ಮೈಸೂರು : pavitra lokesh : ಖ್ಯಾತ ನಟ ಮೈಸೂರು ಲೋಕೇಶ್ರ ಪುತ್ರಿ ಹಾಗೂ ನಟಿ ಪವಿತ್ರಾ ಲೋಕೇಶ್ ತಮ್ಮ ಮೂರನೇ ಮದುವೆಯ ವಿಚಾರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸಧ್ಯ ಭಾರೀ ಚರ್ಚೆಯಲ್ಲಿದ್ದಾರೆ. ತಮ್ಮ ಎರಡನೇ ಪತಿ ಸುಚೇಂದ್ರ ಕುಮಾರ್ರಿಂದ ದೂರಾಗಿರುವ ನಟಿ ಪವಿತ್ರಾ ಲೋಕೇಶ್ ಕೋಟ್ಯಾಧಿಪತಿ ನರೇಶ್ರನ್ನು ವರಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಈ ಎಲ್ಲದರ ನಡುವೆ ಇದೀಗ ತಮ್ಮ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಗಳ ವಿರುದ್ಧ ನಟಿ ಪವಿತ್ರಾ ಲೋಕೇಶ್ ಕಾನೂನು ಸಮರಕ್ಕಿಳಿದಿದ್ದಾರೆ.
ತಮ್ಮ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆಗಳನ್ನು ತೆರೆದು ಅಶ್ಲೀಲ ಸಂದೇಶಗಳನ್ನು ಕಳಿಸಲಾಗುತ್ತಿದೆ ಎಂದು ಆರೋಪಿಸಿ ನಟಿ ಪವಿತ್ರಾ ಲೋಕೇಶ್ ಮೈಸೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಈ ರೀತಿಯ ಕೃತ್ಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ತೇಜೋವಧೆ ನಡೆಯುತ್ತಿದೆ. ಹೀಗಾಗಿ ಇಂತವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಟಿ ಪವಿತ್ರಾ ಲೋಕೇಶ್ ದೂರನ್ನು ನೀಡಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಿಸಿರುವ ಮೈಸೂರಿನ ಸೈಬರ್ ಕ್ರೈಂ ಠಾಣಾ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕನ್ನಡ ಹಾಗೂ ತೆಲುಗು ಚಿತ್ರರಂಗಳಲ್ಲಿ ಪೋಷಕ ನಟಿ ಪಾತ್ರದಲ್ಲಿ ಸೈ ಎನಿಸಿರುವ ನಟಿ ಪವಿತ್ರಾ ಲೋಕೇಶ್ ಸುಚೇಂದ್ರ ಕುಮಾರ್ ಜೊತೆಯಲ್ಲಿ 2ನೇ ವಿವಾಹವಾಗಿದ್ದರು. ಇದು ಇಬ್ಬರಿಗೂ ಎರಡನೇ ವಿವಾಹವಾಗಿತ್ತು. ಇಬ್ಬರ ದಾಂಪತ್ಯದ ಫಲವಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ನಟಿ ಪವಿತ್ರಾ ಲೋಕೇಶ್ ಪತಿಯಿಂದ ದೂರಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಬಂದಿರುವ ಸುದ್ದಿಯ ಪ್ರಕಾರ ನಟಿ ಪವಿತ್ರಾ ಲೋಕೇಶ್ ಮಹೇಶ್ ಬಾಬು ಸಹೋದರ 62 ವರ್ಷದ ನರೇಶ್ರನ್ನು ವಿವಾಹವಾಗಿದ್ದಾರೆ ಎನ್ನಲಾಗಿತ್ತು. ಕೋಟ್ಯಾಧಿಪತಿಯಾಗಿರುವ ನರೇಶ್ ಜೊತೆ ಪವಿತ್ರ ಲೋಕೇಶ್ ವಿವಾಹವಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾಗಳಲ್ಲಿ ಪವಿತ್ರ ಲೋಕೇಶ್ ವಿರುದ್ಧ ಭಾರೀ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ವಿಚಾರವಾಗಿ ನಟಿ ಪವಿತ್ರಾ ಲೋಕೇಶ್ ಈವರೆಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.
ಇದನ್ನು ಓದಿ : Rohit Sharma’s daughter : ಕ್ಯೂಟ್ ಕ್ಯೂಟ್ ಆಗಿ ತಂದೆಯ ಹೆಲ್ತ್ ರಿಪೋರ್ಟ್ ಕೊಟ್ಟ ರೋಹಿತ್ ಶರ್ಮಾ ಮಗಳು
ಇದನ್ನೂ ಓದಿ : India Vs New Zealand : ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಟೂರ್: ಕಿವೀಸ್ ವಿರುದ್ಧ ಟಿ20, ಏಕದಿನ ಸರಣಿ ಆಡಲಿದೆ ಟೀಮ್ ಇಂಡಿಯಾ
pavitra lokesh files complaint in mysore cyber crime police station against derogatory post about her on social media