Rahul Dravid : ಆರ್.ಅಶ್ವಿನ್ ಬೌಲಿಂಗ್ ರಹಸ್ಯವನ್ನು ಕನ್ನಡದಲ್ಲೇ ಬಿಚ್ಚಿಟ್ಟ ಕೋಚ್ ರಾಹುಲ್ ದ್ರಾವಿಡ್

ಲಂಡನ್: Rahul Dravid : ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ (Team India head coach Rahul Dravid) ಆಗಾಗ ಕನ್ನಡ ಮಾತಾಡ್ತಾರೆ. ದ್ರಾವಿಡ್ ಅವರ ಕನ್ನಡವನ್ನು ಕೇಳೋದೇ ಕಿವಿಗೆ ಇಂಪು. ಅಪರೂಪಕ್ಕೊಮ್ಮೆ ಕನ್ನಡ ಮಾತಾಡೋ ರಾಹುಲ್ ದ್ರಾವಿಡ್, ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರ ಬೌಲಿಂಗ್ ರಹಸ್ಯವನ್ನು ಕನ್ನಡದಲ್ಲೇ ಬಿಚ್ಚಿಟ್ಟಿದ್ದಾರೆ.

ಭಾರತ ಕ್ರಿಕೆಟ್ ತಂಡ ಸದ್ಯ ಲಂಡನ್’ನ ದಿ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ನಲ್ಲಿ (ICC World test championship final 2023 – WTC final 2023) ಆಡುತ್ತಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. WTC ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಗೆ ಸಂದರ್ಶನವೊಂದನ್ನು ನೀಡಿದ್ದಾರೆ. ವಿಶೇಷ ಏನೆಂದರೆ ಈ ಸಂದರ್ಶನದಲ್ಲಿ ದ್ರಾವಿಡ್ ಕನ್ನಡದಲ್ಲೇ ಮಾತಾಡಿದ್ದಾರೆ. ಆ ಸಂದರ್ಶನದ ತುಣಕನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ತನ್ನ ಟ್ವಿಟರ್’ನಲ್ಲಿ ಪ್ರಕಟಿಸಿದೆ.


ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸಂದರ್ಶನದಲ್ಲಿ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಮತ್ತು ಆಸ್ಟ್ರೇಲಿಯಾದ ಸ್ಟಾರ್ ಆಫ್’ಸ್ಪಿನ್ನರ್ ನೇಥನ್ ಲಯಾನ್ ಬೌಲಿಂಗ್ ಬಗ್ಗೆ ಮಾತನಾಡಿದ್ದಾರೆ. ಇಬ್ಬರ ಬೌಲಿಂಗ್’ನಲ್ಲಿರುವ ಸಾಮ್ಯತೆಗಳೇನೇನು, ವ್ಯತ್ಯಾಸವೇನೆಂಬುದರ ಬಗ್ಗೆ ಮಾತಾಡಿದ್ದಾರೆ.

“ಅಶ್ವಿನ್ ಮತ್ತು ನೇಥನ್ ಲಯಾನ್ ಇಬ್ಬರೂ ಗ್ರೇಟ್ ಸ್ಪಿನ್ನರ್ಸ್, ಇಬ್ಬರ ಲೆಂಗ್ತ್ ಕನ್ಸಿಸ್ಟೆನ್ಸ್ ಚೆನ್ನಾಗಿದೆ.ನಮ್ಮ ಗ್ರೇಟ್ ಪ್ರಸನ್ನ ಯಾವಾಗ್ಲೂ ಹೇಳ್ತಾ ಇದ್ರು, ಲೆಂಗ್ತ್ ಕಡ್ಡಾಯ,ಲೈನ್ ಆಯ್ಕೆ ಅಷ್ಟೇ ಅಂತ. ಇಬ್ಬರೂ ತಮ್ಮ ಬೌಲಿಂಗ್ ಮೇಲೆ ಅದ್ಭುತ ನಿಯಂತ್ರಣ ಹೊಂದಿದ್ದಾರೆ” ಎಂದು ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಕನ್ನಡದಲ್ಲೇ ಹೇಳಿದ್ದಾರೆ.
50 ವರ್ಷದ ರಾಹುಲ್ ದ್ರಾವಿಡ್ ಹುಟ್ಟಿದ್ದು ಮಧ್ಯಪ್ರದೇಶದ ಇಂದೋರ್’ನಲ್ಲಿ. ಆದ್ರೆ ಆಡಿ ಬೆಳೆದದ್ದು ಬೆಂಗಳೂರಿನಲ್ಲಿ. ಹೀಗಾಗಿ ರಾಹುಲ್ ದ್ರಾವಿಡ್ ಬೆಂಗಳೂರು ಹುಡುಗ ಎಂದೇ ಫೇಮಸ್.

ಇದನ್ನೂ ಓದಿ : Rashid Khan : ಐಪಿಎಲ್ ಮುಗಿದ ಬೆನ್ನಲ್ಲೇ ಅಡುಗೆ ಭಟ್ಟನಾದ ಆಫ್ಘನ್ ಸ್ಪಿನ್ ಮಾಂತ್ರಿಕ ರಶೀನ್ ಖಾನ್

ಇದನ್ನೂ ಓದಿ : KL Rahul Excusive : ಮುಂದಿನ ವಾರದಿಂದ ಬೆಂಗಳೂರಿನಲ್ಲಿ ಟ್ರೈನಿಂಗ್ ಶುರು ಮಾಡಲಿದ್ದಾರೆ ಕೆಎಲ್ ರಾಹುಲ್

Team India head coach Rahul Dravid talk about Ravichandran Ashwin Spin secret ICC World test championship final 2023 WTC final 2023

Comments are closed.