ಲೇಡಿ ಪ್ರಭುದೇವಾ ತರ ಸೊಂಟ, ಮೈಮಾಟ ಬಳುಕಿಸೋ ನೋರಾ ಫತೇಹಿ ಅಂದ್ರೆ ಪಡ್ಡೆಗಳ ಪಾಲಿಗೆ ಹಾಟ್ ಜಿಲೇಬಿ. ಹಾಲಿನಂತ ಮೈಸಿರಿ ಪ್ರದರ್ಶಿಸೋ ಪೋಟೋಗಳ ಮೂಲಕವೇ ಗಮನ ಸೆಳೆಯೋ ನೋರಾ ಫತೇಹಿ (Nora Fatehi )ಈಗ ಹೊಸದೊಂದು ಆಫರ್ ಕೊಟ್ಟು ಪಡ್ಡೆ ಹೈಕಳನ್ನು ಕೆಣಕಿದ್ದಾರೆ. ಮೊದಲೇ ಮಾದಕ ಮೈಮಾಟದ ಚೆಲುವೆ, ಇದರ ಜೊತೆ ಮತ್ತೇರಿಸೋ ಆಫರ್ ಬೇರೆ. ಆಹಾ ಅದ್ಯಾರಿಗಿದ್ಯೋ ಅದೃಷ್ಟ ಅಂತಿದ್ದಾರೆ ನೆಟ್ಟಿಗರು.
ಸದ್ಯ ಬಾಲಿವುಡ್ ನಿಂದ ಆರಂಭಿಸಿ ಸ್ಯಾಂಡಲ್ ವುಡ್ ತನಕ ಸದ್ದು ಮಾಡ್ತಿರೋ ಐಟಂ ಸಾಂಗ್ ಡ್ಯಾನ್ಸರ್ ನೋರಾ ಫತೇಹಿ. ಸೌಂದರ್ಯ, ಟ್ಯಾಲೆಂಟ್ ಹಾಗೂ ಡ್ಯಾನ್ಸಿಂಗ್ ಮೂರನ್ನೂ ಸೇರಿಸಿಕೊಂಡೇ ತೆರೆಗೆ ಬರೋ ನೋರಾ ಫತೇಹಿ ಈಗ ಯುವಜನತೆಯ ಹಾಟ್ ಫೆವರಿಟ್. ಗುರುರಾಂಧವಾ ಮ್ಯೂಸಿಕ್ ನಲ್ಲಿ ಸಿದ್ಧವಾದ ಡ್ಯಾನ್ಸ್ ಮೇರಿ ರಾಣಿ ಹಾಡಿಗೆ ನೋರಾ ಕುಣಿದ ಪರಿಗೆ ಬಾಲಿವುಡ್ ಮಂದಿಯೇ ಬೆರಗಾಗಿದ್ದರು. ಇಂತಿಪ್ಪ ನೋರಾ ಮಾಡೆಲ್ ಕೂಡಾ ಹೌದು.
ಇತ್ತೀಚಿಗಷ್ಟೇ ಕರೋನಾದಿಂದ ಬಳಲಿದ್ದ ನೋರಾ ಚೇತರಿಸಿಕೊಂಡು ಟ್ರಿಪ್ ತೆರಳಿದ್ದಾರೆ. ಸದ್ಯ ರಿಲ್ಯಾಕ್ಸ್ ಮೂಡಲ್ಲಿರೋ ನೋರಾ ಫತೇಹಿ ದುಬೈ ಪ್ರವಾಸಕ್ಕೆ ತೆರಳಿದ್ದಾರೆ. ದುಬೈ ಪ್ರವಾಸ ದಲ್ಲಿ ಸ್ವಿಮ್ಮಿಂಗ್ ಫೂಲ್ ಗಳಿಂದ ಮತ್ತೆರಿಸೋ ಪೋಟೋಗಳನ್ನು ಸೋಷಿಯತ ಮೀಡಿಯಾಕ್ಕೆ ಶೇರ್ ಮಾಡಿ ಅಭಿಮಾನಿಗಳಿಗೆ ಸಪ್ರೈಸ್ ನೀಡ್ತಿರೋ ನೋರಾ ಈಗ ಹೊಸ ಆಫರ್ ನೀಡುವ ಮೂಲಕ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ.
ಕಪ್ಪು ಬಿಕನಿಯಲ್ಲಿ ಪೋನ್ ಜೊತೆ ಪೋಸ್ ನೀಡಿದ ನೋರಾ ಫತೇಹಿ, Planning To Next Vacation, Who wants to join ಎನ್ನುವ ಟ್ಯಾಗ್ ಲೈನ್ ನೀಡಿದ್ದಾರೆ. ಆ ಮೂಲಕ ನನ್ನ ಮುಂದಿನ ಪ್ರವಾಸದಲ್ಲಿ ನನ್ನ ಜೊತೆ ಯಾರು ಪ್ರವಾಸಕ್ಕೆ ಬರ್ತೀರಿ ಎಂದು ನೋರಾ ಆಹ್ವಾನ ನೀಡಿದ್ದಾರೆ. ಈ ಪೋಸ್ಟ್ ಲಕ್ಷಾಂತರ ಲೈಕ್ಸ್ ಹರಿದು ಬಂದಿದ್ದು, ನಿನಗಾಗಿ ಪ್ರವಾಸ ಏನು ಜೀವವನ್ನೇ ತ್ಯಾಗ ಮಾಡ್ತಿವಿ ಎಂದೆಲ್ಲ ಅಭಿಮಾನಿಗಳು ಸಖತ್‌ಕಮೆಂಟ್‌ಮಾಡಿದ್ದಾರೆ.
ಆಗಾಗ ಸೋಷಿಯಲ್ ಮೀಡಿಯಾ ದಲ್ಲಿ ತಮ್ಮ ಡ್ಯಾನ್ಸ್ ಝಲಕ್ ಹಂಚಿಕೊಳ್ಳೋ ಮೂಲಕ ಮೋಡಿ ಮಾಡೋ ನೋರಾ ಫತೇಹಿ ಕೆಜಿಎಫ್-2 ಸಿನಿಮಾದಲ್ಲೊಂದು ಐಟಂ ಸಾಂಗ್ ಗೆ ಸೊಂಟ ಬಳುಕಿಸಲಿದ್ದಾರೆ ಎನ್ನೋ ಮಾತುಕೇಳಿಬಂದಿತ್ತಾದರೂ ಈ ವಿಚಾರವನ್ನು ಚಿತ್ರತಂಡ ಕನ್ಪರ್ಮ್ ಮಾಡಿಲ್ಲ. ಒಟ್ಟಿನಲ್ಲಿ ನೋರಾ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕವೇ ಕಿಚ್ಚು ಹಚ್ಚಿರೋದಂತು ಸತ್ಯ.
ಇದನ್ನೂ ಓದಿ : ನಿಧಿ ನೆನಪಿನಲ್ಲೇ ಆದಿ ಪಯಣ : ಅಭಿಮಾನಿಗಳನ್ನು ಸೆಳೆದ ಲವ್ ಮಾಕ್ಟೆಲ್-2 ಟ್ರೇಲರ್
ಇದನ್ನೂ ಓದಿ : ರಿಲೀಸ್ ಗೆ ಸಿದ್ಧವಾಗ್ತಿದೆ ಜೇಮ್ಸ್ ; ಪುನೀತ್ ಪಾತ್ರಕ್ಕೆ ಜೀವ ತುಂಬಿತು ಶಿವಣ್ಣ ವಾಯ್ಸ್
(Planning To Next Vacation, Who wants to join with me Nora Fatehi invitation to Fans)