ದೆಹಲಿ: (National cinema day ) ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸೆಪ್ಟೆಂಬರ್ 16 ರಂದು ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸುವುದಾಗಿ ಘೋಷಿಸಿತ್ತು. ಅಲ್ಲದೇ ಭಾರತದ ಸಿನಿಮಾ ಮಂದಿರಗಳಲ್ಲಿ 75 ರೂ.ನಲ್ಲಿ ಸಿನಿಮಾ ಪ್ರದರ್ಶನ ನೀಡುವುದಾಗಿ ಈ ಹಿಂದೆ ಘೋಷಣೆಯನ್ನು ಮಾಡಿತ್ತು. ಆದ್ರೆ ಬ್ರಹ್ಮಾಸ್ತ್ರ ಸಿನಿಮಾದ ಗೆಲುವಿಗೆ ಪಣತೊಟ್ಟಿರುವ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಒಂದು ವಾರಗಳ ಕಾಲ ರಾಷ್ಟ್ರೀಯ ದಿನವನ್ನು ಮುಂದೂಡಿಕೆ ಮಾಡಿದೆ.
ಬ್ರಹ್ಮಾಸ್ತ್ರ ಸಿನಿಮಾ ಥಿಯೇಟರ್‌ಗಳಲ್ಲಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಆದರೆ ಚಿತ್ರ ಮಂದಿರಗಳಲ್ಲಿ ಟಿಕೆಟ್ ದರ ಹೆಚ್ಚಳವಾಗಿದ್ದರೂ ಕೂಡ ಪ್ರೇಕ್ಷಕರು ಸಿನಿಮಾ ನೋಡದೋಕ್ಕೆ ಹಿಂದೇಟು ಹಾಕುತ್ತಿಲ್ಲ. ಈ ನಡುವಲ್ಲೇ ಸಿನಿಮಾಕ್ಕೆ ತೊಡಗಿಸಿರುವ ಬಂಡವಾಳವನ್ನು ಸರಿದೂಗಿಸಬೇಕು ಅನ್ನೋ ಕಾರಣಕ್ಕೆ ಮಲ್ಟಿಪ್ಲೆಕ್ಸ್ ಅಸೋಷಿಯೆಶನ್(National cinema day) ಆಚರಣೆಯನ್ನು ಒಂದು ವಾರಕ್ಕೆ ಮುಂದೂಡಿಕೆ ಮಾಡಿದೆ.
The National Cinema Day was previously announced to be held on 16th September, however, on request from various stake holders and in order to maximize participation, it would now be held on 23rd September #NationalCinemaDay2022 #Sep23 pic.twitter.com/c5DeDCYaMD
— Multiplex Association Of India (@MAofIndia) September 13, 2022
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಾಮಾಜಿಕ ಜಾಲತಾಣದಲ್ಲಿ (National cinema day)ರಾಷ್ರೀಯ ಸಿನಿಮಾ ದಿನವನ್ನ ಸೆಪ್ಟೆಂಬರ್ 23 ಶುಕ್ರವಾರದಂದು ಆಯೋಜಿಸಲಾಗಿದೆ ಎಂದು ತಿಳಿಸಿದೆ. (National cinema day) ರಾಷ್ಟ್ರೀಯ ಸಿನಿಮಾ ದಿನದಂದು, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಭಾರತದಾದ್ಯಂತ 4000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಷ್ಟ್ರೀಯ ಸಿನಿಮಾ ದಿನವನ್ನ ಆಯೋಜಿಸಿದೆ. ಪಿವಿಆರ್, ಐನಾಕ್ಸ್, ಸಿನಿಪೊಲಿಸ್, ಕಾರ್ನಿವಲ್, ಮಿರಾಜ್, ಸಿಟಿಪ್ರೈಡ್, ಏಷ್ಯನ್,ಮುಕ್ತಾ ಎ 2, ಮೂವಿಟೈಮ್,ವೇವ್, ಎಂ 2 ಕೆ, ಡಿಲೈಟ್ ಮತ್ತು ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಪ್ರದರ್ಶಿಸಲಾಗುತ್ತದೆ.
ಇದನ್ನೂ ಓದಿ : ಅಕಾಲಿಕ ನಿಧನರಾದ ಮಂಡ್ಯ ರವಿಗೆ ಇತ್ತು ಅದೊಂದು ನನಸಾಗದ ಕನಸು
ಇದನ್ನೂ ಓದಿ:ಮಗಳಿಗೆ ಮರು ಮದುವೆ ಮಾಡಿದ ತಂದೆಯ ಮೂಗು, ಕಿವಿಯನ್ನೇ ಕತ್ತರಿಸಿದ ದುಷ್ಕರ್ಮಿಗಳು
ಇದನ್ನೂ ಓದಿ:ನಮ್ಮನೆ ಯುವರಾಣಿ ಸೀರಿಯಲ್ಗೆ ಮರಳಿ ಬರಲಿದ್ದಾರಾ ಅನಿಕೇತ್ -ಮೀರಾ : ಇಲ್ಲಿದೆ ಬಿಗ್ ಅಪ್ಡೇಟ್ಸ್
ಕೆಜಿಎಫ್ ಸೇರಿದಂತೆ ಹಲವು ಭಾರತೀಯ ಸಿನಿಮಾಗಳು ಯಶಸ್ವಿ ಪ್ರದರ್ಶನವನ್ನು ಕಂಡಿವೆ. ಹಲವು ಸಿನಿಮಾಗಳು ಸೋಲನ್ನು ಕಂಡಿದ್ದರೂ ಕೂಡ ಬ್ರಹ್ಮಾಸ್ತ್ರ ಗೆಲುವಿನ ಹಾದಿಯಲ್ಲಿ ಸಾಗುತ್ತಿದೆ. ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆಯನ್ನು ದಾಖಲು ಮಾಡುತ್ತಿದೆ. ಅದ್ರಲ್ಲೂ ಸಿನಿಮಾ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಬರೋಬ್ಬರಿ 143 ಕೋಟಿಗಳಿಸಿದೆ. ಇದೀಗ ರಾಷ್ಟ್ರೀಯ ಸಿನಿಮಾ ದಿನಾಚರಣೆಯನ್ನು ಮುಂದೂಡಿಕೆಯಾಗಿರುವುದು ಬ್ರಹ್ಮಾಸ್ತ್ರ ತಂಡಕ್ಕೆ ಅನುಕೂಲವಾದಂತಿದೆ.
national cinema day has been postponed