ಕಥೆನೂ ಸಿಗ್ತಿಲ್ಲ, ಬಂಡವಾಳವೂ ಹೊಂದ್ತಿಲ್ಲ: ಕೊನೆಗೂ ರಟ್ಟಾಯ್ತು ಕೆಜಿಎಫ್‌ ನಟ ಯಶ್ ಸಿನಿಮಾ ವಿಳಂಬದ ಗುಟ್ಟು

ಕೆಜಿಎಫ್ (KGF), ಕೆಜಿಎಫ್ 2 (KGF 2) ಸಿನಿಮಾ ರಿಲೀಸ್ ಆಗಿ ವರ್ಷಗಳೇ ಕಳೆದಿವೆ.‌ಆದರೆ ಸಿನಿಮಾ ಯಶಸ್ಸಿನ ಬಳಿಕ ಸೂಪರ್ ಸ್ಟಾರ್ ರೆಂಜ್ ಗೆ ಏರಿದ ಯಶ್ (Actor Yash) ಮಾತ್ರ ಮುಂದಿನ ಸಿನಿಮಾ (Rocking Star Yash Next Movie) ಅನೌನ್ಸ್ ಮಾಡೋ ಯಾವುದೇ ಲಕ್ಷಣಗಳೇ ಇಲ್ಲ. .

ಕೆಜಿಎಫ್ (KGF) ಹಾಗೂ ಕೆಜಿಎಫ್ 2 (KGF 2) ಸಿನಿಮಾ ರಿಲೀಸ್ ಆಗಿ ವರ್ಷಗಳೇ ಕಳೆದಿವೆ.‌ಆದರೆ ಸಿನಿಮಾ ಯಶಸ್ಸಿನ ಬಳಿಕ ಸೂಪರ್ ಸ್ಟಾರ್ ರೆಂಜ್ ಗೆ ಏರಿದ ಯಶ್ (Actor Yash) ಮಾತ್ರ ಮುಂದಿನ ಸಿನಿಮಾ ಅನೌನ್ಸ್ ಮಾಡೋ ಯಾವುದೇ ಲಕ್ಷಣಗಳೇ ಇಲ್ಲ.‌ಬರ್ತಡೇ (Yash Birthaday), ವರಮಹಾಲಕ್ಷ್ಮೀ (Varamahalakshmi Festival ),ಗೌರಿ ಗಣೇಶ (Gowri Ganesh Festival) ಹೀಗೆ ಮುಹೂರ್ತಗಳ ಮೇಲೆ ಮುಹೂರ್ತ ಬರುತ್ತಲೇ ಇದ್ದರೂ ಸಿನಿಮಾ ಮಾಹಿತಿ ಮಾತ್ರ ರಣಬೇಟೆಗಾರನ ಬತ್ತಳಿಕೆಯಿಂದ ಹೊರಬರುತ್ತಿಲ್ಲ.

No story, no capital The secret of KGF actor Yash Next Movie delay is finally revealed 2
Image Credit : Yash/Instagram

ಪೋಷಕ ಪಾತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ದೇಶದ ಚಿತ್ರರಂಗವೇ ಹಿಂತಿರುಗಿ ನೋಡುವಂತೆ ಮಾಡಿದ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash). ಕೋಟಿ ಕೋಟಿ ಆದಾಯ ಗಳಿಕೆಯ ಜೊತೆಗೆ ವೀಕ್ಷಣೆಯಲ್ಲೂ ನೊರೆಂಟು ದಾಖಲೆ ಬರೆದ ಕೆಜಿಎಫ್ ಯಶ್ ಬದುಕಿನ ಅತಿದೊಡ್ಡ ಬ್ರೇಕ್ ಸಿನಿಮಾ.

ಇದನ್ನೂ ಓದಿ :ಸಪ್ತಮಿಯ ಲೀಲಾವತಾರ ! ಹಬ್ಬದ ರಂಗೇರಿಸಿದ ಕಾಂತಾರ ಚೆಲುವೆ

ಇದಾದ ಬಳಿಕ ಹೊಂಬಾಳೆ ಫಿಲ್ಸ್ಮ್ ಅತ್ಯಂತ ಮುತುವರ್ಜಿಯಿಂದ ಸಿದ್ಧಪಡಿಸಿದ ಸಿನಿಮಾ ಕೆಜಿಎಫ್ 2. ಈ ಸಿನಿಮಾ ಕನ್ನಡ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿತು. ಈ ಸಿನಿಮಾಗಳ ಯಶಸ್ಸು ರಾಕಿಂಗ್ ಸ್ಟಾರ್ ಯಶ್ ನ ರ ಸಿನಿಮಾದ ಪರಿಕಲ್ಪನೆಯನ್ನೇ ಬದಲಾಯಿಸಿತು.

ಹೀಗಾಗಿ ಈಗ ಯಶ್ ಮುಂದಿನ ಸಿನಿಮಾ ಯಾವುದು ಅನ್ನೋದು ಕೇವಲ ನಿರ್ಮಾಪಕರು, ನಿರ್ದೇಶಕರಿಗೆ ಮಾತ್ರವಲ್ಲ ನಟ-ನಟಿಯರಿಗೆ ಹಾಗೂ ಕೋಟ್ಯಾಂತರ ಅಭಿಮಾನಿಗಳಿಗೆ ಕಾಡುತ್ತಿರುವ ಕುತೂಹಲ ಮತ್ತು ಪ್ರಶ್ನೆ ‌. ಆದರೆ ಕಳೆದ ಒಂದು ವರ್ಷದಿಂದಲೂ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಕ್ಕೆ ರಾಕಿಂಗ್ ಸ್ಟಾರ್ ಯಶ್ ತೆರೆ ಎಳೆಯುವ ಪ್ರಯತ್ನವನ್ನೇ ಮಾಡುತ್ತಿಲ್ಲ.

ಇದನ್ನೂ ಓದಿ : ಚಿರು ಆಸೆಯಂತೆ‌ ನಟನೆಯಲ್ಲಿ ಬ್ಯುಸಿಯಾದ ಮೇಘನಾ ರಾಜ್‌ ಸರ್ಜಾ : ತತ್ಸಮ ತದ್ಭವ ಬಳಿಕ ಅಮರ್ಥಕ್ಕೆ‌ಜೈ ಎಂದ ನಟಿ

ಮೊದಲು ಕಳೆದ ಯುಗಾದಿಗೆ ಯಶ್ ಮುಂದಿನ ಚಿತ್ರ ಅನೌನ್ಸ್ ಆಗಲಿದೆ ಎನ್ನಲಾಗಿತ್ತು. ಬಳಿಕ ಈ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿನಿಮಾ ರಿಲೀಸ್ ಎನ್ನಲಾಗಿತ್ತು. ಆದರೆ ಯಾವುದೇ ಅಪ್ಡೇಟ್ ಬರಲೇ ಇಲ್ಲ. ತೆಲುಗು,ತಮಿಳು,ಹಿಂದಿಗೆಲ್ಲ ಯಶ್ ಹೋಗ್ತಾರೆ ಅನ್ನೋ ಗಾಸಿಪ್ ಕೇಳಿಬಂತು. ತಮಿಳಿನಿಂದ ನಿರ್ದೇಶಕರು ಬರುತ್ತಿದ್ದು ಅವರೇ ಯಶ್ ಸಿನಿಮಾ ನಿರ್ದೇಶಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

No story, no capital The secret of KGF actor Yash Next Movie delay is finally revealed
Image Credit : Yash/Instagram

ಇದಲ್ಲದೇ ಯಶ್ ಸಿನಿಮಾಗೆ ಮಹಿಳಾ ನಿರ್ದೇಶಕಿಯೊಬ್ಬರು ಆಕ್ಷ್ಯನ್ ಕಟ್ ಹೇಳಲಿದ್ದಾರೆ ಎಂಬ ಮಾತು ಕೇಳಿಬಂದಿತ್ತಲ್ಲದೇ, ಪತಿಗಾಗಿ ಸ್ವತಃ ರಾಧಿಕಾ ಪಂಡಿತ್ ಆಕ್ಷ್ಯನ್ ಕಟ್ ಹೇಳ್ತಾರೆ ಎಂದು ನೀರಿಕ್ಷೆ ಮಾಡಲಾಗಿತ್ತು. ಆದರೆ ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾ ತೆರೆಗೆ ಬಂದು ವರ್ಷಗಳೇ ಉರುಳಿದರೂ ಯಶ್ 19 ನೇ ಸಿನಿಮಾ ಅನೌನ್ಸ್ ಆಗದೇ ಇರೋದು ಹಲವು ಅನುಮಾನ ಗಳಿಗೆ ಕಾರಣವಾಗಿದೆ.

ಇದನ್ನೂ ಓದಿ : Inamdar Movie: ತೆರೆಗೆ ಬರಲು ಸಿದ್ದವಾಯ್ತು ಮತ್ತೊಂದು ಕನ್ನಡ ಸಿನಿಮಾ ಇನಾಮ್ದಾರ್‌

ನರ್ತನ್ ಜೊತೆ ಕೆವಿಎನ್ ಪ್ರೊಡಕ್ಷನ್ಸ್ ನಲ್ಲಿ ಯಶ್ ತಮ್ಮ 19 ನೇ ಸಿನಿಮಾ ಘೋಷಿಸುವ ಸಿದ್ಧತೆಯಲ್ಲಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಮೂಲಗಳ ಮಾಹಿತಿ ಪ್ರಕಾರ ಯಶ್ ಹಾಗೂ ಹೊಂಬಾಳೆ ಸಿನಿಮಾದ ನಡುವೆ ಬಿರುಕು ಉಂಟಾಗಿದೆ ಎನ್ನಲಾಗ್ತಿದೆ. ಹೀಗಾಗಿ ಹೊಂಬಾಳೆಗಿಂತ ಹೆಚ್ಚು ಬಂಡವಾಳ ಹೂಡಬಲ್ಲ ಪ್ರೊಡಕ್ಷನ್ ಹೌಸ್ ಹುಡುಕಾಟದಲ್ಲಿದ್ದಾರಂತೆ ಯಶ್.

No story, no capital The secret of KGF actor Yash Next Movie delay is finally revealed
Image Credit : Yash/Instagram

ಆದರೆ ಎಲ್ಲಿಯೂ ಮಾತುಕತೆ ಫಲಪ್ರದವಾಗಿಲ್ಲ. ಅಲ್ಲದೇ ಕೆಜಿಎಫ್, ಕೆಜಿಎಫ್ 2 ಸಿನಿಮಾದ ಯಶಸ್ಸಿನ ಬಳಿಕ ಸಹಜವಾಗಿಯೇ ಯಶ್ ಸಿನಿಮಾದ ಬಗ್ಗೆ ನೀರಿಕ್ಷೆ ಇದೆ. ಹೀಗಾಗಿ ಅಂತಹುದೇ ಬಿಗ್ ಟ್ವಿಸ್ಟ್ ಕತೆಯೊಂದರ ಹುಡುಕಾಟವೂ ನಡೆದಿದೆ. ಈ ಎಲ್ಲ ಕಾರಣಕ್ಕೆ ಯಶ್ ತಮ್ಮ 19 ನೇ ಸಿನಿಮಾದ ಗುಟ್ಟು ಬಿಟ್ಟುಕೊಟ್ಟಿಲ್ಲ. ಇನ್ನು ಗಣೇಶ ಹಬ್ಬಕ್ಕೆ ಹೊಸ ಚಿತ್ರದ ಅಪ್ಡೇಟ್ ಸಿಗಲಿದೆ ಎಂಬ ಸಂಗತಿ ಸುಳ್ಳಾಗಿದ್ದು, ಮತ್ತೆ ಯಶ್ ಸಿನಿಮಾ ಘೋಷಣೆಯ ಖುಷಿ ಡಿಸೆಂಬರ್ ಗೆ ಸಿಗಬಹುದೆಂಬ ನೀರಿಕ್ಷೆ ಸ್ಯಾಂಡಲ್ ವುಡ್ ನಲ್ಲಿ ಸೃಷ್ಟಿಯಾಗಿದೆ.

No story, no capital The secret of KGF actor Yash Next Movie delay is finally revealed

Comments are closed.