BJP MOCK RAHUL : ‘ಖತಂ.. ಟಾ ಟಾ ಬೈ ಬೈ’ ರಾಹುಲ್ ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಲೇವಡಿ ಮಾಡಿದ್ದು ಹೀಗೆ

ನವದೆಹಲಿ :  BJP MOCK RAHUL ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಎನಿಮೇಟೆಡ್ ವಿಡಿಯೋ ಟ್ವೀಟ್ ಮಾಡೋ ಮೂಲಕ ಲೇವಡಿ ಮಾಡಿದೆ. ಇದು ಭಾರತ್ ಜೋಡೋ ಅಲ್ಲ ಕಾಂಗ್ರೆಸ್ ಜೋಡೋ ಅಂತಾ ವಿಡಿಯೋ ಮೂಲಕವೇ ಕಾಲೆಳೆದಿದೆ.

ಅಂದಹಾಗೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ 40 ದಿನಕ್ಕೆ ಕಾಲಿಟ್ಟಿದ್ದು. ಇಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಯಾತ್ರೆಗೆ ಸಂಗನಕಲ್ಲು ಬಳಿ ಬ್ರೇಕ್ ನೀಡಲಾಗಿದೆ. ಇಂದು ಯಾವುದೇ ಯಾತ್ರೆ ಇರುವುದಿಲ್ಲ. ಅಲ್ದೆ, ರಾಹುಲ್ ಗಾಂಧಿ ವೋಟಿಂಗ್ ಸಲುವಾಗಿಯೇ ಸಂಗನಕಲ್ಲು ಬಳಿ ಮತಕೇಂದ್ರವನ್ನೂ ತೆರೆಯಲಾಗಿದೆ. ಒಂದ್ಕಡೆ ರಾಹುಲ್ ಯಾತ್ರೆ ನಡೆಸುತ್ತಿದ್ರೆ, ಇದನ್ನ ಮೊದಲಿನಿಂದಲೂ ಟೀಕಿಸುತ್ತಿರುವ ಬಿಜೆಪಿ ಇಂದು ಎನಿಮೇಟೆಡ್ ವಿಡಿಯೋ ಟ್ವೀಟ್ ಮಾಡುವ ಮೂಲಕ ಕದನವನ್ನ ಬೇರೆ ಹಂತಕ್ಕೆ ತೆಗೆದುಕೊಂಡು ಹೋಗಿದೆ.

ಏನಿದೆ ವಿಡಿಯೋದಲ್ಲಿ : ಬಿಜೆಪಿ ಟ್ವೀಟ್ ಮಾಡಿರೋ ಎರಡು ನಿಮಿಷಗಳ ಎನಿಮೇಟೆಡ್ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರನ್ನ ಪಪ್ಪು ಅಂತಾ ಚಿತ್ರಿಸಲಾಗಿದ್ದು. ಜೊತೆಗೆ ಶೋಲೆ ಚಲನಚಿತ್ರದ ಅಸ್ರಾಣಿ ಪಾತ್ರ ಎಂದು ಬಣ್ಣಿಸಿದೆ. ರಾಹುಲ್ ಜೊತೆ ಯಾತ್ರೆ ಮಾಡೋ ಗೋವಾ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಪಕ್ಷವನ್ನ ತೊರೆಯುವುದು. ಮತ್ತೆ ಕೆಲ ಕಾಂಗ್ರೆಸ್ ನಾಯಕರು ಯಾತ್ರೆ ತೊರೆದು ಗುಲಾಂ ನಬಿ ಆಜಾದ್ ಅವರನ್ನ ಸೇರುವುದು, ಮತ್ತು ರಾಜಸ್ಥಾನ ಕಾಂಗ್ರೆಸ್ ನಲ್ಲಿನ ಆಂತರಿಕ ಕಲಹದ ಬಗ್ಗೆ ಬಿಂಬಿಸಿಲಾಗಿದೆ. ಕೊನೆಗೆ ಸೋನಿಯಾ ಗಾಂದಿ ಎದುರು ಬರುವ ರಾಹುಲ್ ‘ಮಮ್ಮಿ ಸಂಕಟಗಳು ಯಾಕೆ ಕೊನೆಗೊಳ್ಳುವುದಿಲ್ಲ ಎಂದು ಮುಗಿಯುತ್ತದೆ. ಹೀಗೆ ಬಿಜೆಪಿ ಟ್ವೀಟ್ ಮೂಲಕವೇ ರಾಹುಲ್ ಹಾಗೂ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯನ್ನ ಲೇವಡಿ ಮಾಡಿದೆ.

ಬಿಜೆಪಿಯ ಟ್ವೀಟ್ ಗೆ ತಿರುಗೇಟು ನೀಡಿರುವ ಕಾಂಗ್ರೆಸ್ ರಾಜ್ಯ ಸಭಾ ಸದಸ್ಯ ಜೈರಾಮ್ ರಮೇಶ್, ಭಾರತ್ ಜೋಡೋ ಯಾತ್ರೆಯ ಯಶಸ್ಸನ್ನ ಎದುರಿಸಲು ಸಾಧ್ಯವಾಗಾದ ಬಿಜೆಪಿ ಈಗ ಹೊಸ ಸೂತ್ರವನ್ನ ಕಂಡು ಕೊಂಡಿದೆ ಅದುವೆ ಫಸ್ಟ್ರೇಷನ್+ಡಿಪ್ರೆಷನ್= ಎನಿಮೇಷನ್ ಅಂದ್ರೆ ಹತಾಶೆ + ಕುಗ್ಗುವಿಕೆ = ಅನಿಮೇಷನ್ ಎಂದಿದ್ದಾರೆ. ಬಿಜೆಪಿಯವರನ್ನ ನೋಡಿದ್ರೆ ಕಣಿಕರ ಬರುತ್ತೆ ಎಂದಿದ್ದಾರೆ.

ಕಾಂಗ್ರೆಸ್ ತಿರುಗೇಟು : ಇನ್ನು ಬಿಜೆಪಿ ಟ್ವೀಟ್ ಗೆ ಕಾಂಗ್ರೆಸ್ ಕೂಡಾ ಟ್ವೀಟ್ ನಲ್ಲೇ ತಿರುಗೇಟು ಕೊಟ್ಟಿದ್ದು. ಇಲ್ಲಿ ಪ್ರಧಾನಿ ಮೋದಿ ಅವರ ವಿಡಿಯೋವನ್ನ ಅನಿಮೇಷನ್ ಮಾಡಿ ಮಾಡಿ ಪ್ರಶ್ನಿಸಲಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ, ನಿರುದ್ಯೋಗ, ಪೆಟ್ರೋಲ್ ಬೆಲೆ ಏರಿಕೆಯನ್ನ ಜನರು ಪ್ರಶ್ನಿಸಿದ್ರೆ ಮೋದಿ ಓಡಿ ಹೋಗ್ತಾರೆ ಅನ್ನೋ ರೀತಿ ಬಿಂಬಿಸಿದ್ದಾರೆ. ಅಲ್ದೆ ಇಷ್ಟೆಲ್ಲ ಸಮಸ್ಯೆಗಳ ಮಧ್ಯೆಯೂ ಮೋದಿ ಮೇಕಪ್ ಮಾಡಿಕೊಂಡು ಜನರಿಗೆ ಸುಳ್ಳು ಆಶ್ವಾಸನೆ ಕೊಡೋ ಪ್ರಧಾನಿ ಅಂತಾ ವಿಡಿಯೋ ಮೂಲಕ ಕುಟುಕಿದ್ದಾರೆ. ವಿಡಿಯೋದಲ್ಲಿ  ದುಷ್ಮನ್ ಚಿತ್ರದ ‘ವಾದ ತೇರಾ ವಾದ’ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತದೆ.

ಇದನ್ನೂ ಓದಿ : Nayanthara: 4 ತಿಂಗಳ ಹಿಂದಲ್ಲ.. 6 ವರ್ಷಗಳ ಹಿಂದೆಯೇ ಮದುವೆಯಾಗಿದ್ದೇವೆ.. ಏನಿದು ನಯನತಾರಾ ಅವಳಿ ಮಕ್ಕಳ ವಿವಾದಕ್ಕೆ ಟ್ವಿಸ್ಟ್

ಇದನ್ನೂ ಓದಿ : CONG PRESIDENT ELECTION: ಇಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ, ಕೌನ್ ಬನೇಗಾ ಕಾಂಗ್ ಕಿಂಗ್..?

ಇದನ್ನೂ ಓದಿ : ICC T20 World Cup 2022 : ಇಂದು ಭಾರತ ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ : ಇಲ್ಲಿದೆ T20 ವಿಶ್ವಕಪ್ ವೇಳಾಪಟ್ಟಿ

BJP MOCK RAHUL Cong Bjp Animation video war

Comments are closed.