ಕನಸಿನ ಕಂದನಿಗೆ ಪವನ್ ಒಡೆಯರ್ ಸಾಂಗ್ ಮೂಲಕ ವಿಶೇಷ ವಿಚಾರವನ್ನ ಅದ್ಧೂರಿಯಾಗಿ ಅನೌನ್ಸ್ ಮಾಡ್ತಿದ್ದಾರೆ.

ಮುದ್ದುದಾದ ಮಗುವಿನ ನಿರೀಕ್ಷೆಯಲ್ಲಿರೋ ತಾರಾದಂಪತಿ ಬದುಕಿನ ಈ ಅವಿಸ್ಮರಣೀಯ ಘಳಿಗಾಗಿ ವಿಶೇಷ ಹಾಡೊಂದನ್ನ ಮಾಡಿದ್ದಾರೆ.

ನಿರ್ದೇಶಕ ಪವನ್ ಒಡೆಯರ್ ಅಪೇಕ್ಷಾ ದಂಪತಿ ವಿಶಿಷ್ಟವಾಗಿ ಅಭಿಮಾನಿಗಳಿಗೆ ಗುಡನ್ ನ್ಯೂಸ್ ನೀಡುತ್ತಿದ್ದಾರೆ.

ಪವನ್ ಒಡೆಯರ್ ಖುದ್ದು ಬರೆದು, ಸಂಯೋಜಿಸಿ ಹಾಡಿರೋ ಈ ಹಾಡಿಗೆ ಪ್ರವೀಣ್ ಆಲಿವರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ತುಂಬು ಗರ್ಭಿಣಿಯಾಗಿರುವ ಅಪೇಕ್ಷಾ ಪವನ್ ಒಡೆಯರ್, ಚೊಚ್ಚಲ ಕನಸಿನ ಕೂಸಿನ ನಿರೀಕ್ಷೆಯಲ್ಲಿ ಪತಿಯೊಟ್ಟಿಗೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಛಾಯಾಗ್ರಾಹಕ ಪವನ್ ಶರ್ಮಾ ಅದ್ಧೂರಿಯಾಗಿ ಚಿತ್ರಿಸಿರೋ ಈ ವಿಡಿಯೋ ಹಾಡನ್ನ ಅಕ್ಟೋಬರ್ 11ರ ಸಂಜೆ 5 ಗಂಟೆಗೆ ಪವರ್ ಒಡೆಯರ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗುತ್ತೆ.





