ಖ್ಯಾತನಾಮಾಂಕಿತ ನಟ-ನಟಿಯರನ್ನೇ ತುಂಬಿಕೊಂಡಿರೋ ಸಿನಿಮಾ ಪೊನ್ನಿಯಿನ್ ಸೆಲ್ವನ್ (Ponniyin Selvan) ರಿಲೀಸ್ ಗೆ ಸಿದ್ಧವಾಗಿದೆ. ದಸರಾ ಹೊತ್ತಿನಲ್ಲಿ ಅಂದ್ರೆ ಸೆಪ್ಟೆಂಬರ್ 30 ರಂದು ತೆರೆಗೆ ಬರ್ತಿರೋ ಈ ಸಿನಿಮಾಗೆ ಈಗ ಇತರ ಸಿನಿಮಾಗಳಂತೆ ಬೆದರಿಕೆ ಎದುರಾಗಿದೆ. ಸಿನಿಮಾ ರಿಲೀಸ್ ಮಾಡಿದ್ರೇ ದಾಳಿ ಮಾಡೋದಾಗಿ ಬೆದರಿಕೆ ಬಂದಿದೆ.
ಸಾಕಷ್ಟು ಕುತೂಹಲ ಮೂಡಿಸಿದ ತಮಿಳಿನ ಪೊನ್ನಿಯಿನ್ ಸೆಲ್ವನ್ (Ponniyin Selvan) ಸಿನಿಮಾ ಸೆಪ್ಟೆಂಬರ್ 30 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಆದರೆ ಈಗ ಸಿನಿಮಾ ರಿಲೀಸ್ ಗೂ ಎರಡು ದಿನ ಮೊದಲು ಸಿನಿಮಾಗೆ ಬೆದರಿಕೆ ಎದುರಾಗಿದೆ. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು,ಹಿಂದಿಗೂ ಡಬ್ಬಿಂಗ್ ಆಗಿ ತೆರೆಗೆ ಬರಲಿರೋ ಈ ಸಿನಿಮಾಗೆ ಕೆನಡಾದಲ್ಲಿ ದಾಳಿಯ ಭೀತಿ ಎದುರಾಗಿದೆ.
ತಮಿಳು ಸೇರಿದಂತೆ ಹಲವು ಭಾಷೆಯ ಭಾರತೀಯ ಸಿನಿಮಾಗಳು ಕೆನಡಾ ಸೇರಿದಂತೆ ಹಲವು ಪ್ರದೇಶದಲ್ಲಿ ಪ್ರದರ್ಶನಗೊಳ್ಳುತ್ತವೆ. ಆದರೆ ಈಗ ಹ್ಯಾಮಿಲ್ಟನ್, ಲಂಡನ್ ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರಮಂದಿರದ ಮಾಲೀಕರಿಗೆ ಪೊನ್ನಿಯಿನ್ ಸೆಲ್ವನ್ ಸಿನಿಮಾ ರಿಲೀಸ್ ಮಾಡದಂತೆ ಈ ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಕೆನಡಾ ಸೇರಿದಂತೆ ವಿಶ್ವದಾದ್ಯಂತ ಪೊನ್ನಿಯಿನ್ ಸೆಲ್ವನ್ ಸಿನಿಮಾ ಹಂಚಿಕೆಯ ಜವಾಬ್ದಾರಿಯನ್ನು ಕೆಡಬ್ಲ್ಯೂ ಟಾಕೀಸ್ ವಹಿಸಿಕೊಂಡಿದೆ. ಆದರೆ ಈಗ ಚಿತ್ರ ರೀಲಿಸ್ ಮಾಡಿದ್ರೇ ದಾಳಿ ಮಾಡೋದಾಗಿ ಮೇಲ್ ಬಂದಿದೆ ಎಂಬ ಸಂಗತಿಯನ್ನು ಕೆಡಬ್ಲ್ಯೂ ಟಾಕೀಸ್ ಟ್ವೀಟ್ ಮೂಲಕ ಖಚಿತಪಡಿಸಿದೆ.
Poison gas release threat to ponniyin Selvan in Toronto Canada https://t.co/Ebk9RhgqOG
— Neander The Mammoth Hunter (@happyselvan) September 28, 2022
ಈ ಹಿಂದೆಯೂ ಹಲವು ಭಾರಿ ದಕ್ಷಿಣ ಭಾರತದ ಸಿನಿಮಾಗಳು ಕೆನಡಾದಲ್ಲಿ ರಿಲೀಸ್ ಆಗುವಾಗ ಬೆದರಿಕೆ ಎದುರಿಸಿವೆ. ದುಲ್ಕರ್ ಸಲ್ಮಾನ್ ನಟನೆಯ ಕುರುಪ್ ಸಿನಿಮಾ ಪ್ರದರ್ಶನದ ಬಳಿಕವೂ ಕೆನಡಾದಲ್ಲಿ ಕೆಲವು ಚಿತ್ರಮಂದಿರಗಳಿಗೆ ಹಾನಿ ಮಾಡಲಾಗಿತ್ತು. ಈಗಾಗಲೇ ಪೊನ್ನಿಯಿನ್ ಸೆಲ್ವನ್ ಒಟಿಟಿ ಹಕ್ಕು ಕೂಡ ಮಾರಾಟವಾಗಿದ್ದು ಬರೋಬ್ಬರಿ 125 ಕೋಟಿಗೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ರಸ್ತೆ ಗುಂಡಿ ಮಧ್ಯೆ ನಿಂತ ವಧು : ಕೇರಳ ವಧುವಿನ ಪೋಟೋಶೂಟ್ ವೈರಲ್
ಇದನ್ನೂ ಓದಿ : ”ಹೊಂದಿಸಿ ಬರೆಯಿರಿ” ಚಿತ್ರದ “ಓ ಕವನ” ಹಾಡು ಬಿಡುಗಡೆ ಮಾಡಿದ ಮೋಹಕತಾರೆ ರಮ್ಯಾ
ಇದನ್ನೂ ಓದಿ : ಸೆಟ್ಟೇರಿತು ರಾಜವರ್ಧನ್ ನಾಲ್ಕನೇ ಚಿತ್ರ – ‘ಗಜರಾಮ’ನಿಗೆ ಕ್ಲ್ಯಾಪ್ ಮಾಡಿದ ಜೂನಿಯರ್ ರೆಬೆಲ್ ಸ್ಟಾರ್
ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ಜಯಂ ರವಿ,ತ್ರಿಷಾ, ಪ್ರಕಾಶ್ ರಾಜ್ ಸೇರಿದಂತೆ ಹಲವು ಘಟಾನುಘಟಿ ನಟ-ನಟಿಯರು ಕಾಣಿಸಿಕೊಂಡಿರೋ ಈ ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಬೃಹತ್ ಸೆಟ್, ಅದ್ದೂರಿ ಮೇಕಪ್ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡ ಸಿನಿಮಾದ ಟ್ರೇಲರ್ ಈಗಾಗಲೇ ಸಾಕಷ್ಟು ನೀರಿಕ್ಷೆ ಹುಟ್ಟು ಹಾಕಿದ್ದು ಸಿನಿಮಾ ರಿಲೀಸ್ ಗೆ ಕ್ಷಣಗಣನೆ ನಡೆದಿದೆ.
Movie release attack sure: Threat mail to Ponniyin Selvan