ಮುರುಘಾ ಮಠಕ್ಕೆ ಉತ್ತರಾಧಿಕಾರಿ ನೇಮಕ ವಿಚಾರ: ಸಿಎಂ ಅಂಗಳ ತಲುಪಿದ ವಿವಾದ

ಚಿತ್ರದುರ್ಗ : ಖಾವಿಧಾರಿಯಾಗಿ‌ ಮೊನ್ನೆ‌ಮೊನ್ನೆಯವರೆಗೂ ನಾಡಿಗೆ ಸಂತರೆನ್ನಿಸಿದ್ದ ಚಿತ್ರದುರ್ಗ ಮುರುಘಾ ಪೀಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸದ್ಯ ಪೋಕ್ಸೋ ಪ್ರಕರಣದ ಆರೋಪಿ ಸ್ಥಾನದಲ್ಲಿದ್ದು ಜೈಲು ಸೇರಿದ್ದಾರೆ. ಈ ಮಧ್ಯೆ ಶಿವಮೂರ್ತಿ ಶಿವಾಚಾರ್ಯರನ್ನು ಮಠದ ಪೀಠಾಧಿಪತಿ ಸ್ಥಾನದಿಂದ ವಜಾ ಮಾಡಬೇಕೆಂಬ ಆಗ್ರಹ ಬಲಗೊಳ್ಳತೊಡಗಿದ್ದು, ಇದಕ್ಕಾಗಿ ಮುರುಘಾ ಮಠದ ಭಕ್ತ ವೃಂದ ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿದ್ದು, ಪೀಠಾಧಿಪತಿ ನೇಮಕದ (successor Muruga Mutt) ಚೆಂಡು ಈಗ ಸಿಎಂ ಅಂಗಳ ತಲುಪಿದೆ.

ಶಿವಮೂರ್ತಿ ಶರಣರು ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದಾಗಿನಿಂದ ಅವರನ್ನು ಪೀಠದಿಂದ ವಜಾಗೊಳಿಸಬೇಕೆಂಬ ಒತ್ತಡ ಹೆಚ್ಚುತ್ತಲೇ ಇದೆ. ಈ ಬಗ್ಗೆ ಈಗಾಗಲೇ ಮುರುಘಾ ಮಠದಲ್ಲಿ ಎರಡು ಸುತ್ತಿನ ಸಭೆ ಕೂಡ ನಡೆದಿದೆ. ಈ ಮಧ್ಯೆ ಮುರುಘಾ ಮಠದ ಪೀಠಾಧಿಪತಿಗಳು ಅತ್ಯಾಚಾರ ಆರೋಪದಡಿ ಜೈಲು ಸೇರಿರೋದು ಭಕ್ತ ವೃಂದಕ್ಕೆ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ.

ನಾಡಿನ ವೀರಶೈವ ಲಿಂಗಾಯತ್ ಸಮುದಾಯಕ್ಕೆ ಅತ್ಯಂತ ಪೂಜನೀಯ ಮಠಗಳಲ್ಲಿ ಒಂದಾದ ಮುರುಘಾ ಮಠದ ಮೇಲೆ ಈ ರೀತಿಯ ಆರೋಪ ಬಂದಿರೋದರಿಂದ ಮಠದ ಘನತೆ,ಇತಿಹಾಸ ಹಾಗೂ ಅದರ ಗೌರವ ಧಕ್ಕೆಯಾಗಿದೆ. ಅಲ್ಲದೇ ಪೀಠಾಧಿಪತಿಗಳ ಮೇಲೆ ಬಂದಿರೋದು ಗುರುತರವಾದ ಆರೋಪ. ಹೀಗಾಗಿ ಶ್ರೀಗಳು ಪೀಠ ತ್ಯಜಿಸದೇ ಇದ್ದಲ್ಲಿ ಅದು ಸಮುದಾಯಕ್ಕೆ ತಪ್ಪು ಸಂದೇಶ ನೀಡಲಿದೆ ಅನ್ನೋದು ವೀರಶೈಲ ಲಿಂಗಾಯತ್ ಸಮುದಾಯದ ಭಕ್ತರ ಕಳಕಳಿ. ಹೀಗಾಗಿ ಮುರುಗಾಶ್ರೀಯನ್ನು ಪೀಠದಿಂದ ಇಳಿಸಲು ಆಗ್ರಹಿಸುತ್ತಿದ್ದಾರೆ‌ . ಸದ್ಯ ಈ ಬೇಡಿಕೆ ಮಠದ ಅಂಗಳವನ್ನು ದಾಟಿ ರಾಜ್ಯ ಸರ್ಕಾರದ ಅಂಗಳ ತಲುಪಿದೆ.

ಮಾಜಿ ಸಚಿವ ಏಕಾಂತಯ್ಯ ನೇತೃತ್ವದಲ್ಲಿ ಹಲವು ವೀರಶೈವ ಹಾಗೂ ಲಿಂಗಾಯತ್ ಸಮುದಾಯದ ಗಣ್ಯರು ಸಿಎಂ ಭೇಟಿ ಮಾಡಿದ್ದು, ವೀರಶೈವ, ಲಿಂಗಾಯತ್ ರ ಮಠವಾಗಿರೋ ಮುರುಘಾ ಮಠದ ಹಾಲಿ ಪೀಠಾಧಿಪತಿ ಮುರುಘಾಶ್ರೀಗಳನ್ನು ಸ್ಥಾನದಿಂದ ಇಳಿಸಿ ಬೇರೆ ಪೀಠಾಧೀಶರ ಆಯ್ಕೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರಂತೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಸಿಎಂ ಬೊಮ್ಮಾಯಿ, ಮಠದ ಭಕ್ತರು, ಮಾಜಿ ಶಾಸಕರ ನಿಯೋಗ ನನ್ನನ್ನ ಭೇಟಿ ಮಾಡಿದ್ದಾರೆ.ಆಡಳಿತ ವಿಚಾರದಲ್ಲಿ ಆಗ್ತಿರುವ ಸಮಸ್ಯೆ ಹೇಳಿದ್ದಾರೆ. ಮಠದ ಸಂಪೂರ್ಣ ವಿಚಾರ ನನಗೆ ಹೇಳಿದ್ದಾರೆ. ಮಠದಲ್ಲಿ‌ ಕಾನೂನು ಪ್ರಕಾರ ಒಂದು ಟ್ರಸ್ಟ್ ಇದೆ‌. ಕಾನೂನು ಪ್ರಕಾರ ಏನೆಲ್ಲ ಅವಕಾಶ ಇದೆ ಚರ್ಚೆ ಮಾಡ್ತೀವಿ. ಏನೇ ಕ್ರಮ ತೆಗೆದುಕೊಂಡರು ಕಾನೂನು ಚೌಕಟ್ಟಿನ ಪ್ರಕಾರವೇ ಮುಂದಿನ ಕ್ರಮ ತಗೋತೀವಿ ಎಂದಿದ್ದಾರೆ. ಒಟ್ಟಿನಲ್ಲಿ ಸದ್ಯ ಮುರುಘಾ ಮಠದ ಉತ್ತರಾಧಿಕಾರಿ ವಿಚಾರ ಸರ್ಕಾರದ ಅಂಗಳ ತಲುಪಿದೆ.

ಇದನ್ನೂ ಓದಿ : ಪೋಕ್ಸೋ ಪ್ರಕರಣ ದುರ್ಬಲಗೊಳಿಸಲು ಮುರುಘಾಶ್ರೀಗಳ ಸಮ್ಮುಖದಲ್ಲಿ ನಡೆಯಿತಾ ಸಂಧಾನ ಸಭೆ

ಇದನ್ನೂ ಓದಿ : Idli ATM : ಎಟಿಎಂ ನಲ್ಲಿ ದುಡ್ಡಿನ ಬದಲು ಇಡ್ಲಿ, ವಡೆ : ಬೆಂಗಳೂರಲ್ಲಿ ಹೊಸ ತಂತ್ರಜ್ಞಾನ

Appointment of successor to Muruga Mutt Shivamurthy Murugha Sharanaru Controversy reaches CM’s court

Comments are closed.