Dharma dangal in kadri: ಕರಾವಳಿಯಲ್ಲಿ ಮುಂದುವರಿದ ಧರ್ಮ ದಂಗಲ್:‌ ಕದ್ರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ

ಮಂಗಳೂರು: (Dharma dangal in kadri) ಕರಾವಳಿಯಲ್ಲಿ ಕಳೆದ ವರ್ಷ ಪ್ರಾರಂಭವಾದ ಧರ್ಮ ದಂಗಲ್‌ ಈ ವರ್ಷವೂ ಮುಂದುವರೆದಿದೆ. ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹೇರಲಾಗಿದ್ದು, ಕದ್ರಿ ಮಂಜುನಾಥನ ದೇವಾಲಯದಲ್ಲೂ ಕೂಡ ಮುಸ್ಲಿಂ ವ್ಯಾಪಾರ ನಿಷೇಧದ ಬ್ಯಾನರ್‌ ಅಳವಡಿಸಲಾಗಿದೆ.

ಕಳೆದ ವರ್ಷ ಕರಾವಳಿಯಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಲಾಗಿತ್ತು. ಈ ವ್ಯಾಪಾರದ ಧರ್ಮದಂಗಲ್‌ ಈ ವರ್ಷವೂ ಮುಂದುವರೆದಿದ್ದು, ಇದೀಗ ಕದ್ರಿಯಲ್ಲೂ ಬ್ಯಾನರ್‌ ಅಳವಡಿಸಿ ಅನ್ಯಧರ್ಮಿಯರಿಗೆ ವ್ಯಾಪಾರ ನಿಷೇಧಿಸಲಾಗಿದೆ. ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಪ್ರಸಿದ್ದ ಕ್ಷೇತ್ರಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಿಷೇಧಿಸಿ ಹಿಂದೂ ಕಾರ್ಯಕರ್ತರು ಬ್ಯಾನರ್‌ ಅಳವಡಿಸಿದ್ದರು. ಅಂದು ಹಿಜಾಬ್‌ ವಿವಾದದ ಮೂಲಕ ಪ್ರಾರಂಭವಾದ ಧರ್ಮದಂಗಲ್‌ ಇಂದು ದೇವಸ್ಥಾನದ ಜಾತ್ರೆಗಳಲ್ಲಿ ನಡೆಯುವ ವ್ಯಾಪಾರಕ್ಕೂ ತಟ್ಟಿದೆ.

ಈಗಾಗಲೇ ಕದ್ರಿಯಲ್ಲಿ ಜಾತ್ರೆಯ ವಾತಾವರಣ ಮನೆಮಾಡಿದ್ದು, ನೂರಾರು ಸ್ಟಾಲ್‌ ಗಳು ನಿರ್ಮಾಣವಾಗಿದೆ. ಇದರ ಮಧ್ಯೆ ಹಿಂದೂ ಸಂಘಟನೆಗಳು ಬ್ಯಾನರ್‌ ಅಳವಡಿಸಿದ್ದು, ” ಕದ್ರಿ ಮಂಜುನಾಥನ ಜಾತ್ರೆಯಲ್ಲಿ ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ. ಕುಕ್ಕರ್‌ ಬಾಂಬ್‌ ಆರೋಪಿ ಮೊದಲು ಟಾರ್ಗೆಟ್‌ ಮಾಡಿದ್ದು ಕದ್ರಿ ದೇವಸ್ಥಾನವನ್ನು, ಅಂತಹ ಮನಸ್ಥಿತಿ ಉಳ್ಳವರಿಗೆ ಮತ್ತು ವಿಗ್ರಹಾರಾಧನೆಯನ್ನು ಹರಮ್‌ ಎಂದು ನಂಬಿರುವ ಯಾರಿಗೂ ಇಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ” ಎಂದು ಬರೆದಿದ್ದು, ಕೆಳಗಡೆ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶಿವಶಕ್ತಿ ಶಾಖೆ ಕದ್ರಿ ಎಂದು ಬರೆಯಲಾಗಿದೆ.

ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಬಾಂಬ್‌ ಸ್ಪೋಟದ ಆರೋಪಿಗಳು ಕದ್ರಿ ಮಂಜುನಾಥ ದೇವಸ್ಥಾನ ಸೇರಿದಂತೆ ಕೆಲವು ದೇವಸ್ಥಾನಗಳಲ್ಲಿ ಸ್ಪೋಟ ನಡೆಸಲು ಮುಂದಾಗಿದ್ದರು. ಅಂತ ಮನಸ್ಥಿತಿಯುಳ್ಳವರಿಗೆ ಕದ್ರಿ ದೇವಾಲಯದ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಅನುಮತಿ ನೀಡಬಾರದು ಎಂದು ಹಿಂದೂ ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುತ್ತಿವೆ.

ಇದನ್ನೂ ಓದಿ : Police Arrests Roosters : ಕೋಳಿ ಹುಂಜಗಳನ್ನು ಅರೆಸ್ಟ್ ಮಾಡಿದ ಪೊಲೀಸರು

ಇದನ್ನೂ ಓದಿ : first covid Patient dies : ಕೋವಿಡ್ ಸೋಂಕಿಗೆ ಕರ್ನಾಟಕದಲ್ಲಿ ಈ ವರ್ಷದ ಮೊದಲ ಬಲಿ

ಇದನ್ನೂ ಓದಿ : ಕೋಟ : ಗೋವಾ – ಪುತ್ತೂರು ಬಸ್ಸಿನಲ್ಲಿ ಮಹಿಳೆಯ 20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Dharma dangal in Kadri: Dharma dangal continues on the coast: Boycott of Muslim traders in Kadri fair

Comments are closed.