niveditha gowda : ನಿವೇದಿತಾ ಗೌಡ.. ಕಲರ್ಸ್ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಈ ಚೆಲುವೆ ಬಳಿಕ ಹಿಂತಿರುಗಿ ನೋಡಲಿಲ್ಲ. ಕಲರ್ಸ್ ಕನ್ನಡದ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಈ ಮಾತಿನ ಮಲ್ಲಿ ಇದೀಗ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದ ಮೂಲಕ ಕನ್ನಡಿಗರನ್ನು ರಂಜಿಸುವ ಕೆಲಸವನ್ನು ಮಾಡ್ತಿದ್ದಾರೆ. ರ್ಯಾಪರ್ ಚಂದನ್ ಶೆಟ್ಟಿ ಪತ್ನಿಯಾಗಿರುವ ನಿವೇದಿತಾ ಗೌಡ ತಮ್ಮ ವಿಭಿನ್ನ ಕನ್ನಡದಿಂದಲೇ ಸುದ್ದಿಯಾಗುತ್ತಿರುತ್ತಾರೆ. ಇನ್ಸ್ಟಾಗ್ರಾಂನಲ್ಲಿಯೂ ಸಖತ್ ಆ್ಯಕ್ಟಿವ್ ಆಗಿರುವ ನಿವೇದಿತಾ ಗೌಡ ಯುಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ.

ನಿವೇದಿತಾ ಗೌಡ ಮಕ್ಕಳಂತೆ ಮಾಡ್ತಾರೆ, ದಡ್ಡಿ ರೀತಿ ವರ್ತಿಸುತ್ತಾರೆ ಎಂಬ ನೆಗೆಟಿವ್ ಕಮೆಂಟ್ ಕೂಡ ಮಾಡುವವರಿದ್ದಾರೆ. ಆದರೆ ಎಲ್ಲಾ ಕೊಂಕುಗಳನ್ನು ಮೆಟ್ಟಿ ನಿಂತು ನಿವೇದಿತಾ ಗೌಡ ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆಯನ್ನು ನೀಡ್ತಿದ್ದಾರೆ. ನಿವೇದಿತಾ ಗೌಡ ಇದೀಗ ಮತ್ತೊಂದು ಸಾಧನೆಯನ್ನು ಮಾಡಿದ್ದು ಮಿಸೆಸ್ ಇಂಡಿಯಾ ಇಂಕ್ ಸ್ಫರ್ಧೆಯಲ್ಲಿ ವಿಶೇಷ ಟೈಟಲ್ ಒಂದನ್ನು ಮುಡಿಗೇರಿಸಿಕೊಂಡಿದ್ದಾರೆ.
ನಿವೇದಿತಾ ಗೌಡ ತಾವು ಮಿಸೆಸ್ ಇಂಡಿಯಾ ಇಂಕ್ ಸ್ಫರ್ಧೆಯಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದಕ್ಕಾಗಿ ಅವರು ಸಣ್ಣ ಕೂಡ ಆಗಿದ್ದರು. ಇದೀಗ ಇವರ ಕಾರ್ಯಕ್ಕೆ ಮಿಸ್ ಇಂಡಿಯಾ Inc ವಿಶೇಷ ಟೈಟಲ್ ಒಂದನ್ನು ನೀಡಿ ಗೌರವಿಸಿದೆ. ಮಿಸೆಸ್ ಇಂಡಿಯಾ Inc ನ ಅಧಿಕೃತ ಪೇಜ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

ಮಿಸಸ್ ಇಂಡಿಯಾ Inc ಸ್ಫರ್ಧೆಯಲ್ಲಿ ಪೀಪಲ್ಸ್ ಚಾಯ್ಸ್ 2022 ಆಫ್ ಮಿಸ್ ಇಂಡಿಯಾ Inc ಎಂಬ ಟೈಟಲ್ ನಿವೇದಿತಾ ಗೌಡರ ಮುಡಿಗೇರಿದೆ. ಈ ಪ್ರಶಸ್ತಿಯನ್ನು ನಿವೇದಿತಾ ಗೌಡ ಟೀಂ ಇಂಡಿಯಾ ಮಾಜಿ ನಾಯಕ ಅಜರುದ್ದೀನ್ರಿಂದ ಸ್ವೀಕರಿಸುತ್ತಿರುವ ಫೋಟೋವನ್ನು ಮಿಸಸ್ ಇಂಡಿಯಾ Inc ಅಧಿಕೃತ ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿ : Dinesh Gunawardena : ಶ್ರೀಲಂಕಾದ ನೂತನ ಪ್ರಧಾನಿಯಾಗಿ ದಿನೇಶ್ ಗುಣವರ್ದೆನಾ ಪ್ರಮಾಣ ವಚನ
ಇದನ್ನೂ ಓದಿ : Akasa Air : ನೂತನ ಆಕಾಸ ಏರ್ಲೈನ್ನಿಂದ ಬುಕ್ಕಿಂಗ್ ಆರಂಭ : ಆ.7ರಂದು ಮೊದಲ ವಿಮಾನ ಹಾರಾಟ
mrs niveditha gowda winner of people s choice 2022 of mrs india inc