ಸ್ಯಾಂಡಲ್ ವುಡ್ ಎಂಟ್ರಿಗೆ ರೆಡಿಯಾದ್ರು ಸ್ಟಾರ್ ನಟನ ಪುತ್ರಿ….! ಇಲ್ಲಿದೆ ಸಿದ್ಧತೆಯ ಭರ್ಜರಿ ಪೋಟೋ…!!

0

ನೆನಪಿರಲಿ ಪ್ರೇಮ್. ಇ ವರು ಯಾರಿಗೆ ತಾನೇ ನೆನಪಿರಲ್ಲ ಹೇಳಿ. ಮೀಸೆಯಂಚಿನಲ್ಲೇ ನಗುವ, ತುಂಟ ಹುಡುಗನಂತೆ ನಟಿಸುವ ಪ್ರೇಮ್ ಸ್ಯಾಂಡಲ್ ವುಡ್ ನ ವಿಭಿನ್ನ ಸ್ಟಾರ್ ವುಡ್ ಗಳಲ್ಲಿ ಗುರುತಿಸಿಕೊಂಡವರು. ಈಗಲೂ ಹುಡುಗಿಯರ ಕನಸಿನಲ್ಲಿ ಬರೋ ಹುಡುಗನಂತಿರೋ ಪ್ರೇಮ್ ಮನೆಯಿಂದ ಮತ್ತೊಬ್ಬರು ಸ್ಯಾಂಡಲವುಡ್ ಎಂಟ್ರಿಗೆ ಸಿದ್ಧವಾಗ್ತಿರೋ ಸಿಹಿಸುದ್ದಿ ಬಂದಿದೆ.

ಹೌದು, ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರಂತೆ. ಅದಕ್ಕಾಗಿ ಭರ್ಜರಿ ಸಿದ್ಧತೆ ನಡೆಸಿರೋ ಅಮೃತಾ ಮೊದಲ ಹಂತವಾಗಿ ಟ್ರೆಡಿಶನಲ್ ಪೋಟೋ ಶೂಟ್ ಕೂಡ ಮಾಡಿಸಿದ್ದಾರೆ.

ಅಮೃತಾ ಪೋಟೋ ಶೂಟ್ ನ ಕೆಲ ಪೋಟೋ ಗಳನ್ನು ನಟ ಪ್ರೇಮ್ ಹಂಚಿಕೊಂಡಿದ್ದು, ಮಗಳೆಂದರೇ ತಂದೆಗೆ ದೇವತೆಯಂತೆ. ದೇವತೆಯನ್ನು ಪಡೆಯುವ ಅವಕಾಶ ಎಲ್ಲ ತಂದೆಯರಿಗೂ ಸಿಗೋದಿಲ್ಲ. ಅಭಿನಂದನೆಗಳು ನನ್ನದೇವತೆಗೆ ಎಂಬ ಕ್ಯಾಪ್ಸನ್ ನೀಡಿದ್ದಾರೆ.

ಸುಂದರ ವಿನ್ಯಾಸದ ಲೆಹಂಗಾ ಹಾಗೂ ಸೀರೆ, ಜುಮುಕಿ, ಹೇರ್ ಸ್ಟೈಲ್ ನಲ್ಲಿ ಅಮೃತಾ ಮಿಂಚಿದ್ದು ಪೋಟೋದಲ್ಲಿ ಭರವಸೆಯ ನಟಿಯಾಗುವ ಲಕ್ಷಣ ತೋರಿದ್ದಾರೆ. ಮೂಲಗಳ ಪ್ರಕಾರ ಅಮೃತಾ ಸಿನಿಮಾ ಇಂಡಸ್ಟ್ರಿ ಗೆ ಕಾಲಿರಿಸುವ ಉದ್ದೇಶದಿಂದಲೇ ಪೋಟೋ ಶೂಟ್ ಮಾಡಿಸಿದ್ದಾರೆ ಎನ್ನಲಾಗಿದೆ.

ಶೈಕ್ಷಣಿಕವಾಗಿಯೂ ಒಳ್ಳೆಯ ಸಾಧನೆ ತೋರಿರುವ ಅಮೃತಾ 10 ನೇ ತರಗತಿಯಲ್ಲಿ 90 ಶೇಕಡಾ ಅಂಕ ಗಳಿಸಿದ್ದರು.
ಪ್ರಸ್ತುತ ಇಂಜಿನಿಯರಿಂಗ್ ಪದವಿ ಓದುತ್ತಿರುವ ಅಮೃತಾ ಬಿಡುವಿನ ವೇಳೆಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವಂತಿದೆ.

ಇನ್ನು ನೆನಪಿರಲಿ ಪ್ರೇಮ್ ಮಗಳನ್ನು ತುಂಬ ಪ್ರೀತಿಸುವ ತಂದೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಅಮೃತಾ 18 ವರ್ಷದ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದ ಪ್ರೇಮ್ ಮಗಳಿಗಾಗಿ ಗಿಟಾರ್ ನುಡಿಸಿ ಸಪ್ರೈಸ್ ನೀಡಿ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಗೆ ಮತ್ತೊಂದು ಸ್ಟಾರ್ ಪುತ್ರಿ ಎಂಟ್ರಿ ಬಹುತೇಕ ಫಿಕ್ಸ್ ಆಗಿದ್ದು ಮತ್ತಷ್ಟು ಡಿಟೇಲ್ಸ್ ಸಧ್ಯದಲ್ಲೇ ಸಿಗಲಿದೆ.

Leave A Reply

Your email address will not be published.