ಮಂಗಳವಾರ, ಜೂನ್ 17, 2025
HomeCinemaತಿರುಪತಿ ದೇವಸ್ಥಾನದಲ್ಲೇ ನಟಿಗೆ ಕಿಸ್ ಮಾಡಿದ ನಿರ್ದೇಶಕ

ತಿರುಪತಿ ದೇವಸ್ಥಾನದಲ್ಲೇ ನಟಿಗೆ ಕಿಸ್ ಮಾಡಿದ ನಿರ್ದೇಶಕ

- Advertisement -

ಹೈದ್ರಾಬಾದ್‌ : Om Raut-Kriti Sanoon : ಆದಿಪುರುಷ್‌ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚುತ್ತಿದೆ. ಪ್ರಭಾಸ್‌, ಕೃತಿ ಸನೋನ್‌, ಸೈಫ್‌ ಅಲಿಖಾನ್‌ ನಟನೆಯ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದ್ದು, ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಆದರೆ ಈ ನಡುವಲ್ಲೇ ಸಿನಿಮಾದ ನಿರ್ದೇಶಕ ಓಂ ರಾವತ್‌ ನಟಿ ಕೃತಿ ಸನೋನ್‌ ಸದ್ಯ ವಿವಾದಕ್ಕೆ ಗುರಿಯಾಗಿದ್ದಾರೆ.

ಆದಿಪುರುಷ್‌ ಚಿತ್ರತಂಡ ಬುಧವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದೆ. ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಹೊರ ಬಂದ ಬಳಿಕ ನಾಯಕಿ ಕೃತಿ ಸನೋನ್‌ಗೆ ನಿರ್ದೇಶಕ ಓಂ ರಾವತ್‌ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆಂಧ್ರಪ್ರದೇಶದ ಬಿಜೆಪಿ ಕಾರ್ಯದರ್ಶಿ ರಮೇಶ್‌ ನಾಯ್ಡು ನಗೋತು ಈ ಕುರಿತು ಟ್ವೀಟ್‌ ಮಾಡಿದ್ದು, ನಂತರ ಡಿಲೀಟ್‌ ಮಾಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಕುರಿತು ಸಾಕಷ್ಟು ವಿರೋಧ ಕೇಳಿಬರುತ್ತಿದೆ.

ನಿರ್ದೇಶಕ ಓಂ ರಾವತ್ ಅವರ ನಿರ್ದೇಶನದ ಆದಿಪುರುಷ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದೇವಸ್ಥಾನದಲ್ಲಿ ಈ ರೀತಿಯ ವರ್ತನೆ ತಪ್ಪು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಸೆಲೆಬ್ರಿಟಿಗಳಿಗೆ ಅಪ್ಪುಗೆ ಮತ್ತು ಸ್ನೇಹಪರ ಮುತ್ತುಗಳು ಹೊಸದಲ್ಲ. ಹಾಗಾಗಿ, ಈ ರೀತಿಯ ಟ್ರೋಲ್‌ಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನಿರ್ದೇಶಕರು ಪ್ರತಿಕ್ರೀಯೆ ಕೊಟ್ಟಿದ್ದಾರೆ.

ಜೂನ್ 16 ರಂದು ಆದಿಪುರುಷ ಬಿಡುಗಡೆಯಾಗುತ್ತಿದೆ. ಪ್ರಭಾಸ್, ಕೃತಿ ಸನನ್, ಸನ್ನಿ ಸಿಂಗ್, ಓಂ ರಾವುತ್ ಅವರನ್ನೊಳಗೊಂಡ ಆದಿಪುರುಷನ ಸಂಪೂರ್ಣ ತಂಡವು ಚಿತ್ರದ ಅಂತಿಮ ಟ್ರೈಲರ್ ಅನ್ನು ಬಿಡುಗಡೆ ಮಾಡುವುದರೊಂದಿಗೆ ನಿನ್ನೆ ರಾತ್ರಿ ತಿರುಪತಿಯಲ್ಲಿ ಅದ್ಭುತ ಪ್ರದರ್ಶನವಾಗಿತ್ತು.

ಇದನ್ನೂ ಓದಿ : Aadipurush Movie : ಇಂದು ತಿರುಪತಿಯಲ್ಲಿ ನಡೆಯಲಿದೆ ಆದಿಪುರುಷ ಅದ್ದೂರಿ ಪ್ರೀ ರಿಲೀಸ್‌ ಇವೆಂಟ್‌

ಇದನ್ನೂ ಓದಿ : Chiranjeevi Sarja Death Anniversary : ಚಿರಂಜೀವಿ ಸರ್ಜಾ ಮೂರನೇ ವರ್ಷದ ಪುಣ್ಯಸ್ಮರಣೆ : ಅಣ್ಣನೊಂದಿಗಿನ ಸವಿನೆನಪು ಹಂಚಿಕೊಂಡ ಧ್ರುವ ಸರ್ಜಾ

Adhipurush director Om Raut Kisses Kriti Sanoon in Tirupathi temple

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular