Patna High Court : ಸಂತ್ರಸ್ತೆಗೆ ಗಾಯಗಳಾಗಿಲ್ಲ ಎಂದ ಮಾತ್ರಕ್ಕೆ ಅತ್ಯಾಚಾರಕ್ಕೆ ಒಪ್ಪಿಗೆಯಿತ್ತು ಎಂಬರ್ಥವಲ್ಲ: ಹೈಕೋರ್ಟ್​

ಪಾಟ್ನಾ : Patna High Court : ಅತ್ಯಾಚಾರದ ವೇಳೆ ಸಂತ್ರಸ್ತೆಯು ವಿರೋಧವೊಡ್ಡುವುದು ಸರ್ವೇ ಸಾಮಾನ್ಯ. ಆದರೆ ಒಂದು ವೇಳೆ ಅತ್ಯಾಚಾರಕ್ಕೊಳಗಾದ ಮಹಿಳೆಯ ದೇಹದಲ್ಲಿ ಯಾವುದೇ ರೀತಿಯ ಗಾಯಗಳು ಕಂಡುಬರೆದೇ ಇದ್ದಲ್ಲಿ ಅಥವಾ ಅತ್ಯಾಚಾರದ ಸಂದರ್ಭದಲ್ಲಿ ಮಹಿಳೆಯು ಯಾವುದೇ ರೀತಿಯ ವಿರೋಧವನ್ನು ಒಡ್ಡದೇ ಇದ್ದರೂ ಸಹ ಅದನ್ನು ಅತ್ಯಾಚಾರವೆಂದೇ ಪರಿಗಣಿಸಲಾಗುತ್ತದೆ. ಇದನ್ನು ಮಹಿಳೆಯ ಒಪ್ಪಿಗೆ ಎಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಪಾಟ್ನಾದ ಹೈಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ.


ಕೆಳ ಹಂತದ ನ್ಯಾಯಾಲಯವು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಪಾಟ್ನಾ ಹೈಕೋರ್ಟ್​ ಸಂತ್ರಸ್ತೆಯು ಅತ್ಯಾಚಾರವನ್ನು ವಿರೋಧಿಸಿದೇ ಇದ್ದರೆ ಅದನ್ನು ಒಪ್ಪಿಗೆಯ ಸಂಭೋಗ ಎಂದು ಪರಿಗಣಿಸಿ ಆರೋಪಿಗಳನ್ನು ಶಿಕ್ಷೆಯಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ. ಸಂತ್ರಸ್ತೆಯು ಕೋರ್ಟ್​ಗೆ ನೀಡಿದ ಹೇಳಿಕೆಯು ನಂಬಲು ಅರ್ಹವಾಗಿದ್ದರೆ ಆರೋಪಿಗಳಿಗೆ ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಕೋರ್ಟ್​ ಹೇಳಿದೆ.


2015ರಲ್ಲಿ ಮಹಿಳೆಯನ್ನು ಕರೆದೊಯ್ದು ನೆಲಕ್ಕೆ ಕಟ್ಟಿ ಹಾಕಿ ಅತ್ಯಾಚಾರವೆಸಗಿದ ಪ್ರಕರಣದ ಸಂಬಂಧ ಪಾಟ್ನಾ ಹೈಕೋರ್ಟ್​ ಈ ಮಹತ್ವದ ತೀರ್ಪನ್ನು ನೀಡಿದೆ. ಅತ್ಯಾಚಾರದಿಂದ ಬದುಕುಳಿದ ಸಂತ್ರಸ್ತೆಯ ಹೇಳಿಕೆಗಳು ವಿಶ್ವಾಸಾರ್ಹ ಎಂದು ಕಂಡುಬಂದರೆ ಇಬ್ಬರು ವಯಸ್ಕರ ನಡುವೆ ನಡೆದ ಲೈಂಗಿಕ ದೌರ್ಜನ್ಯವನ್ನು ಸಮ್ಮತಿಯ ಲೈಂಗಿಕ ಕ್ರಿಯೆ ಎಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಕೋರ್ಟ್ ಹೇಳಿದೆ.


ಭಾರತೀಯ ದಂಡ ಸಂಹಿತೆಯ 375ನೇ ವಿಧಿಯನ್ನು ಪುನರುಚ್ಛರಿಸಿದ ನ್ಯಾಯಪೀಠವು ಒಪ್ಪಿಗೆಯ ಲೈಂಗಿಕ ಕ್ರಿಯೆಯ ಬಗ್ಗೆ ವಿವರಣೆಯನ್ನು ನೀಡಿದೆ. ಪ್ರಕರಣದ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಎಎಂ ಬದರ್​, ಐಪಿಸಿ ಸೆಕ್ಷನ್​ 375ರ ಅಡಿಯಲ್ಲಿ ಮಹಿಳೆಯು ಲೈಂಗಿಕ ಕ್ರಿಯೆಗೆ ವಿರೋಧಿಸಿಲ್ಲ ಎಂಬ ಒಂದೇ ಕಾರಣಕ್ಕೆ ಅದನ್ನು ಒಪ್ಪಿಗೆಯ ಲೈಂಗಿಕ ಕ್ರಿಯೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ : India Vs New Zealand : ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಟೂರ್: ಕಿವೀಸ್ ವಿರುದ್ಧ ಟಿ20, ಏಕದಿನ ಸರಣಿ ಆಡಲಿದೆ ಟೀಮ್ ಇಂಡಿಯಾ

ಇದನ್ನೂ ಓದಿ : Rohit Sharma’s daughter : ಕ್ಯೂಟ್ ಕ್ಯೂಟ್ ಆಗಿ ತಂದೆಯ ಹೆಲ್ತ್ ರಿಪೋರ್ಟ್ ಕೊಟ್ಟ ರೋಹಿತ್ ಶರ್ಮಾ ಮಗಳು

‘Not resisting rape, no violence marks doesn’t make the act consensual’: Patna High Court

Comments are closed.