fake notaries : ತಹಸೀಲ್ದಾರ್​ ಕಚೇರಿ ಆವರಣದಲ್ಲೇ ನಕಲಿ ನೋಟರಿಗಳ ಹಾವಳಿ : ಸರ್ಕಾರದ ವಿವಿಧ ಯೋಜನೆಗಳ ಅರ್ಜಿಯಲ್ಲಿ ಗೋಲ್​ಮಾಲ್​

ಧಾರವಾಡ : fake notaries : ಇವತ್ತಿನ ದಿನಗಳಲ್ಲಿ ಹೆಚ್ಚಿನ ವಿಚಾರಗಳಲ್ಲಿ ಅಸಲಿ‌ ಯಾವುದು ನಕಲಿ ಯಾವುದು ಎಂದು ಪತ್ತೆ ಹಚ್ಚೋದೆ ಕಷ್ಟದ ಕೆಲಸ. ಸುಲಭವಾಗಿ ಹಣ ಗಳಿಸುವ ಉದ್ದೇಶಕ್ಕೆ ನಕಲಿಗಳು ಅಸಲಿಗಳು ಎಂಬಂತೆ ಬಿಂಬಿಸಿ ಮೋಸ ಮಾಡುತ್ತಾರೆ. ಇದೀಗ ಧಾರವಾಡ ಜಿಲ್ಲೆಯಲ್ಲಿ ನಕಲಿ ನೋಟರಿಗಳ ಹಾವಳಿ ಹೆಚ್ಚಾಗಿದೆ. ನಕಲಿ ನೋಟರಿಗಳನ್ನು ನೋಡಿ ಅಸಲಿ ನೋಟರಿ ವಕೀಲರು ಶಾಕ್ ಆಗಿದ್ದಾರೆ.

ತಹಸೀಲ್ದಾರ್ ಕಚೇರಿ ಆವರಣದಲ್ಲಿ ಈ ನಕಲಿ ನೋಟರಿಗಳ ಅಡ್ಡಾ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದ ವಿವಿಧ ಯೋಜನೆಗಳ ಅಫಿಡವಿಟ್‌ಗೆ ನಕಲಿ ನೋಟರಿಗಳೆ ಸಹಿ ಮಾಡಿ ಜನರು ಸೇರಿದಂತೆ ಅಧಿಕಾರಿಗಳನ್ನು ವಂಚಿಸುತ್ತಿದ್ದಾರೆ. ಅರ್ಜಿ ಬರಹಗಾರರೇ ನಕಲಿ ನೋಟರಿ ಮಾಡುತ್ತಿರೋ ಆರೋಪ ಕೇಳಿ ಬಂದಿದ್ದು, ಸರ್ಕಾರದ ವಿವಿಧ ಯೋಜನೆಗಳ ಅರ್ಜಿಯ ಅಫಿಡವಿಟ್‌ಗೆ ಇದೇ ನಕಲಿ ನೋಟರಿ ಬಳಕೆಯಾಗುತ್ತಿದೆ ಎಂಬ ಆರೋಪ‌ ಕೇಳಿ ಬಂದಿದೆ.

ಈ ನಕಲಿ ನೋಟರಿಗಳ ಅಡ್ಡ ಮೇಲೆ ವಕೀಲರ ಸಂಘದಿಂದಲೇ ದಾಳಿ ನಡೆದಾಗ ಈ ಜಾಲ ಬಯಲಿಗೆ ಬಂದಿದೆ. ಈ ದಾಳಿ ಸಂದರ್ಭ ಅರ್ಜಿ ಬರಹಗಾರರ ಬಳಿ ಅನೇಕ ನಕಲಿ ನೋಟರಿ ಸೀಲ್‌ಗಳು ಪತ್ತೆಯಾಗಿದೆ. ಧಾರವಾಡ ತಹಸೀಲ್ದಾರ ಕಚೇರಿ‌ ಆವರಣದಲ್ಲಿರೋ ಕೆಲ ಅರ್ಜಿ ಬರಹಗಾರರಿಂದ ಈ ನಕಲಿ ನೋಟರಿ ದಂಧೆ ನಡೆಯುತಿದ್ದು ಅಧಿಕೃತ ವಕೀಲರ ನಕಲಿ ಸೀಲ್ ಬಳಸಿ ವಂಚನೆ ಮಾಡಲಾಗುತ್ತಿದೆ. ಈ ನಕಲಿ ನೋಟರಿ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ಎಚ್ಚರಿಸಿದ್ದರು. ನಕಲಿ ನೋಟರಿ ಬಗ್ಗೆ ಜಾಗೃತವಾಗುವಂತೆ ಡಿ.ಸಿ ಆದೇಶ ಮಾಡಿದ್ದರು. ವಕೀಲರ ಸಂಘದ ಅಧಿಕೃತ ಪತ್ರ ಇದ್ದಲ್ಲಿ ಮಾತ್ರ ನೋಟರಿ ಪರಿಗಣಿಸುವಂತೆ ಡಿಸಿ ಸೂಚಿಸಿದ್ದರು.

ಡಿ.ಸಿ‌ ಆದೇಶದ ಬಳಿಕವೂ ತಹಸೀಲ್ದಾರರ ಕಚೇರಿ ಆವರಣದಲ್ಲಿ ನಕಲಿ ನೋಟರಿ ಜಾಲ ಮುಂದುವರಿದಿತ್ತು. ಹೀಗಾಗಿ ಈ ಬಗ್ಗೆ ಧಾರವಾಡ ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಕಣ್ಮುಚ್ಚಿ ಕುಳಿತ ಅಧಿಕಾರಿಗಳಿಂದ ರೋಸಿ ಹೋಗಿದ್ದ ವಕೀಲರು ಖುದ್ದು ತಾವೇ ನಕಲಿ ನೋಟರಿ ಕೇಂದ್ರಗಳ‌ ಮೇಲೆ ದಾಳಿ ಮಾಡಿದ್ದಾರೆ. ನಕಲಿ ನೋಟರಿ ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಪರಿಶೀಲನೆ ಸಂದರ್ಭದಲ್ಲಿ ಸರ್ಕಾರದ ಮಹತ್ವದ ಯೋಜನೆಗಳ ಅರ್ಜಿಗೆ ನಕಲಿ ನೋಟರಿ ಮಾಡಿದ್ದು ಬಯಲಿಗೆ ಬಂದಿದೆ. ಹೀಗಾಗಿ ಇದರ ವಿರುದ್ಧ ಹೋರಾಟ ಮಾಡೋಕೆ ಧಾರವಾಡ ವಕೀಲರು ಮುಂದಾಗಿದ್ದಾರೆ.

ದುರಂತ ಅಂದ್ರೆ ಇಷ್ಟೆಲ್ಲಾ ಅವಾಂತರ ನಡೆದರೂ ತಹಶೀಲ್ದಾರ್ ಮಾತ್ರ ಎಚ್ಚರ ವಹಿಸಿಲ್ಲ. ಈ ಬಗ್ಗೆ ತಹಸೀಲ್ದಾರರೇ ದೂರು ನೀಡಬೇಕಿದ್ದರೂ ಇನ್ನು ದೂರು‌ ನೀಡದೆ ವಿಳಂಬ ಧೋರಣೆ ಅನುಸರಿಸಿದ್ದಾರೆ. ಹೀಗಾಗಿ ಸದ್ಯ ತಹಸೀಲ್ದಾರ ದೂರು ನೀಡೋದಕ್ಕೆ ಧಾರವಾಡ ವಕೀಲರ ಸಂಘ‌ ಕಾಯುತ್ತಿದೆ‌. ಒಂದು ವೇಳೆ ದೂರು‌ ನೀಡದೆ ಹೋದಲ್ಲಿ ಸಂಘದ ಮೂಲಕವೇ ಕಾನೂನು ಹೋರಾಟ ಮಾಡೋಕೆ ವಕೀಲರು ನಿರ್ಧರಿಸಿದ್ದಾರೆ.

ಇದನ್ನು ಓದಿ : Bigg Boss Season 9 : ‘ಪ್ರವೀಣರ ಜೊತೆ ನವೀನರು’ : ಬಿಗ್​ಬಾಸ್​ 9ನಲ್ಲಿ ಹೊಸ ಸ್ಪರ್ಧಿಗಳ ಜೊತೆ ಹಳೆ ಸ್ಪರ್ಧಿಗಳ ಸಮಾಗಮ

ಇದನ್ನೂ ಓದಿ : Asad Rauf died : ಮಾಜಿ ಐಸಿಸಿ ಅಂಪೈರ್, ಪಾಕಿಸ್ತಾನದ ಅಸಾದ್ ರೌಫ್ ಹೃದಯಾಘಾತದಿಂದ ನಿಧನ

Plague of fake notaries in Tehsildar office premises

Comments are closed.