ಮಂಗಳವಾರ, ಏಪ್ರಿಲ್ 29, 2025
HomeCinemaಪಠಾಣ್ ಸಿನಿಮಾ ವಿವಾದ :"ಸಿನಿಮಾಗಳ ಬಗ್ಗೆ ಅನಗತ್ಯ ಹೇಳಿಕೆ ನೀಡಬೇಡಿ" ಬಿಜೆಪಿ ಮುಖಂಡರಿಗೆ ಮೋದಿ ಸಂದೇಶ

ಪಠಾಣ್ ಸಿನಿಮಾ ವಿವಾದ :”ಸಿನಿಮಾಗಳ ಬಗ್ಗೆ ಅನಗತ್ಯ ಹೇಳಿಕೆ ನೀಡಬೇಡಿ” ಬಿಜೆಪಿ ಮುಖಂಡರಿಗೆ ಮೋದಿ ಸಂದೇಶ

- Advertisement -

ನಟ ಶಾರುಖ್‌ ಖಾನ್‌ ಅಭಿನಯದ ಬಹು ನಿರೀಕ್ಷಿತ “ಪಠಾಣ್‌” ಸಿನಿಮಾದ ಬಿಡುಗಡೆಗೆ ದಿನಗಣನೇ ಶುರುವಾಗಿದೆ. ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾದ ದಿನದಿಂದ ಸಾಕಷ್ಟು ವಿವಾದ (Pathan movie controversy) ಹುಟ್ಟಿಕೊಂಡಿತ್ತು. ಹಾಗಾಗಿ ಈ ಸಿನಿಮಾ ಬಿಡುಗಡೆಗೆ ಸಾಕಷ್ಟು ಅಡತಡೆಗಳು ಎದುರಾಗಿದೆ. ಸದ್ಯ ಸಿನಿಮಾಗಳ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡಿಬೇಡಿ ಎಂದು ಬಿಜೆಪಿ ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ. ನವದೆಹಲಿಯಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಮೋದಿ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಬಿಜೆಪಿ ಮುಖಂಡರು ಸಿನಿಮಾಗಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಮಧ್ಯಪ್ರದೇಶದ ಗೃಹಮಂತ್ರಿ ನರೋತ್ತಮ್ ಮಿಶ್ರಾ ‘ಪಠಾಣ್’ ಸಿನಿಮಾ ಬಗ್ಗೆ ಕಾಮೆಂಟ್ ಮಾಡಿದ್ದರು. ‘ಪಠಾಣ್’ ಸಿನಿಮಾದ “ಭೇಷರಮ್ ರಂಗ್..” ಹಾಡಿನಲ್ಲಿ ದೀಪಿಕಾ ಪಡುಕೋಣೆ ಬಿಕಿನಿ ಬಗ್ಗೆ ವಿವಾದವನ್ನು ಸೃಷ್ಟಿಸಿದ್ದರು. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸಿನಿಮಾಗಳ ವಿಚಾರವಾಗಿ ಅನಗತ್ಯ ಹೇಳಿಕೆಗಳನ್ನು ನೀಡಿದಂತೆ ಖಡಕ್ ಸಂದೇಶವನ್ನು ರವಾನೆ ಮಾಡಿದ್ದಾರೆ.

ಪ್ರಧಾನಿ ಯಾರ ಹೆಸರನ್ನೂ ತೆಗೆದುಕೊಂಡಿಲ್ಲ. ಆದರೆ, ಅವರ ಪ್ರತಿಯೊಂದು ಪದ ಹಾಗೂ ವಾಕ್ಯ ನಮ್ಮೆಲ್ಲರಿಗೂ ತುಂಬಾನೇ ಮುಖ್ಯ. ಅವರ ಮಾತುಗಳಿಂದ ಪ್ರತಿಯೊಬ್ಬರೂ ಪ್ರೇರಿತರಾಗಿದ್ದೇವೆ. ನಮ್ಮ ವರ್ತನೆಗಳು ಅವರ ಎನರ್ಜಿ ಹಾಗೂ ಮಾರ್ಗದರ್ಶನದಿಂದ ತುಂಬಿದ್ದು, ಇದು ಮುಂದಿನ ದಿನಗಳಲ್ಲೂ ಮುಂದುವರೆಯುತ್ತೆ.” ಎಂದು ಮಧ್ಯಪ್ರದೇಶದ ಗೃಹಮಂತ್ರಿ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ನರೋತ್ತಮ್ ಮಿಶ್ರಾ, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸರಕಾರದ ಪ್ರಮುಖ ಸಚಿವರಲ್ಲಿ ಒಬ್ಬರು. ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಮಿಶ್ರಾ ಕೆಲವೊಮ್ಮೆ ಸುದ್ದಿಯಲ್ಲಿ ಇರುತ್ತಾರೆ.

ಇದನ್ನೂ ಓದಿ : KLRahul – Athiya Shetty Marriage : ದಕ್ಷಿಣ ಭಾರತ ಸಂಪ್ರದಾಯದಲ್ಲಿ ನಡೆಯಲಿದೆ ರಾಹುಲ್-ಆತಿಯಾ ಶೆಟ್ಟಿ ಮದುವೆ

ಇದನ್ನೂ ಓದಿ : ಮರಳಿ ಮನಸ್ಸಾಗಿದೆ ಮುಕ್ತಾಯ : ಮತ್ತೆ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟ ನಟ ಚಂದನ್

ಇದನ್ನೂ ಓದಿ : The Kashmir Files Movie : ಮತ್ತೆ ತೆರೆಗೆ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

ಅದು ಸಿನಿಮಾ ಆಗಿರಲಿ ಅಥವಾ ರಾಜಕೀಯ ಮುಖಂಡರ ಬಗ್ಗೆ ಆಗಿರಲಿ ಖಡಕ್ ಕಮೆಂಟ್‌ಗಳನ್ನು ಪಾಸ್ ಮಾಡುತ್ತಾರೆ. ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಸಿನಿಮಾದ “ಬೇಷರಂ ಸಾಂಗ್..” ರಿಲೀಸ್ ಆದಾಗ ಮೊದಲು ಕಾಮೆಂಟ್ ಮಾಡಿದ್ದು ನರೋತ್ತಮ್ ಮಿಶ್ರಾ. ಈ ಹಾಡು ಕೊಳಕು ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಅಲ್ಲದೆ ಸಿನಿಮಾದ ಶೀರ್ಷಿಕೆ ಕೂಡ “ಆಕ್ಷೇಪಾರ್ಹ” ಎಂದು ಮಧ್ಯಪ್ರದೇಶದ ಗೃಹ ಮಂತ್ರಿ ನರೋತ್ತಮ್ ಮಿಶ್ರಾ ಆರೋಪಿಸಿದ್ದರು.

Pathan Movie Controversy: “Don’t Make Unnecessary Statements About Movies” Modi’s Message To BJP Leaders

RELATED ARTICLES

Most Popular