ಆನೆ ಮೇಲೆ ಯೋಗ ಪ್ರದರ್ಶನ…! ಜಾರಿ ಬಿದ್ದ ಬಾಬಾ ರಾಮದೇವ್…!!

0

ಮಥುರಾ : ಸದಾ ಒಂದಿಲ್ಲೊಂದು ಎಡವಟ್ಟಿನಿಂದಲೇ ಸುದ್ದಿಯಾಗೋ ಯೋಗಗುರು ಬಾಬಾ ರಾಮದೇವ್ ಈ ಬಾರಿ ಆನೆ ಮೇಲಿಂದ ಬಿದ್ದು ನಗೆಪಾಟಲಿಗಿಡಾಗಿದ್ದಾರೆ.

ಯೋಗ ಕಲಿಸೋ ಹುಮ್ಮಸ್ಸಿನಲ್ಲಿ ಆನೆ ಏರಿದ್ದ ಯೋಗಗುರು ಅಲ್ಲಿಂದಲೇ ಯೋಗ ಹೇಳಿಕೊಡುವ ಸರ್ಕಸ್ ನಡೆಸಿದ್ದರು. ಈ ವೇಳೆ ಆನೆ ಕೊಂಚ ಮೈಕೊಡವಿದ್ದು ಆಯತಪ್ಪಿದ ಬಾಬಾರಾಮದೇವ ಮರದಿಂದ ಹಣ್ಣು ಉದುರುವಂತೆ ಕೆಳಕ್ಕೆ ಬಿದ್ದಿದ್ದಾರೆ. ಅದೃಷ್ಟವಶಾತ ಹೆಚ್ಚಿನ ಏಟಾಗಿಲ್ಲ.

ಮಥುರಾದ ರಾಮನಾರತಿಯ ಯಲ್ಲಿರುವ ಮಹಾವನದ ಗುರುಶರಣನ ಆಶ್ರಮದ ಸನ್ಯಾಸಿಗಳಿಗೆ ಯೋಗ ಹೇಳಿಕೊಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಬಾಬಾ ರಾಮದೇವ್ ಆನೆಯಿಂದ ಉದುರಿ ಬಿದ್ದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜನರು ಬಾಬಾರಾಮದೇವ್ ದೃಶ್ಯ ನೋಡಿ ಬೇಕಿತ್ತಾ ಇದೆಲ್ಲ ಅಂತ ನಗ್ತಿದ್ದಾರೆ. ಅದರೆ ಆನೆಯಿಂದ ಬಿದ್ದ ರಾಮದೇವ್ ಮಾತ್ರ ಇದನ್ನು ಸಹಜವಾಗಿಯೇ ತೆಗೆದುಕೊಂಡಿದ್ದು ಕೆಳಕ್ಕೆ ಬೀಳುತ್ತಿದ್ದಂತೆ ಮೇಲೆದ್ದು ತಾವೇ ನಕ್ಕು ಎಲ್ಲರನ್ನು ನಗಿಸಿದ್ದಾರಂತೆ.

ತಮ್ಮ ವಿಚಿತ್ರ ವರ್ತನೆಯಿಂದ ಆಗಾಗ ಸುದ್ದಿಯಾಗೋ ಯೋಗಗುರು ಬಾಬಾ ರಾಮದೇವ್ ಇತ್ತೀಚಿಗಷ್ಟೇ ಸುರಿಯುವ ಮಳೆಯಲ್ಲಿ ಸೈಕಲ್ ಹೊಡೆಯಲು ಹೋಗಿ ಜಾರಿ ಬಿದ್ದು ಜನರ ನಗುವಿಗೆ ಕಾರಣವಾಗಿದ್ದರು.

https://twitter.com/The_MemeBaaaz/status/1316046827901210624
Leave A Reply

Your email address will not be published.