Apartment Fire 2 Death : ಆಶ್ರಿತ್‌ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ದುರಂತ : ತಾಯಿ, ಮಗಳು ಸಜೀವ ದಹನ

ಬೆಂಗಳೂರು : ನಗರದ ದೇವರ ಚಿಕ್ಕನಹಳ್ಳಿಯಲ್ಲಿರುವ ಆಶ್ರಿತ್‌ ಅಪಾರ್ಟ್‌ ಮೆಂಟ್‌ ನಲ್ಲಿ ನಡೆದಿರುವ ಅಗ್ನಿ ಅವಘಡದಲ್ಲಿ ತಾಯಿ, ಮಗಳು ಸಜೀವವಾಗಿ ದಹನವಾಗಿದ್ದಾರೆ. ಅಲ್ಲದೇ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಭಾಗ್ಯರೇಖಾ ಹಾಗೂ ಲಕ್ಷ್ಮೀ ದೇವಿ ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಇಬ್ಬರೂ ಕೂಡ ತಾಯಿ, ಮಗಳು ಎಂದು ತಿಳಿದು ಬಂದಿದೆ. ಇನ್ನು ಭಾಗ್ಯರೇಖಾ ಅವರ ಪತಿ ಭೀಮಸೇನ್‌ ಕೂಡ ಗಾಯಗೊಂಡಿದ್ದಾರೆ. ಇನ್ನು ರಕ್ಷಣೆಗೆ ಬಂದಿದ್ದ ವ್ಯಕ್ತಿಗೂ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ದೇವರ ಚಿಕ್ಕನಹಳ್ಳಿಯಲ್ಲಿ ಆಶ್ರಿತ್‌ ಅಪಾರ್ಟ್‌ಮೆಂಟ್‌ನ ಮೂರನೇ ಫ್ಲ್ಯಾಟ್‌ ಸಂಖ್ಯೆ 211ರಲ್ಲಿ ಇಂದು ಸಂಜೆ 4.30 ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಮನೆಯಲ್ಲಿದ್ದ ತಾಯಿ ಹಾಗೂ ಮಗಳು ಮನೆಯಿಂದ ಹೊರ ಬರಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಅಪಾರ್ಟ್‌ಮೆಂಟ್‌ನ ಸುಮಾರು 10 ಕ್ಕೂ ಅಧಿಕ ಮನೆಗಳಿಗೆ ವ್ಯಾಪಿಸಿದ್ದು, ನಾಲ್ಕು ಮನೆಗಳು ಸಂಪೂರ್ಣ ಸುಟ್ಟು ಹೋಗಿದೆ.

ಅಗ್ನಿಶಾಮಕ ಸಿಬ್ಬಂದಿಗಳು ಸುಮಾರು ಒಂದೂವರೆ ಗಂಟೆಗೂ ಅಧಿಕ ಸಮಯದಿಂದಲೂ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಬೆಂಕಿ ಇನ್ನೂ ತಹಬದಿಗೆ ಬಂದಿಲ್ಲ. ಸ್ಥಳದಲ್ಲಿ ಪೊಲೀಸರು ಹಾಗೂ 16 ಕ್ಕೂ ಅಧಿಕ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಚಾರಣೆಯಲ್ಲಿ ಪಾಲ್ಗೊಂಡಿದ್ದಾರೆ. ಮೇಲ್ನೋಟಕ್ಕೆ ಸಿಲಿಂಡರ್‌ ಬ್ಲಾಸ್ಟ್‌ನಿಂದ ಅಗ್ನಿಶಾಮಕ ಇಲಾಖೆಯ ಡಿಜಿಪಿ ಅಮರ್‌ ಕುಮಾರ್‌ ಪಾಂಡೆ ತಿಳಿಸಿದ್ದಾರೆ.

ಇದನ್ನೂ ಓದಿ : ಸಿಲಿಂಡರ್‌ ಸ್ಪೋಟ : ಬೆಂಗಳೂರಲ್ಲಿ ಹೊತ್ತಿ ಉರಿದ ಅಪಾರ್ಟ್‌ಮೆಂಟ್‌

ಅಪಾರ್ಟ್‌ಮೆಂಟ್‌ನಲ್ಲಿ ಯಾವ ಕಾರಣಕ್ಕೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿಲ್ಲ. ಬೆಂಕಿ ಇದೀಗ ತಹಬದಿಗೆ ಬಂದಿದೆ. ಅಪಾರ್ಟ್‌ಮೆಂಟ್‌ನಲ್ಲಿ ಹೊಗೆ ತುಂಬಿಕೊಂಡಿದೆ. ಸೆಕ್ಯೂರಿಟಿ ತಿಳಿಸಿದ ಪ್ರಕಾರ ಇಬ್ಬರು ವಾಸವಾಗಿದ್ದರು ಎಂದು ತಿಳಿದುಬಂದಿದೆ. ಗ್ಯಾಸ್‌ಲೈನ್‌ ಇರಲಿಲ್ಲ, ಸಿಲಿಂಡರ್‌ ಬಳಕೆ ಮಾಡುತ್ತಿದ್ದರು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಅಪಾರ್ಟ್‌ಮೆಂಟ್‌ ಕಿಟಕಿಗೆ ಗ್ರಿಲ್‌ ಅಳವಡಿಕೆ ಮಾಡಿದ್ದು, ಇದರಿಂದಾಗಿ ಹೊರಬರಲು ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಆತ್ಮ ಬಿಡಿಸುವ ನೆಪದಲ್ಲಿ ಅತ್ಯಾಚಾರ: 16 ಬಾಲಕಿ ಮೇಲೆ ದೌರ್ಜನ್ಯ ನಡೆಸಿದ ಬಾಬಾ

ಇದನ್ನೂ ಓದಿ : ಚೀನಾವನ್ನು ಕಾಡುತ್ತಿದೆ ಮರೆವಿನ ಕಾಯಿಲೆ : 5 ವರ್ಷದಲ್ಲಿ ನಾಪತ್ತೆಯಾಗಿದ್ದಾರೆ 500 ಮಂದಿ !

(Bangalore Devarachikkanahalli Ashrith Apartment fire blast two death )

Comments are closed.