ಸೋಮವಾರ, ಏಪ್ರಿಲ್ 28, 2025
HomeCinemaNayanthara Vignesh Shivan : ಮದುವೆಯಾದ ನಾಲ್ಕು ತಿಂಗಳಿಗೆ ಅವಳಿ ಮಕ್ಕಳು : ಸಿಹಿಸುದ್ದಿಕೊಟ್ಟ ನಯನತಾರಾ-...

Nayanthara Vignesh Shivan : ಮದುವೆಯಾದ ನಾಲ್ಕು ತಿಂಗಳಿಗೆ ಅವಳಿ ಮಕ್ಕಳು : ಸಿಹಿಸುದ್ದಿಕೊಟ್ಟ ನಯನತಾರಾ- ವಿಘ್ನೇಶ್

- Advertisement -

Nayanthara Vignesh Shivan : ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನಾತಾರಾ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಮದುವೆಯಾದ ಕೆಲವೇ ತಿಂಗಳಲ್ಲಿ ನಯನಾತಾರಾ ಸಿಹಿಸುದ್ದಿ ನೀಡಿದ್ದಾರೆ ಎಂದು ನೀವಂದ್ರುಕೊಂಡ್ರೇ ವಿಷ್ಯ ಅದಲ್ಲ ಬದಲಾಗಿ ನಯನತಾರಾ ಹಾಗೂ ವಿಗ್ನೇಶ್ ಶಿವನ್ ಸಖತ್ ಧಮಾಕಾ ಸುದ್ದಿ ನೀಡಿದ್ದು, ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವಳಿ ಗಂಡು ಮಕ್ಕಳ ಪೋಷಕರಾಗಿರೋದಾಗಿ ಘೋಷಿಸಿದ್ದಾರೆ.

ನಯನತಾರಾ ಪತಿ ವಿಘ್ನೇಶ್ ಶಿವನ್ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಅಕ್ಟೋಬರ್ 9 ರ ಸಂಜೆ 6.30 ಕ್ಕೆ ತಾವು ಅವಳಿ ಮಕ್ಕಳಿಗೆ ಅಪ್ಪ ಅಮ್ಮ ಆಗಿರೋದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಅವಳಿ ಗಂಡು ಮಕ್ಕಳ ಜೊತೆ ತಾವಿರೋ ಪೋಟೋವನ್ನು ಶೇರ್ ಮಾಡಿಕೊಂಡಿರೋ ವಿಘ್ನೇಶ್ ಶಿವನ್ ಮತ್ತು ನಯನತಾರಾ ವಿಸ್ಕೃತವಾದ ಪೋಸ್ಟ್ ವೊಂದನ್ನು ಬರೆದುಕೊಂಡಿದ್ದಾರೆ. Nayana and me have become Amma and Appa, We are blessed with twin baby boys ಎಂದು ಘೋಷಿಸಿದ್ದಾರೆ. ನಯನಾ ತಾರಾ ಹಾಗೂ ವಿಘ್ನೇಶ್ ಶಿವನ್ ಈ ಪೋಸ್ಟ್ ಗೆ ಸಾವಿರಾರು ಜನರು ಲೈಕ್ಸ್ ಒತ್ತಿದ್ದಾರೆ.

2022 ರ ಜೂನ್ 9 ರಂದು ಅದ್ದೂರಿಯಾಗಿ ನಯನತಾರಾ ವಿಘ್ನೇಶ್ ಶಿವನ್ ಜೊತೆ ದಾಂಪತ್ಯಕ್ಕೆ ಕಾಲಿರಿಸಿದ್ದರು. ಇದಕ್ಕೂ ಮೊದಲು ಅಂದಾಜು 9-10 ವರ್ಷಗಳಿಂದ ವಿಘ್ನೇಶ್ ಶಿವನ್ ಮತ್ತು ನಯನಾತಾರಾ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮದುವೆಯ ಬಳಿಕ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಯುರೋಪ ಸೇರಿದಂತೆ ಹಲವು ರಾಷ್ಟ್ರಗಳಿಗೆ ಹನಿಮೂನ್ ಟ್ರಿಪ್ ಹೋಗಿದ್ದರು.‌ಮೊನ್ನೆ ಮೊನ್ನೆಯಷ್ಟೇ ವಿಗ್ನೇಶ್ ಶಿವನ್ ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಇನ್ನೊಂದೆಡೆ ನಯನಾತಾರಾ ಹಾಗೂ ವಿಘ್ನೇಶ್ ಶಿವನ್ ಮಗುವಿನ ಪೋಷಕರಾಗಿರೋ ಸುದ್ದಿ ಅಭಿಮಾನಿಗಳಿಗೆ ಕೊಂಚ ಶಾಕ್ ಕೂಡ ನೀಡಿದೆ. ನಯನಾತಾರಾ ಇದುವರೆಗೂ ತಾಯಿಯಾಗ್ತಿರೋ ಸುದ್ದಿ ನೀಡಿರಲಿಲ್ಲ. ಅಲ್ಲದೇ ಬೇಬಿ ಬಂಪ್ ಪೋಟೋಶೂಟ್ ಮಾಡಿಸಿಕೊಂಡಿರಲಿಲ್ಲ. ಹೀಗಾಗಿ ಅಭಿಮಾನಿಗಳು ಶಾಕ್ ಗೆ ಒಳಗಾಗಿದ್ದಾರೆ.

ಆದರೆ ಮೂಲಗಳ ಮಾಹಿತಿ ಪ್ರಕಾರ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಗ್ನೇಶ್ ಶಿವನ್ ಮದುವೆಗೂ ಮುನ್ನವೇ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು‌ ನಿರ್ಧರಿಸಿದ್ದರಂತೆ. ಅಲ್ಲದೇ ಅದಕ್ಕಾಗಿ ಸಿದ್ಧತೆ ಕೂಡ ಮಾಡಿಕೊಂಡಿದ್ದರಂತೆ. ಅದೇ ಪ್ರಕಾರ ಈಗ ನಯನಾತಾರಾ ವಿಘ್ನೇಶ್ ಶಿವನ್ ಪೋಷಕರಾಗಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಧಮಾಕಾ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ.

ಇದನ್ನೂ ಓದಿ : Gandhadagudi Trailer Release : ಪುನೀತ್ ರಾಜ್ ಕುಮಾರ್ “ಗಂಧದಗುಡಿ”ಗೆ ಶುಭಹಾರೈಸಿದ ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ : Kantara : ಕಾಂತಾರ ಸಿನಿಮಾ ನೆನಪಿಸುತ್ತಿದೆ ಪೆರ್ನೆ ಗ್ರಾಮ : ಅಷ್ಟಕ್ಕೂ ಆ ಗ್ರಾಮದಲ್ಲಿ ಆಗಿದಾದ್ರೂ ಏನು ?

Nayanthara and Vignesh Shivan Blessed With Twin Boys Uyir and Ulagam

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular