬಹುತೇಕ ದೂರ ಉಳಿದಿದ್ದು, ಕನ್ನಡದಲ್ಲಿ ರಶ್ಮಿಕಾ ನಟನೆಯ ಪೊಗರು ರಿಲೀಸ್ ಗೆ ಸಿದ್ಧವಾಗಿದೆ.

Comments are closed.