(Movies released on sankranthi) ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಲವಾರು ಸಿನಿಮಾಗಳು ಬಿಡುಗಡೆಯಾಗಲಿವೆ. ಇನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಕನ್ನಡದ ಯಾವ ಸ್ಟಾರ್ ನಟರ ಸಿನಿಮಾಗಳು ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾಗುತ್ತಿಲ್ಲ. ಬದಲಾಗಿ ಸಹ ಆರ್ಕೆಸ್ಟ್ರಾ ಮೈಸೂರು ಹಾಗೂ ಮಂಕು ಬಾಯ್ ಫಾಕ್ಸಿ ಸಿನಿಮಾಗಳು ತೆರೆಕಾಣಲಿವೆ. ಆದರೆ ತೆಲುಗು ಮತ್ತು ತಮಿಳಿನಲ್ಲಿ ಮಾತ್ರ ಈ ಬಾರಿಯೂ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿವೆ.
ತೆಲುಗು ಮತ್ತು ತಮಿಳಿನ ಸಿನಿಮಾಗಳ ನಡುವೆ ಪೈಪೋಟಿ ನಡೆಯಲಿದ್ದು, ಯಾವ ಚಿತ್ರ (Movies released on sankranthi) ಹೆಚ್ಚು ಕಲೆಕ್ಷನ್ ಮಾಡುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ತೆಲುಗಿನಲ್ಲಿ ಬಾಲಕೃಷ್ಣ ನಟನೆಯ ವೀರ ಸಿಂಹ ರೆಡ್ಡಿ ಹಾಗೂ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಬಿಡುಗಡೆಯಾಗುತ್ತಿದ್ದರೆ, ತಮಿಳಿನಲ್ಲಿ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಸಿನಿಮಾಳು ತೆರೆಗೆ ಬರುತ್ತಿವೆ.
ಸದ್ಯ ಸಂಕ್ರಾಂತಿಯ ಪ್ರಯುಕ್ತ ತೆರೆಗೆ ಬರಲು ಸಜ್ಜಾಗಿರುವ ಈ ಎಲ್ಲಾ ಚಿತ್ರಗಳ ಟ್ರೇಲರ್ ಗಳು ಬಿಡುಗಡೆಗೊಂಡಿದ್ದು, ವಾರಿಸು ಸಿನಿಮಾದ ಟ್ರೇಲರ್ ಸಾಕಷ್ಟು ಟ್ರೋಲ್ ಗೆ ಒಳಾಗಾಗಿತ್ತು. ಇನ್ನೂ ತುನಿವು ಸಿನಿಮಾದ ಟ್ರೇಲರ್ ಸಾಧಾರಣ ಎಂಬ ಮಟ್ಟಿಗೆ ಪ್ರತಿಕ್ರಿಯೇ ಪಡೆದುಕೊಂಡಿದೆ. ಇನ್ನೂ ತೆಲುಗಿನ ಎರಡು ಸಿನಿಮಾದ ಟ್ರೇಲರ್ ಗಳೂ ಮೆಚ್ಚುಗೆಯನ್ನು ಪಡೆದುಕೊಂಡಿವೆ. ತಮಿಳಿನ ಎರಡು ಚಿತ್ರಗಳು ಒಂದೇ ದಿನ ತೆರೆ ಕಾಣಲಿದ್ದು, ತೆಲುಗಿನ ವೀರಸಿಂಹ ರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಬೇರೆ ಬೇರೆ ದಿನಗಳಲ್ಲಿ ತೆರೆ ಕಾಣಲಿದೆ.
ಇದನ್ನೂ ಓದಿ : Kantara Oscar rase: ಆಸ್ಕರ್‌ಗೆ 2 ವಿಭಾಗಗಳಲ್ಲಿ ಅರ್ಹತೆ ಪಡೆದ ಕಾಂತಾರ ದಂತಕಥೆ
ಇದನ್ನೂ ಓದಿ : ಎಂಎಸ್ ಧೋನಿ ಎಲ್ಲರಿಗೂ ಮಾದರಿ ಎಂದ ಮಲಯಾಳಂ ನಟ ಟೋವಿನೋ ಥಾಮಸ್
ಇದನ್ನೂ ಓದಿ : Jason Blum : ಆರ್‌ಆರ್‌ಆರ್ ಸಿನಿಮಾ ಆಸ್ಕರ್ ಗೆಲ್ಲುತ್ತೆ : ಭವಿಷ್ಯ ನುಡಿದ ಹಾಲಿವುಡ್ ನಿರ್ಮಾಪಕ
Movies released on sankranthi: These four movies will be released on Sankranti