ಮುಂಬೈ : ಬಾಲಿವುಡ್ ನಟಿ ಪಾಯಲ್ ಘೋಷ್ ಅವರ ಮೇಲೆ ಮುಸುಕುಧಾರಿಗಳು ಆಸಿಡ್ ದಾಳಿ ನಡೆಸಲು ಪ್ರಯತ್ನಿಸಿದ್ದಾರೆ. ಔಷಧಿ ತರಲು ರಾತ್ರಿ 10 ಗಂಟೆ ವೇಳೆಗೆ ಮನೆಯಿಂದ ಹೊರಗೆ ಬಂದ ಪಾಯಲ್ ಘೋಷ್ ಔಷಧ ಖರೀದಿಸಿ ಕಾರಿನ ಸಮೀಪ ಹೋಗುತ್ತಿದ್ದಾಗ ಮುಸುಕುಧಾರಿಗಳಾಗಿ ಬಂದಿದ್ದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ಆಸಿಡ್ ದಾಳಿ ಮಾಡಲು ಮುಂದಾಗಿದ್ದಾರೆ.
ರಾಡ್ ನಿಂದ ಹಲ್ಲೆ ಮಾಡಿದ್ದರಿಂದ ಪಾಯಲ್ ಘೋಷ್ ಅವರ ಕೈಗೆ ಪೆಟ್ಟುಬಿದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿರುವ ಪಾಯಲ್ ಘೋಷ್, ಔಷಧ ತರಲು ಹೋದಾಗ ನನ್ನ ಮೇಲೆ ದಾಳಿಗೆ ಯತ್ನಿಸಿದ್ದು, ದಾಳಿ ಮಾಡಿದವರ ಕೈಯಲ್ಲಿ ಬಾಟಲ್ ಇತ್ತು. ಅದು ಆಸಿಡ್ ಇರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Chiru Sarja : ಸೈಮಾ ಅವಾರ್ಡ್ಸ್ ಫಂಕ್ಷನ್ ನಲ್ಲಿ ಚಿರು : ಸ್ನೇಹಕ್ಕೆ ಪನ್ನಗಾಭರಣ ಕೊಟ್ರು ವಿಶೇಷ ಬೆಲೆ
ದಾಳಿಯಿಂದ ಗಾಬರಿಗೊಂಡು ಜೋರಾಗಿ ಕೂಗಾಡಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಅವರು ಹೇಳಿದ್ದಾರೆ. ಪಶ್ಚಿಮಬಂಗಾಳದ ಪಾಯಲ್ ಘೋಷ್ ಮುಂಬೈನಲ್ಲಿ ನೆಲೆಸಿದ್ದಾರೆ. ಕನ್ನಡದ ‘ವರ್ಷಧಾರೆ’, ತೆಲುಗು, ಹಿಂದಿ ಸಿನಿಮಾಗಳಲ್ಲಿ ಮತ್ತು ಹಿಂದಿ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
(Acid attack on celebrity actress:Payal Ghosh)