Hot Scene Shoot: ಸಿನಿಮಾಗಳಲ್ಲಿ ಚುಂಬನ, ಹಾಟ್ ಸೀನ್ ಶೂಟ್ ಮಾಡುವಾಗ ಹೇಗಿರುತ್ತೆ? ಪ್ರಸಿದ್ಧ ಹಸಿಬಿಸಿ ದೃಶ್ಯಗಳ ತಜ್ಞರು ಹೇಳ್ತಾರೆ ಕೇಳಿ

ಬಾಲಿವುಡ್‌ನಲ್ಲಿ ಹಸಿಬಿಸಿ ಚಿತ್ರಗಳನ್ನು ನಿರ್ದೇಶಿಸಲು ಅಂತಲೆ ಓರ್ವ ಪ್ರಸಿದ್ಧ ನಿರ್ದೇಶಕರಿದ್ದಾರೆ. ಅವರೇ ದಾರ್ ಗೈ. ಸದ್ಯ ಹಾಟ್ ಹಾಟ್ ಟಾಪಿಕ್ ಆಗಿರುವ ಗೆಹ್ರಿಯಾನ್ ಚಿತ್ರ (Gehraiyaan) ಪ್ರೇಕ್ಷಕರ ಎದುರು ಬರಲು ದಿನಗಣನೆ ಆರಂಭವಾಗಿದೆ. ಫೆಬ್ರವರಿ 11ನೇ ತಾರೀಖು ಬಹುನಿರೀಕ್ಷಿತ ಗೆಹ್ರಿಯಾನ್ ಚಿತ್ರ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ. ಹಾಟ್ ಟಾಕ್ ಆಗಿರುವ ಸಿನಿಮಾದ ದೃಶ್ಯಗಳ ಸಂಯೋಜನೆ (Deepika Padukone Siddhant Kissing Scene) ಮಾಡಿರುವವರು ಹಸಿಬಿಸಿ ದೃಶ್ಯಗಳ ತಜ್ಞರೆಂದು (Hot Scene Shoot) ಹೆಸರಾಗಿರುವ ಚಿತ್ರದ ನಿರ್ದೇಶಕ ದಾರ್ ಗೈ. ಇಡೀ ತಂಡದಲ್ಲಿ ಈತನಕ ತಾವು ಮಾಡದ ಹೊಸದೇನಾದರು ಪ್ರಯೋಗ ಮಾಡಬೇಕು ಅನ್ನೋ ತುಡಿತ ಇತ್ತು. ಬಹುಶಃ ಇದೇ ನನಗೆ ಪ್ರೇರಣೆ, ಉತ್ಸಾಹ ತುಂಬಿತು ಎಂದು ಹಸಿಬಿಸಿ ದೃಶ್ಯಗಳ ನಿರ್ದೇಶನದಲ್ಲಿ ಎತ್ತಿದ ಕೈ ಆಗಿರುವ ದಾರ್ ಗೈ ವಿವರಿಸಿದ್ದಾರೆ.

ನಾನು ಪ್ರತಿಸಲ ಸೆಟ್ ಗೆ ಬಂದಾಗ ನಿರ್ದೇಶಕ ಶಾಕುನ್, ಓ ದೇವರೆ , ಥ್ಯಾಂಕ್ಯು ದೇವರೆ ನಿಮ್ಮನ್ನು ಕಳುಹಿಸಿದ್ದಕ್ಕೆ.ಅವರಿಬ್ಬರಿಗೆ ಗಟ್ಟಿಯಾಗಿ ಕಿಸ್ ಮಾಡಲು ಹೇಳಿ. ನನಗೆ ಅವರಿಗೆ ಆ ರೀತಿ ಹೇಳಲು ಕಷ್ಟವಾಗುತ್ತೆ ಅಂತ ಹೊರಟು ಬಿಡುತ್ತಿದ್ದರು ಅನ್ನೋದು ಸೆಟ್ ನಲ್ಲಿದ್ದ ಹರಿದಾಡುತ್ತಿದ್ದ ಜೋಕ್.
ಹಾಗೇನೇ, ನಿರ್ದೇಶಕರು ನಾಯಕ-ನಾಯಕಿ ತಬ್ಬಿಕೊಳ್ಳಲು ಅಥವಾ ಕಿಸ್ ಮಾಡುವ ದೃಶ್ಯಕ್ಕೆ ಟೇಕ್ ಹೇಳಲು ಮುಂದಾಗುವ ಹೊತ್ತಿಗೆ, ದೀಪಿಕಾ –ಸಿದ್ದಾಂತ್, ಎಲ್ಲಿ ಹಾಟ್ ಡೈರೆಕ್ಟರ್ ದಾರ್. ಅವರ ಮುಂದೆ ಕೆಲವೊಂದು ದೃಶ್ಯಗಳ ರಿಹರ್ಸಲ್ ಮಾಡಬೇಕು ಅಂತ ದೊಡ್ಡ ದನಿಯಲ್ಲಿ ಹೇಳುತ್ತಿದ್ದರು ಎಂದು ದಾರ್ ನಗುನಗುತ್ತಾ ವಿವರಿಸುತ್ತಾರೆ.

ಇಡೀ ಚಿತ್ರ ರೋಮ್ಯಾಂಟಿಕ್ ದೃಶ್ಯಗಳಿಂದಲೇ ಹೆಸರಾಗಿದೆ. ಅದರಲ್ಲೂ ದೀಪಿಕಾ ಪಡುಕೋಣೆ, ಸಿದ್ದಾಂತ್ ಚತುರ್ವೇಧಿ ಅವರ ನಡುವಿನ ಹಸಿಬಿಸಿ ದೃಶ್ಯಗಳನ್ನು (Deepika Padukone Siddhant Kissing Scene) ತೆಗೆಯುವಾಗ ಆದ ಅನುಭವದ ಬಗ್ಗೆ ಅವರು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

ಸಿನಿಮಾ ಮಾಡುವ ಒಪ್ಪಂದಕ್ಕೆ ಎಲ್ಲರೂ ಬಂದ ಮೇಲೆ, ಮಾನಸಿಕ ಸಿದ್ಧತೆಗಾಗಿ ಕಾರ್ಯಾಗಾರ ಏರ್ಪಡಿಸಿದ್ದು. ಚಿತ್ರದಲ್ಲಿ ಹಾಟ್ ಹಾಟ್ ದೃಶ್ಯಗಳು ಹೆಚ್ಚಾಗಿ ಇರುವುದರಿಂದ ಈ ರೀತಿಯ ಕಾರ್ಯಾಗಾರ ಮಾಡಬೇಕಾಯಿತು. ದೀಪಿಕಾ-ಸಿದ್ದಾಂತ ಅವರಿಗೆ ಬೇರೆಯವರಿಗಿಂತ ಸ್ವಲ್ಪ ಭಿನ್ನವಾಗಿ ಕಾರ್ಯಾಗಾರ ಮಾಡಬೇಕಾಯ್ತು. ಇದರಿಂದಾಗಿ ಯಾರೊಬ್ಬರಿಂದಲೂ ಇಂಥ ದೃಶ್ಯದಲ್ಲಿ ನಟಿಸೋಲ್ಲ ಅನ್ನೋ ಹಿಂಜರಿಕೆ ಕಾಣಲಿಲ್ಲ. ಎಲ್ಲರಲ್ಲೂ ಹೊಸತು ಏನಾದರು ಒಂದು ಮಾಡಬೇಕು ಅನ್ನೋ ತುಡಿತ ಸಮಾನವಾಗಿತ್ತು ಎಂದು ವಿವರಣೆ ನೀಡಿದರು.
ನಟ-ನಟಿಯರಿಗೆ ಸಿನಿಮಾದಲ್ಲಿ ತೊಡಗಿಕೊಳ್ಳುವಾಗಲೇ ತಾವು ಎಂಥ ಪಾತ್ರ ಮಾಡಬೇಕು ಅನ್ನೋ ಮಾಹಿತಿ ಇರುತ್ತದೆ. ಅದಕ್ಕೆ ಸಂಬಂಧಿಸಿದಂತೆ ಒಪ್ಪಂದ ಕೂಡಮಾಡಿಕೊಂಡಿರುವಾಗ, ಹಸಿಬಿಸಿ ದೃಶ್ಯಗಳನ್ನು ನಿರ್ದೇಶನ ಮಾಡಲು ಪ್ರತ್ಯೇಕ ನಿರ್ದೇಶಕರು ಏಕೆ ಬೇಕು ಅನ್ನೋ ಪ್ರಶ್ನೆಗೆ- ದಾರ್ ಹೀಗೆ ಉತ್ತರಿಸುತ್ತಾ ಹೋದರು.

ಸಿನಿಮಾಕ್ಕೆ ಸಾಹಸ ನಿರ್ದೇಶಕರೂ ಬೇಕು ಏಕೆಂದರೆ, ಟೇಕ್ ಬಂದಾಗ ನಾಯಕನಿಗೆ ಹೀಗೆ ನಟಿಸಬೇಕು ಅನ್ನೋದು ಗೊತ್ತಿರುತ್ತದೆ. ಆದರೂ, ದೈಹಿಕವಾಗಿ ಸದೃಢವಾಗಿದ್ದರೂ, ಸ್ಟಂಟ್ ಹಾಕಿ, ಅವರ ರಕ್ಷಣೆ ಮಾಡಲು ಸಾಹಸ ನಿರ್ದೇಶಕರು ಇರಬೇಕು. ಹಾಗೆಯೇ, ಹಸಿಬಿಸಿ ದೃಶ್ಯದಲ್ಲಿ ನಟಿಸುವಾಗ ನಾಯಕ-ನಾಯಕಿಯರು ಮಾನಸಿಕವಾಗಿ, ದೈಹಿಕವಾಗಿ ಕಂಫರ್ಟ್ ಆಗಿ ಇರಬೇಕಾಗುತ್ತದೆ. ಈ ವಾತಾವರಣವನ್ನು ಹಾಟ್ ಡೈರೆಕ್ಟರ್ ನಿರ್ಮಾಣ ಮಾಡ್ತಾರೆ. ಅದಕ್ಕಾಗಿ ಅವರು ಬೇಕು ಎಂದು ಸಮರ್ಥನೆ ನೀಡಿದರು.

ಇದನ್ನೂ ಓದಿ: Nora Fatehi : ನನ್ನ ಜೊತೆ ಟ್ರಿಪ್ ಬರ್ತಿರಾ ? ಮಾದಕ‌ಬೆಡಗಿ ನೋರಾ ಫತೇಹಿ ಆಹ್ವಾನಕ್ಕೆ ಅಭಿಮಾನಿಗಳು ಖುಷ್

5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?

( Hot Scene Shoot Gehraiyaan director Deepika Padukone Siddhant Kissing Scene)

Comments are closed.