Photo of the planet Pluto : ಪ್ಲುಟೊ ಮಳೆಬಿಲ್ಲಿನ ಬಣ್ಣ ಹೊಂದಿದೆಯಾ!! ಹಾಗಾದ್ರೆ ನಿಜವಾಗಿಯೂ  ಹೇಗಿದೆ ?

Photo of the planet Pluto : ಎಲ್ಲಾ ಗ್ರಹಗಳು (planet) ತನ್ನದೆ ಆದ ಭಿನ್ನತೆಯಿಂದ ಗುರುತಿಸಿಕೊಂಡಿದೆ. ನಮ್ಮ ಗ್ರಹದ ಹೊರತಾಗಿ ಹೆಚ್ಚಿನ ಗ್ರಹಗಳು ತುಂಬಾ ವರ್ಣಮಯವಾಗಿರುವುದಿಲ್ಲ. ಅವುಗಳು ಸಾಮಾನ್ಯವಾಗಿ ಕೆಂಪು, ನೀಲಿ, ಕಂದು ಅಥವಾ ಬೂದು ಬಣ್ಣಗಳಲ್ಲಿ ಇವೆ.  ಇತ್ತೀಚಿಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ಲುಟೊ (American space agency NASA) ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಚಿತ್ರವನ್ನು (shared photo in Instagram) ಹಂಚಿಕೊಂಡಿದ್ದಾರೆ. ಇದೀಗ ಈ ಚಿತ್ರವು ಸಾಕಷ್ಟು ಆಸಕ್ತಿಯನ್ನು ಹುಟ್ಟುಹಾಕಿದೆ.

ಆದಾಗ್ಯೂ, NASA , “ಪ್ಲುಟೊ ನಿಜವಾಗಿಯೂ ಸೈಕೆಡೆಲಿಕ್‌ ಬಣ್ಣಗಳಿಂದ ಕಂಗೊಳಿಸ ಚಿತ್ರವಲ್ಲ, ಇದು ನ್ಯೂ ಹೊರಿಝೋನ್‌ ವಿಜ್ಞಾನಿಗಳು ಗ್ರಹದ ವಿಭಿನ್ನ ಪ್ರದೇಶಗಳನ್ನು ಅನೇಕ ಸೂಕ್ಷ್ಮ ಬಣ್ಣ ನೀಡಿ ಹೈಲೈಟ್ ಮಾಡಲಾಗಿದೆ. ಎಂದು ಸ್ಪಷ್ಟನೆ ನೀಡಿದ್ದಾರೆ ” ಇನ್ಸ್ಟಾಗ್ರಾಮ್ ಫೋಟೋದಲ್ಲಿ ಪ್ಲುಟೊದ ವಿವಿಧ ಪ್ರದೇಶಗಳನ್ನು ಪ್ರತ್ಯೇಕಿಸುವ ಬಣ್ಣ ತೋರಿಸಲಾಗಿದೆ. ಗ್ರಹದ ಎಡಭಾಗವು ಹೆಚ್ಚಾಗಿ ನೀಲಿ ಮತ್ತು ಹಸಿರು ಬಣ್ಣ ಜೊತೆಗೆ ನೇರಳೆ ಸುಳಿಗಳನ್ನು ಹೊಂದಿದೆ ಆದರೆ ಬಲಭಾಗದ  ಮೇಲ್ಭಾಗದಲ್ಲಿ ಹಳದಿ ಹಸಿರು ಬಣ್ಣ, ಕೆಲಭಾಗದಲ್ಲಿ ಕೆಂಪು-ಕಿತ್ತಳೆ ಬಣ್ಣಗಳಿಂದ ಕೂಡಿದ. ನೋಡುಗರನ್ನು ಇದು ವಿಸ್ಮಯಗೊಳಿಸಿದೆ.

ಈ ಚಿತ್ರವನ್ನು ನ್ಯೂ ಹೊರೈಜನ್ಸ್ ವಿಜ್ಞಾನಿ ರಚಿಸಿದ್ದು. ವಾಸ್ತವವಾಗಿ ಗ್ರಹದ ವಿಭಿನ್ನ ಪ್ರದೇಶಗಳಲ್ಲಿ, ವಿವಿಧ ರೀತಿಯ ಬಣ್ಣಗಳನ್ನು ತೋರಿಸಲಾಗಿದೆ. ಇನ್ನು ಬಾಹ್ಯಾಕಾಶ ಸಂಸ್ಥೆಯು “ಪ್ಲುಟೊ ವೈವಿಧ್ಯಮಯವಾದ ಮೇಲ್ಪದರವನ್ನು ಹೊಂದಿದೆ ಜೊತೆಗೆ ಯುರೋಪಿನ ಜಂಬಲ್ ಪರ್ವತದಂತೆ ಇದೆ. ಎಂದು ಹಂಚಿಕೊಂಡಿದ್ದಾರೆ. ನ್ಯೂ ಹೊರೈಜನ್ಸ್ ಬಾಹ್ಯಾಕಾಶ ನೌಕೆ  ಜನವರಿ 19, 2006 ರಂದು ಉಡಾವಣೆ ಮಾಡಲಾಯಿತು, ತದನಂತರ 2015ರಲ್ಲಿ ಪ್ಲುಟೊ ಮತ್ತು ಅದರ ಉಪಗ್ರಹಗಳ ಆರು ತಿಂಗಳ ಅವಧಿಯ ಫ್ಲೈಬೈ ಅಧ್ಯಯನವನ್ನು ನಡೆಸಿತು. ಇದೀಗ ಬಾಹ್ಯಾಕಾಶ ನೌಕೆಯು ದೂರದ ಸೌರವ್ಯೂಹವನ್ನು ಅನ್ವೇಷಿಸುವುದನ್ನು ಮುಂದುವರಿಸಲಾಗಿದೆ.

ಇದನ್ನು ಓದಿ : Noodles Shape Found in Mars: ವಿಜ್ಞಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದ ಮಂಗಳ ಗ್ರಹದ ನೂಡಲ್ ಆಕಾರದ ವಸ್ತು

ಇದನ್ನು ಓದಿ : UIDAI Face Authentication : UIDAIನಿಂದ ಮುಖ ದೃಢೀಕರಣಕ್ಕೆ ಬಂತು Apps

(NASA shares a trippy, rainbow colored photo of the planet Pluto, but is this how Pluto really is)

Comments are closed.