ಭಾನುವಾರ, ಏಪ್ರಿಲ್ 27, 2025
HomeCinemaNayanthara: 4 ತಿಂಗಳ ಹಿಂದಲ್ಲ.. 6 ವರ್ಷಗಳ ಹಿಂದೆಯೇ ಮದುವೆಯಾಗಿದ್ದೇವೆ.. ಏನಿದು ನಯನತಾರಾ ಅವಳಿ ಮಕ್ಕಳ...

Nayanthara: 4 ತಿಂಗಳ ಹಿಂದಲ್ಲ.. 6 ವರ್ಷಗಳ ಹಿಂದೆಯೇ ಮದುವೆಯಾಗಿದ್ದೇವೆ.. ಏನಿದು ನಯನತಾರಾ ಅವಳಿ ಮಕ್ಕಳ ವಿವಾದಕ್ಕೆ ಟ್ವಿಸ್ಟ್

- Advertisement -

ಚೆನ್ನೈ : Nayanthara ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿ, ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿರೋ ನಯನತಾರಾ ಮತ್ತು ವಿಘ್ನೇಶ್ ಜೋಡಿ ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೀಗ ಇದೇ ಬಾಡಿಗೆ ತಾಯ್ತನದ ವಿವಾದಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಅದೇನಂದ್ರೆ ಈ ಜೋಡಿ ಆರು ವರ್ಷಗಳ ಹಿಂದೆಯೇ ಕಾನೂನು ಬದ್ಧವಾಗಿ ಮದುವೆಯಾಗಿದ್ರು ಅನ್ನೋದು.

ಜೂನ್ 9 ರಂದು ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್‌ ಶಿವನ್‌ ಮದುವೆಯಾಗಿದ್ರು. ಮಹಾಬಲಿಪುರಂನಲ್ಲಿ ನಡೆದ ಮದುವೆಗೆ ಬಾಲಿವುಡ್‌ ಬಾದ್ ಶಾ ಶಾರುಖ್‌ ಖಾನ್‌, ಸೂಪರ್‌ ಸ್ಟಾರ್‌ ರಜನಿಕಾಂತ್‌, ಎ.ಆರ್‌ ರೆಹಮಾನ್‌, ನಟಿ ಸಮಂತಾ ಸೇರಿ ಸಾಕಷ್ಟು ಸೆಲೆಬ್ರಿಟಿಗಳು, ಚಿತ್ರರಂಗದ ಆಪ್ತರು ಸ್ನೇಹಿತರು ಈ ವಿವಾಹ ಕಾರ್ಯದಲ್ಲಿ ಭಾಗವಹಿಸಿ ಶುಭ ಕೋರಿದ್ದರು. ಮದುವೆಯಾಗಿ 4 ತಿಂಗಳು ಕಳೆಯುವಷ್ಟರಲ್ಲಿ ತಾವು ಅವಳಿ ಮಕ್ಕಳಿಗೆ ಪೋಷಕರಾಗಿದ್ದೇವೆ ಎಂದು ವಿಘ್ನೇಶ್ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಂಡಿದ್ದರು. ಆದರೆ ಈ ವಿಚಾರ ಅವರಿಗೆ ಕಾನೂನು ಸಂಕಷ್ಟು ತಂದು ನೀಡಿತ್ತು. ಬಾಡಿಗೆ ತಾಯ್ತನದ ಮೂಲಕ ನಯನತಾರಾ ಮತ್ತು ವಿಘ್ನೇಶ್ ಅವಳಿ ಮಕ್ಕಳಿಗೆ ಜನ್ಮ ನೀಡಿರೋದು ಬಹಿರಂಗವಾಗಿತ್ತು. ಯಾಕಂದ್ರೆ ಕೆಲ ನಿರ್ದಿಷ್ಟ ಸಮಸ್ಯೆಗಳನ್ನು ಹೊರತುಪಡಿಸಿ 2022 ಜನವರಿಯಿಂದ ಭಾರತದಲ್ಲಿ ಬಾಡಿಗೆ ತಾಯ್ತನವನ್ನು ನಿಷೇಧಿಸಲಾಗಿದೆ. ಹೀಗಾಗಿ ತಮಿಳುನಾಡು ಸರ್ಕಾರ ಕೂಡಾ ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸೂಚಿಸಿತ್ತು.

ಆರು ವರ್ಷಗಳ ಹಿಂದೆಯೇ ಮದುವೆ : ಸದ್ಯ ತಮಿಳು ನಾಡು ಸರ್ಕಾರ ನಯನ ತಾರಾ ದಂಪತಿಗೆ ನೋಟಿಸ್ ನೀಡಿತ್ತು. ದಂಪತಿ ಸರ್ಕಾರಕ್ಕೆ ನೀಡಿರುವ ವಿವರಣೆಯಲ್ಲಿ ಸ್ಫೋಟಕ ಸತ್ಯವೊಂದು ಬಯಲಾಗಿದೆ ಎನ್ನಲಾಗಿದೆ. ಅದೇನಂದ್ರೆ ಈ ಜೋಡಿ 6 ವರ್ಷಗಳ ಹಿಂದೆಯೇ ಮದುವೆಯಾಗಿತ್ತು ಎಂದು ವರದಿಯಾಗಿದೆ. ತಮಿಳುನಾಡು ಆರೋಗ್ಯ ಇಲಾಖೆಗೆ ಸಲ್ಲಿಸಿರುವ ಮಾಹಿತಿಯಲ್ಲಿ 6 ವರ್ಷಗಳ ಹಿಂದೆಯೇ ಮದುವೆಯಾದ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳಿಗೆ ನಯನತಾರಾ ಹಾಗೂ ವಿಘ್ನೇಶ್‌ ಸಲ್ಲಿಸಿದ್ದಾರೆ ಎಂದು ನಯನ ತಾರಾ ಸಂಬಂಧಿಯೊಬ್ಬರು ಮಾಹಿತಿ ನೀಡಿರುವ ಬಗ್ಗೆ ವರದಿಯಾಗಿದೆ, ಆದರೆ ಈ ಬಗ್ಗೆ ನಯನತಾರಾ, ವಿಘ್ನೇಶ್‌ ಆಗಲೀ ಅಥವಾ ಅಧಿಕಾರಿಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯಿದೆ, 2021 ರ ಅಡಿಯಲ್ಲಿ, ದಂಪತಿ 5 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಹಿಂದೆ ಮದುವೆಯಾದ ನಂತರ ಮಾತ್ರ ಬಾಡಿಗೆ ತಾಯ್ತನವನ್ನು ಆಶ್ರಯಿಸಲು ಅನುಮತಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಯನತಾರಾ ದಂಪತಿ ನೀಡಿರುವ ವಿವರಣೆ ಕಾನೂನು ಉಲ್ಲಂಘನೆಯಲ್ಲ ಎನ್ನಲಾಗುತ್ತಿದೆ. ಇದು ನಿಜವೇ ಅನ್ನೋದು ಇನ್ನಷ್ಟೇ ಬಯಲಾಗಬೇಕಿದೆ.

ಇದನ್ನೂ ಓದಿ : CONG PRESIDENT ELECTION: ಇಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಇಂದು, ಕೌನ್ ಬನೇಗಾ ಕಾಂಗ್ ಕಿಂಗ್..?

ಇದನ್ನೂ ಓದಿ : ICC T20 World Cup 2022 : ಇಂದು ಭಾರತ ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ : ಇಲ್ಲಿದೆ T20 ವಿಶ್ವಕಪ್ ವೇಳಾಪಟ್ಟಿ

ಇದನ್ನೂ ಓದಿ : Bangalore Rain Record : ಸಿಲಿಕಾನ್ ಸಿಟಿಯಲ್ಲಿ ಮುಗಿಯದ ವರುಣಾರ್ಭಟ : ಐದು ವರ್ಷಗಳಲ್ಲೇ ದಾಖಲೆ ಮಳೆ

Nayanthara-Vignesh Shivan Legally Married Six Years Ago twist to Surrogate Mother controversy

RELATED ARTICLES

Most Popular