(Olavina Nildana) ಒಲವಿನ ನಿಲ್ದಾಣ ಧಾರಾವಾಹಿ ದಿನದಿಂದ ದಿನಕ್ಕೆ ರೋಚಕ ತಿರುವನ್ನು ಪಡೆದುಕೊಳ್ಳುತ್ತಿದೆ. ಮಲೆನಾಡ ಹುಡುಗಿ ತಾರಿಣಿಯು ತುಂಬು ಕುಟುಂಬದ ಪ್ರೀತಿಯಲ್ಲಿ ಬೆಳೆದವಳು. ತನ್ನ ಕನಸಿನಲ್ಲಿ ಕಾಣುವ ಹುಡುಗ ಮುಂದೆ ನನಗೆ ಸಿಗುತ್ತಾನೆ ಎಂದು ಕನಸು ಕಾಣುತ್ತಾ ಇರುತ್ತಾಳೆ. ಕನಸಿನಲ್ಲಿ ಬರುವ ಹುಡುಗನ ಹಾಗೆ ಸಿದ್ಧಾಂತ್ ಜೊತೆ ತಾರಿಣಿಯ ನಿಶ್ಚಿರ್ತಾವನ್ನು ಮನೆಯವರು ಮಾಡಿದ್ದಾರೆ. ಈಗ ಮದುವೆಗೆ ಸಕಲ ಸಿದ್ದತೆ ನಡೆಯುತ್ತಿದೆ.ತಾರಿಣಿಯ ಮನೆಯಲ್ಲಿ ಲಗ್ನ ಪತ್ರಿಕೆ ಪೂಜೆಯನ್ನು ಇಟ್ಟುಕೊಂಡಿದ್ದಾರೆ. ಹಾಗಾಗಿ ತಾರಿಣಿಯ ಮನೆಯವರು ಸಿದ್ಧಾಂತ್ ಮನೆಯವರ ಬರುವಿಕೆಯನ್ನು ಎದುರು ನೋಡುತ್ತಿದ್ದಾರೆ.
(Olavina Nildana) ಸಿದ್ಧಾಂತ್ ಮನೆಯವರನ್ನು ಒಪ್ಪಿಸಿ ಕರೆದುಕೊಂಡು ಬರುವುದಾಗಿ ತಾರಿಣಿಗೆ ಮಾತು ಕೊಟ್ಟಿದ್ದಾನೆ. ಹಾಗಾದ್ರೆ ಸಿದ್ಧಾಂತ್ ನಿಜವಾಗಿಯೂ ಮನೆಯವರನ್ನೂ ಒಪ್ಪಿಸಿ ತಾರಿಣಿ ಮನೆಗೆ ಹೋಗುವ ಒಳಾರ್ಥ ತಿಳಿಯಬೇಕಾಗಿದೆ. ಮನೆಯ ಪರಿಸ್ಥಿತಿ ಸರಿಯಿಲ್ಲದ ಕಾರಣ ಸಿದ್ದಾಂತ್ ಗೆ ಮದುವೆ ಆಗಲು ಇಷ್ಟವಿಲ್ಲ. ಆದರೂ ತಾರಿಣಿಯ ಒಳ್ಳೆತನಕ್ಕೆ ಅವಳ ಕಡೆ ಮನಸ್ಸು ವಾಲಿದರೆ,ಇತ್ತಕಡೆ ಮನೆ ಮತ್ತು ಮನೆಯಜವಬ್ದಾರಿಗಳು ಅಡ್ಡಬರುತ್ತಿದೆ. ಅದರಲ್ಲೂ ತಾರಿಣಿ ಸಿದ್ಧಾಂತ್‌ನ್ನು ಮೆಚ್ಚಿಸಲು ಪ್ರಯತ್ನಗಳನ್ನು ಮಾಡುತ್ತಿದ್ದಾಳೆ. ಇದರ ನಡುವೆ ಅವಳ ಚಿಕ್ಕಪ್ಪ ಪಾಲಾಕ್ಷನಿಂದ ಮದುವೆಯನ್ನು ನಿಲ್ಲಿಸುವಂತಹ ಹುನ್ನಾರದ ಪ್ರಯತ್ನಗಳು ನಡೆಯುತ್ತಿದೆ.
ತಾರಿಣಿಯ ಚಿಕ್ಕಪ್ಪ ಪಾಲಾಕ್ಷ ಸಿದ್ಧಾಂತ್ ಮನೆಯವರ ವಾತಾವರಣವನ್ನು ತಿಳಿದುಕೊಂಡು ಅವನ ಅತ್ತಿಗೆಯನ್ನು ಪರಿಚಯ ಮಾಡಿಕೊಂಡು ತಾರಿಣಿ ಮತ್ತು ಸಿದ್ಧಾಂತ್ ಎಂಗೇಜ್ ಮೆಂಟ್ ವಿಷಯದ ಕುರಿತು ತಿಳಿಸುತ್ತಾನೆ. ಸಿದ್ಧಾಂತ್ ಮತ್ತು ತಾರಿಣಿಯ ಎಂಗೆಜ್ ಮೆಂಟ್ ಪೊಟೋವನ್ನು ತೋರಿಸುತ್ತಾನೆ. ಆದರು ಕೂಡ ಸಂಗೀತ ಇದನ್ನು ಒಪ್ಪುವುದಿಲ್ಲ.ಅವನ ನಡುವಳಿಕೆಯಿಂದ ತಾರಿಣಿಯನ್ನು ಪ್ರೀತಿಸುವುದು ನಿಜನಾ ಎಂಬ ಅನುಮಾನ ಬರುತ್ತದೆ. ಏನೇ ವಿಷಯವಿದ್ದರು ನನ್ನ ಹತ್ತಿರ ಹೇಳಿಕೊಳ್ಳುತ್ತಿದ್ದ. ಮಂದರಗದ್ದೆಯಿಂದ ಬಂದಾಗಿನಿಂದ ಸರಿಯಾಗಿ ಯಾವ ವಿಷಯ ಹೇಳುತ್ತಿಲ್ಲ ಎಂದು ಸಂಗೀತ ಕೋಪಗೊಂಡಿದ್ದಾಳೆ. ಸಿದ್ಧಾಂತ ಪ್ರೀತಿಸುತ್ತಿರುವ ಮನೆಯವರ ಮುಂದೆ ಬಯಲು ಮಾಡಬೇಕೆಂಬ ಪ್ರಯತ್ನದಲ್ಲಿ ಇದ್ದಾಳೆ ಈ ಪ್ರಯತ್ನದಲ್ಲಿ ಗೆಲ್ಲುತ್ತಾಳಾ ಎಂದು ನೋಡಬೇಕು.
ಇದನ್ನೂ ಓದಿ:Home Remedy for Memory Power: ಅತಿಯಾದ ಮರೆವು ಕಾಡುತ್ತಿದೆಯೇ ? ಹಾಗಿದ್ದರೆ ಇಲ್ಲಿದೆ ಸುಲಭ ಪರಿಹಾರ
ಸಂಗೀತ ಸಿದ್ಧಾಂತ್ ಗೆಳೆಯನ ಹೆಸರಿನಲ್ಲಿ ಕರೆಯನ್ನು ಮಾಡಲು ವ್ಯಕ್ತಿಗೆ ಹಣವನ್ನು ಕೊಡುತ್ತಾಳೆ. ಅದರಂತೆ ಅವನು ಸಿದ್ಧಾಂತ್ ತಾಯಿಗೆ ಕರೆಮಾಡಿ ನಿಮ್ಮ ಮಗ ಕಾಲೇಜ್ ನಲ್ಲಿ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂದು ತಿಳಿಸುತ್ತಾನೆ. ಸಿದ್ಧಾಂತ್ ತಾಯಿಗೆ ಹುಡುಗಿಯನ್ನು ಪ್ರೀತಿಸುತ್ತಿರುವ ವಿಚಾರ ತಿಳಿದಿದೆ ಆದರೆ ತಾರಿಣಿಯ ಜೊತೆ ಎಂಗೆಜ್ ಮೆಂಟ್ ಆಗಿರುವ ವಿಚಾರ ತಿಳಿದಿಲ್ಲ. ಪ್ರೀತಿಸುವ ವಿಚಾರ ಕೇಳಿ ಆತಂಕಗೊಂಡ ನಿರೂಪಮ ಮದುವೆ ಆಗುತ್ತಿರುವ ವಿಚಾರ ಕೇಳಿ ಹೇಗೆ ಪ್ರತಿಕ್ರಿಯೆ ನೀಡುತ್ತಾಳೆ ಎಂಬುದನ್ನು ಒಲವಿನ ನಿಲ್ಧಾಣ ಧಾರವಾಹಿಯ ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಾಗಿದೆ.
ಇದನ್ನೂ ಓದಿ:ಮುರುಘಾ ಮಠಕ್ಕೆ ಉತ್ತರಾಧಿಕಾರಿ ನೇಮಕ ವಿಚಾರ: ಸಿಎಂ ಅಂಗಳ ತಲುಪಿದ ವಿವಾದ
Olavina Nildana : Siddharth is telling the truth even during the invitation worship ceremony