Mangalore: ಮಂಗಳೂರು : ಎರಡು ದಿನ ಕುಡಿಯುವ ನೀರು ಸ್ಥಗಿತ

ಮಂಗಳೂರು:(Mangalore Drinking water cut off) ಮಂಗಳೂರಿನ ಹಲವು ಭಾಗದಲ್ಲಿ ಎರಡು ದಿನಗಳ ಕಾಲ ನೀರಿನ ಸರಬರಾಜು ನಿಲ್ಲಿಸಲಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಪ್ರಕಟಣೆಯನ್ನು ಹೊರಡಿಸಿದೆ. ನೀರಿನ ಅಭಾವ ಉಂಟಾಗುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಈ ಸುತ್ತೊಲೆಯನ್ನು ಹೊರಡಿಸಲಾಗಿದೆ.

ಅಕ್ಟೋಬರ್ 11 ಮತ್ತು 12 ರಂದು ಮುಂಜಾನೆ 6 ರಿಂದ ಮರುದಿನ ಮುಂಜಾನೆ 6 ಗಂಟೆಗಳ ವರೆಗೆ ಅಂದರೆ, 24 ಗಂಟೆ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.(Mangalore)

ನೀರು ಸರಬರಾಜು ವ್ಯತ್ಯವಾಗುವ ಪ್ರದೇಶಗಳು :

ಪಡೀಲ್‌, ಮರೋಳಿ, ಮಂಗಳಾದೇವಿ, ಮುಳಿಹಿತ್ಲು, ಕಾರ್‌ ಸ್ಟ್ರೀಟ್‌, ಮಣ್ಣಗುಡ್ಡ, ಪಾಂಡೇಶ್ವರ, ಸ್ಟೇಟ್‌ ಬ್ಯಾಂಕ್‌ ,ಶಕ್ತಿನಗರ, ಕಣ್ಣೂರು, ಬಜಾಲ್‌, ಜಪ್ಪಿನಮೊಗರು, ಉಲ್ಲಾಸ್‌ ನಗರ, ಚಿಲಿಂಬಿ, ಕೋಡಿಕಲ್‌,ಉರ್ವಸ್ಟೋರ್‌,ಅಶೋಕನಗರ, ಕುಡುಪು, ವಾಮಂಜೂರು, ಬೋಂದೆಲ್‌,ಕಾವೂರು ಹಾಗೂ ಮರಕಡ ಈ ಎಲ್ಲಾ ಪ್ರದೇಶಗಳಲ್ಲಿ 24 ಗಂಟೆ ನೀರಿನ್ನು ಸ್ಥಗಿತಗೊಳಿಸಲಾಗುತ್ತದೆ.

ಇದನ್ನೂ ಓದಿ:LPG Gas Cylinder : LPG ಗ್ಯಾಸ್ ಸಿಲಿಂಡರ್ ಹೊಸ ನಿಯಮ :12ಕ್ಕಿಂತ ಅಧಿಕ ಸಿಲಿಂಡರ್ ಬಳಸಿದ್ರೆ ಸಬ್ಸಿಡಿ ಕಟ್

ಇದನ್ನೂ ಓದಿ:Kantara : ಕಾಂತಾರ ಸಿನಿಮಾ ನೆನಪಿಸುತ್ತಿದೆ ಪೆರ್ನೆ ಗ್ರಾಮ : ಅಷ್ಟಕ್ಕೂ ಆ ಗ್ರಾಮದಲ್ಲಿ ಆಗಿದಾದ್ರೂ ಏನು ?

ಇದನ್ನೂ ಓದಿ:Malabar Spinach:ಬಸಳೆ ಸೊಪ್ಪಿನಿಂದ ರಕ್ತಹೀನತೆ ಸಮಸ್ಯೆ ನಿವಾರಣೆ

ನೀರು ಸರಬರಾಜು ವ್ಯವಸ್ಥೆಯ ತುಂಬೆ HLPS NO-2 80MLD ಸ್ಥಾವರದಲ್ಲಿ ಹಾಗೂ LLPS NO-2 ರಲ್ಲಿ ಬಂಟ್ವಾಳ 110ಕೆ ವಿ ಯಲ್ಲಿ ವಿದ್ಯುತ್‌ ಸ್ಥಗಿತ ಇದ್ದ ಕಾರಣ ಹಾಗೂ ಜಾಕ್‌ ವೆಲ್ ನಲ್ಲಿರುವ ಕಸ ಕಡ್ಡಿಗಳನ್ನು ತೆಗೆದು ಶೂಚಿಗೊಳಿಸಲಾಗುತ್ತದೆ. ಹಾಗಾಗಿ 24 ಗಂಟೆಗಳ ಕಾಲ ಈ ಮೇಲೆ ಸೂಚಿಸಿರುವ ಪ್ರದೇಶಗಳಲ್ಲಿ ನೀರಿನ ಸರಬರಾಜನ್ನು ನಿಲ್ಲಿಸಲಾಗುತ್ತದೆ.

Mangalore Drinking water cut off for two days, ordered by the Municipal Corporation

Comments are closed.